Asianet Suvarna News Asianet Suvarna News

ಹಾನಗಲ್‌ ಉಪಚುನಾವಣೆಯಲ್ಲಿ ಮಾನೆ ಗೆಲುವು ಖಚಿತ : ವಿನಯ್

  • ಸರ್ವ ಸಮುದಾಯಗಳನ್ನು ಸಮಭಾವದಿಂದ ಗೌರವಿಸುವ ಕಾಂಗ್ರೆಸ್‌ ಪಕ್ಷ 
  • ಕಾಂಗ್ರೆಸ್‌ ಪಕ್ಷ ಹಾನಗಲ್‌ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲಿದೆ
Srinivas mane will win in hanagal by Election Says Vinay kulkatni snr
Author
Bengaluru, First Published Oct 25, 2021, 6:57 AM IST

 ಶಿಗ್ಗಾಂವಿ (ಅ.25):  ಸರ್ವ ಸಮುದಾಯಗಳನ್ನು ಸಮಭಾವದಿಂದ ಗೌರವಿಸುವ ಕಾಂಗ್ರೆಸ್‌ (Congress) ಪಕ್ಷ ಹಾನಗಲ್‌ ಉಪಚುನಾವಣೆಯಲ್ಲಿ (Hanagal By Election) ಗೆಲುವು ಸಾಧಿಸಲಿದೆ. ಜತೆಗೆ ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವ ಶ್ರೀನಿವಾಸ್‌ ಮಾನೆ (Shrinivas mane) ಗೆಲುವು ಖಚಿತ ಎಂದು ಮಾಜಿ ಸಚಿವ ವಿನಯ್‌ ಕುಲಕರ್ಣಿ (Vinay Kulakarni) ವಿಶ್ವಾಸ ವ್ಯಕ್ತಪಡಿಸಿದರು.

ಭಾನುವಾರ ತಾಲೂಕಿನ ಗಂಗೇಭಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾನಗಲ್ಲ ಕ್ಷೇತ್ರದಲ್ಲಿ ಮಾನೆ (mane) ಅವರು ಜನರೊಂದಿಗೆ ಸದಾ ಒಡನಾಟ ಉಳಿಸಿಕೊಂಡಿದ್ದಾರೆ. ಜನರ ಸಂಕಷ್ಟಗಳಿಗೆ ಸ್ಪಂದಿಸಿ ಉತ್ತಮ ಕಾರ್ಯ ಮಾಡಿದ್ದಾರೆ. ಬಿಜೆಪಿ (BJP) ಎಷ್ಟೇ ಪ್ರಯತ್ನಿಸಿದರೂ ಅವರಿಗೆ ಸೋಲು ಅನಿವಾರ್ಯ. ವಿಭಿನ್ನ ಸಂಸ್ಕೃತಿ ಹಾಗೂ ಭಾವನೆ ಹೊಂದಿರುವ ನಮ್ಮ ದೇಶದಲ್ಲಿ ಜಾತಿ ರಾಜಕೀಯ (Politics) ಬಹಳ ದಿನ ನಡೆಯಲ್ಲ. ಈ ಹಿನ್ನೆಲೆಯಲ್ಲಿ ಮಾನೆ ಅವರು ಮೆರಿಟ್‌ ಮೇಲೆ ಗೆಲುವು ಸಾಧಿಸುವರು ಎಂದು ಹೇಳಿದರು.

'ಉಪ ಚುನಾವಣೆಯಲ್ಲಿ ಬಿಜೆಪಿ ಸುನಾಮಿ: ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಧೂಳೀಪಟ'

ಕಾಂಗ್ರೆಸ್‌ (Congress) ವಿರುದ್ಧ ಆಪಾದನೆ ಮಾಡುವ ಬಿಜೆಪಿ (BJP) ನಾಯಕರ ಅಸಲಿ ಬಣ್ಣ ಕೆಲವೇ ದಿನಗಳಲ್ಲಿ ತಿಳಿಯಲಿದೆ. ವಿಶ್ವಗುರು ಬಸವಣ್ಣನವರ ತತ್ವದ ಆಧಾರದಲ್ಲಿ ಮುನ್ನಡೆಯುವ ಕಾಂಗ್ರೆಸ್‌ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ. ರಾಜ್ಯದ ಜನರು ಬದಲಾವಣೆ ಬಯಸಿದ್ದಾರೆ. ಅದು ಭವಿಷ್ಯದಲ್ಲಿ ತಿಳಿಯಲಿದೆ ಎಂದರು.

