ರಾಹುಲ್, ಖರ್ಗೆ, ಸಿದ್ದು, ಡಿಕೆಶಿ ಇರುವವರೆಗೂ ಗ್ಯಾರಂಟಿ ಕಸಿಯುವ ಮಗ ಹುಟ್ಟಲ್ಲ: ಸುರ್ಜೇವಾಲಾ
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬಡವರ ಜೇಬಿಗೆ ನೇರವಾಗಿ ಹಣ ಹೋಗುತ್ತಿದೆ. ಇದರಿಂದ ಜನರ ಕಲ್ಯಾಣ ಆಗುತ್ತಿದೆ. ಹೀಗಾಗಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿ ರಾಜ್ಯದ ಮಹಿಳೆಯರಿಗೆ ಸಿಗುವ ಎರಡು ಸಾವಿರ, ಅನ್ನಭಾಗ್ಯ ಯೋಜನೆ ಅಕ್ಕಿ ಹಣ, 200 ಯುನಿಟ್ ಉಚಿತ ವಿದ್ಯುತ್, ನಿರುದ್ಯೋಗಿ ಯುವಕರ ನಿರುದ್ಯೋಗ ಭತ್ಯೆ ಕಸಿಯಲು ಪ್ರಯತ್ನಿಸುತ್ತಿದೆ ಬಿಜೆಪಿ ಯತ್ನಿಸುತ್ತಿದೆ: ರಣದೀಪ್ ಸಿಂಗ್ ಸುರ್ಜೇವಾಲಾ
ಹಾಸನ(ಡಿ.06): 'ಬಿಜೆಪಿಯವರು ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮು ಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೇಲೆ ಮಾತ್ರ ದಾಳಿ ಮಾಡುತ್ತಿಲ್ಲ. ಅವರು ನೀಡುತ್ತಿರುವ ಗ್ಯಾರಂಟಿ ಯೋಜನೆಗಳನ್ನು ಕಸಿದು ಬಡವರು, ಕೂಲಿ ಕಾರ್ಮಿಕರು, ರೈತರ ಮೇಲೆ ದಾಳಿಗೆ ಯತ್ನಿಸುತ್ತಿದ್ದಾರೆ' ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ.
ಇದೇ ವೇಳೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಇರು ವವರೆಗೂ ನಿಮ್ಮ ಗ್ಯಾರಂಟಿ ಯೋಜನೆಗಳನ್ನು ಕಸಿಯುವಂತಹ ಮಗ ಹುಟ್ಟುವುದಿಲ್ಲ ಎಂದು ಭರವಸೆ ನೀಡಿದರು.
ಹಾಸನದಲ್ಲಿ ಗುರುವಾರ ನಡೆದ ಜನ ಕಲ್ಯಾಣೋತ್ಸವ ಸಮಾವೇಶದಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬಡವರ ಜೇಬಿಗೆ ನೇರವಾಗಿ ಹಣ ಹೋಗುತ್ತಿದೆ. ಇದರಿಂದ ಜನರ ಕಲ್ಯಾಣ ಆಗುತ್ತಿದೆ. ಹೀಗಾಗಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿ ರಾಜ್ಯದ ಮಹಿಳೆಯರಿಗೆ ಸಿಗುವ ಎರಡು ಸಾವಿರ, ಅನ್ನಭಾಗ್ಯ ಯೋಜನೆ ಅಕ್ಕಿ ಹಣ, 200 ಯುನಿಟ್ ಉಚಿತ ವಿದ್ಯುತ್, ನಿರುದ್ಯೋಗಿ ಯುವಕರ ನಿರುದ್ಯೋಗ ಭತ್ಯೆ ಕಸಿಯಲು ಪ್ರಯತ್ನಿಸುತ್ತಿದೆ ಬಿಜೆಪಿ ಯತ್ನಿಸುತ್ತಿದೆ ಎಂದು ದೂರಿದರು.
