ಬೀದರ್‌ ಜಿಲ್ಲೆಯ ಭಾಲ್ಕಿ ಪಟ್ಟಣದ ಇಶಾನ್‌ ಕಾಲೋನಿಯಲ್ಲಿ  ಗಣೇಶ ಶಾಲಿವಾನ ಯರಬಾಗೆ ಕಾಂಗ್ರೆಸ್‌ ಪರ ಪ್ರಚಾರ ನಡೆಸುತ್ತಿದ್ದರು. ಆಗ ಮೂವರು ಯುವಕರು ಯರಬಾಗೆ ಮೇಲೆ ಏಕಾಏಕಿ ದಾಳಿ ಮಾಡಿ, ಹೊಟ್ಟೆ ಮತ್ತು ಎದೆಯ ಭಾಗಕ್ಕೆ ಚಾಕುವಿನಿಂದ ಇರಿದು ಗಾಯಗೊಳಿಸಿ, ಪರಾರಿಯಾಗಿದ್ದಾರೆ. 

ಭಾಲ್ಕಿ(ಏ.23):  ಬೀದರ್‌ ಜಿಲ್ಲೆ ಭಾಲ್ಕಿಯಲ್ಲಿ ಶನಿವಾರ ಕಾಂಗ್ರೆಸ್‌ ಕಾರ್ಯಕರ್ತನೊಬ್ಬನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಲಾಗಿದೆ.

ಮಾನಹಳ್ಳಿ ಗ್ರಾಮದ ಗಣೇಶ ಶಾಲಿವಾನ ಯರಬಾಗೆ (23) ಗಾಯಗೊಂಡ ಯುವಕ. ಸಂಜೆ 6 ಗಂಟೆ ವೇಳೆ ಪಟ್ಟಣದ ಇಶಾನ್‌ ಕಾಲೋನಿಯಲ್ಲಿ ಅವರು ಕಾಂಗ್ರೆಸ್‌ ಪರ ಪ್ರಚಾರ ನಡೆಸುತ್ತಿದ್ದರು. ಆಗ ಮೂವರು ಯುವಕರು ಅವರ ಮೇಲೆ ಏಕಾಏಕಿ ದಾಳಿ ಮಾಡಿ, ಹೊಟ್ಟೆ ಮತ್ತು ಎದೆಯ ಭಾಗಕ್ಕೆ ಚಾಕುವಿನಿಂದ ಇರಿದು ಗಾಯಗೊಳಿಸಿ, ಪರಾರಿಯಾಗಿದ್ದಾರೆ. ಗಾಯಗೊಂಡ ಅವರಿಗೆ ತಕ್ಷಣವೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದ್‌ಗೆ ಕಳುಹಿಸಲಾಗಿದೆ.

ದೇವೇಗೌಡರಂತೆ ಕುಳಿತಲ್ಲೆ ಟಿಕೆಟ್‌ ಘೋಷಣೆ ಬಿಜೆಪಿಯಲ್ಲಿ ನಡೆಯಲ್ಲ: ಸಂಸದ ತೇಜಸ್ವಿ ಸೂರ್ಯ

ಔರಾದ್‌ ಮೂಲದ ರಾಬೀನ್‌ ಸೂರ್ಯಕಾಂತ್‌, ಪಟ್ಟಣದ ನಿವಾಸಿ ಸಂಗಮೇಶ ಸ್ವಾಮಿ, ಖಟಕ್‌ ಚಿಂಚೋಳಿ ಗ್ರಾಮದ ಸಂಗಮೇಶ ಚನಶೆಟ್ಟಿ ಹಲ್ಲೆ ನಡೆಸಿದವರು ಎಂದು ಗುರುತಿಸಲಾಗಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ವಿಷಯ ತಿಳಿದು ಶಾಸಕ ಈಶ್ವರ ಖಂಡ್ರೆಯವರು ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿದರು. ಈ ವೇಳೆ ಮಾತನಾಡಿ, ಸೋಲಿನ ಭಯದಿಂದ ಬಿಜೆಪಿಯವರು ಈ ರೀತಿ ಗೂಂಡಾವರ್ತನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.