 ಬಿಜೆಪಿ ಅಭ್ಯರ್ಥಿ ಗೆಲ್ಲುವುದಿಲ್ಲ ಎನ್ನುವುದು ಪಕ್ಕಾ  

 ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ್‌ ಮಾನೆ (Shrinivas mane) ಹಾನಗಲ್‌ ಕ್ಷೇತ್ರದ ಮನೆಯ ಮಗ ಎನಿಸಿದ್ದಾರೆ. ಪ್ರತಿಯೊಂದು ಗ್ರಾಮಗಳಲ್ಲಿಯೂ ಅವರಿಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಇಲ್ಲಿ ಬಿಜೆಪಿ (BJP) ಅಭ್ಯರ್ಥಿ ಗೆಲ್ಲುವುದಿಲ್ಲ ಎನ್ನುವುದು ಕನ್ಫಮ್‌  ಆಗಿದ್ದರಿಂದಲೇ ಸಿಎಂ ತಮ್ಮ ಮಂತ್ರಿ ಮಂಡಲದೊಂದಿಗೆ ಠಿಕಾಣಿ ಹೂಡಿದ್ದಾರೆ ಎಂದು ಮಾಜಿ ಸಚಿವ ಸಂತೋಷ್‌ ಲಾಡ್‌ ಹೇಳಿದರು.

ಹಾನಗಲ್‌ ಉಪ ಚುನಾವಣೆ (By Election) ಹಿನ್ನೆಲೆಯಲ್ಲಿ ಕ್ಷೇತ್ರದ ಆಡೂರು, ಶೀಗಿಹಳ್ಳಿ, ಸಿಂಗಾಪುರ, ಹೇರೂರು, ಕಲಕೇರಿ, ಶಂಕರಿಕೊಪ್ಪ ಸೇರಿದಂತೆ ಹಲವು ಗ್ರಾಮಗಳಲ್ಲಿ ಮನೆ, ಮನೆಗಳಿಗೆ ತೆರಳಿ ಮತಯಾಚಿಸಿ ಮಾತನಾಡಿದರು.

ಶ್ರೀನಿವಾಸ್‌ ಮಾನೆ ಅವರು ಕಾಲೇಜು ದಿನಗಳಿಂದಲೇ ನಾಯಕತ್ವ ಗುಣ ಬೆಳೆಸಿಕೊಂಡಿದ್ದಾರೆ. ಅವರಲ್ಲಿ ಮಾನವೀಯತೆಗೆ ತುಡಿಯುವ ಮನಸ್ಸಿದೆ. ಬಡವರ ಕಷ್ಟ-ಕಾರ್ಪಣ್ಯಗಳಿಗೆ ಕರಗುವ ಅವರು ಮೊದಲಿನಿಂದಲೂ ಕೈಲಾದಷ್ಟುನೆರವು ನೀಡುವ ಮೂಲಕ ಜನಾನುರಾಗಿಯಾಗಿದ್ದಾರೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೊಂದಲ ಮೂಡಿಸಿದ್ದರಿಂದ ಶ್ರೀನಿವಾಸ್‌ ಮಾನೆ ಅಲ್ಪ ಮತಗಳಿಂದ ಪರಾಭವಗೊಂಡಿದ್ದರು. ಪರಾಭವಗೊಂಡರೂ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ವಿಶೇಷವಾಗಿ ಜನ ಕಷ್ಟದ ದಿನ ದೂಡುತ್ತಿದ್ದಾಗ ಅವರ ಜತೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಾರೆ ಎಂದರು.

Follow Us:
Download App:
  • android
  • ios