ನನ್ನನ್ನೇ ಮಂತ್ರಿ ಮಾಡಲು ವರಿಷ್ಠರ ಬಳಿ ಹೇಳಿ: ಶಾಸಕ ಶಿವಲಿಂಗೇಗೌಡ
ನಿಮ್ಮ ಹೊಟ್ಟೆಗೇಕೆ ಬೆಂಕಿ ಬೀಳುತ್ತಿದೆ?
ಪ್ರಧಾನಿ ಮೋದಿ ಅವರು ಶ್ರೀಮಂತ ಕಂಪನಿಗಳ ತೆರಿಗೆಯನ್ನು 33%ನಿಂದ 24% ಕಡಿತಗೊಳಿಸಿ ಅವರ ಜೇಬಿಗೆ 3 ಲಕ್ಷ ಕೋಟಿ ರು. ಹಾಕಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ರಾಜ್ಯದ ಬಡ ಜನರ ಜೇಬಿಗೆ 56 ಸಾವಿರ ಕೋಟಿ ಹಾಕಿದರೆ ನಿಮ್ಮ ಹೊಟ್ಟೆಗೆ ಬೆಂಕಿ ಯಾಕೆ ಬೀಳುತ್ತಿದೆ? ಕೇಂದ್ರ ಸರ್ಕಾರ ದೊಡ್ಡ ಕೈಗಾರಿಕೆ ಮಾಲೀಕರ 17 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಹೀಗಿದ್ದರೂ ನಮ್ಮ ಸರ್ಕಾರ ಜನರ ಜೇಬಿಗೆ ಹಣ ಹಾಕಿದರೆ ಯಾಕೆ ಅಸೂಯೆ ಪಡುತ್ತೀರಿ ಎಂದು ಸುರ್ಜೇವಾಲಾ ಪ್ರಶ್ನಿಸಿದರು.
ದೇವೇಗೌಡ್ರು ಒಕ್ಕಲಿಗ ನಾಯಕರನ್ನು ಬೆಳೆಸಿಲ್ಲ: ಸಿದ್ದು ಗುಡುಗು
ಹಾಸನ: ಸಿದ್ದರಾಮಯ್ಯನನ್ನು ಡಿಸಿಎಂ ಮಾಡಿ ರಾಜಕೀಯವಾಗಿ ಬೆಳೆಸಿದೆ ಎಂದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಹೇಳುತ್ತಾ ಬಂದಿದ್ದಾರೆ. ಆದರೆ, ನಾನು ಹಾಗೂ ಜಾಲಪ್ಪ ಬೆನ್ನಿಗೆ ನಿಲ್ಲದಿದ್ದರೆ ರಾಮಕೃಷ್ಣ ಹೆಗಡೆ ಅವರ ಪೈಪೋಟಿ ಎದುರಿಸಿ ದೇವೇಗೌಡ ಅವರು ಸಿಎಂ ಆಗುತ್ತಿರಲಿಲ್ಲ. ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿದೇ ನಾವು! ಹೀಗಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಕಾಲದ ಗುರು ಎಂದೇ ಬಿಂಬಿತರಾಗಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ತಿರುಗೇಟು ನೀಡಿದ್ದಾರೆ. ದೇವೇಗೌಡ ಅವರೇ ರಾಜಕೀಯ ಕಾಲ ಮುಗಿಯಿತು ಎಂದು ಅಬ್ಬರಿಸಿದ್ದಾರೆ.
ಕೆಪಿಸಿಸಿ ಮತ್ತು ಸ್ವಾಭಿಮಾನಿ ಸಂಘಟನೆ ಜಂಟಿಯಾಗಿ ಹಾಸನದಲ್ಲಿ ಆಯೋಜಿಸಿದ್ದ ಜನ ಕಲ್ಯಾಣ ಸಮಾವೇಶ ಅಕ್ಷರಶಃ ಸಿದ್ದರಾಮೋತ್ಸವವಾಗಿ ಪರಿವರ್ತಿತವಾದರೆ, ಈ ಉತ್ಸವದಲ್ಲಿ ಸಿದ್ದರಾಮಯ್ಯ ಎಚ್.ಡಿ.ದೇವೇಗೌಡ, ಜೆಡಿಎಸ್-ಬಿಜೆಪಿ ಮೈತ್ರಿ ಕೂಟದ ವಿರುದ್ಧ ವಾಗ್ದಾಳಿ ನಡೆಸಿದರು.
ಜೆಡಿಎಸ್‌ನ ಭದ್ರಕೋಟೆ ಹಾಸನದಲ್ಲಿ ನಿಂತು ದೇವೇಗೌಡರನ್ನೇ ಕೇಂದ್ರವಾಗಿಸಿ ವಾಕ್ ಪ್ರಹಾರ ಮಾಡಿದ ಸಿಎಂ, ದೇವೇಗೌಡ ಅವರು ನನ್ನನ್ನು ಬೆಳೆಸಿದೆ ಎನ್ನುತ್ತಾರೆ. ನನ್ನನ್ನು ಬಿಡಿ ಅವರು ಖುದ್ದು ಒಕ್ಕಲಿಗ ನಾಯಕರನ್ನೇ ಬೆಳೆಸಲಿಲ್ಲ ಎಂದರು.
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ: ಬಿಜೆಪಿ-ಜೆಡಿಎಸ್ ವಿರುದ್ಧ ಡಿಸಿಎಂ ವಾಗ್ದಾಳಿ
ದೇವೇಗೌಡ, ಕುಮಾರಸ್ವಾಮಿ ಯಾವ ಒಕ್ಕಲಿಗ ನಾಯಕರನ್ನೂ ಬೆಳೆಸಲಿಲ್ಲ. ಬಚ್ಚೇಗೌಡರು, ವೈ.ಕೆ. ರಾಮಯ್ಯ, ಬೈರೇಗೌಡರು, ಕೃಷ್ಣಪ್ಪ, ಚಲುವರಾಯ ಸ್ವಾಮಿ ಸೇರಿ ತಮ್ಮೊಂದಿಗೆ ಇದ್ದ ಒಕ್ಕಲಿಗ ನಾಯಕರನ್ನು ರಾಜಕೀಯವಾಗಿ ಮುಗಿಸಲು ಯತ್ನಿಸಿದರು. ಇದಕ್ಕಾಗಿ ಒಕ್ಕಲಿಗ ನಾಯಕರಾದ ದಿ.ಎಂ. ಟಿ.ಕೃಷ್ಣಪ್ಪ, 'ದೇವೇಗೌಡ ಅವರ ಅಂತ್ಯ ಅವರೇ ನೋಡುತ್ತಾರೆ' ಎಂದಿದ್ದರು. ಈಗ ನಿಜವಾಗುತ್ತಿದೆ. ಒಕ್ಕಲಿಗ ನಾಯಕರನ್ನು ರಾಜಕೀಯವಾಗಿ ಮುಗಿಸಿದ್ದರ ಫಲ ದೇವೇಗೌಡರು ನೋಡುವಂತಾಗಿದೆ ಎಂದರು.
ಉಪ ಚುನಾವಣೆ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ನನ್ನ ಗರ್ವಭಂಗ ಮಾಡುತ್ತೇನೆ, ಕಾಂಗ್ರೆಸ್ ಸರ್ಕಾರ ಕಿತ್ತೊಗೆಯುತ್ತೇನೆ ಎಂದಿದ್ದರು. ನನಗಿಂತ 15 ವರ್ಷ ದೊಡ್ಡವರಾದ ಅವರು ವಯಸ್ಸಿಗೆ ತಕ್ಕಂತೆ ಮಾತನಾಡಬೇಕಿತ್ತು. ನಾನೆಂದೂ ಅಹಂಕಾರ ಪಟ್ಟಿಲ್ಲ. ಹೀಗಾಗಿ ನನ್ನ ಗರ್ವಭಂಗ ಆಗಲು ಜನರು ಬಿಡುವುದಿಲ್ಲ ಎಂದರು.