Asianet Suvarna News Asianet Suvarna News

ಬಿಜೆಪಿಯೇತರ ಕೂಟ ಅಧಿಕಾರಕ್ಕೆ ಬಂದರೆ ಹಿಂದುಳಿದ ರಾಜ್ಯಗಳಿಗೆ ವಿಶೇಷ ಸ್ಥಾನ: ನಿತೀಶ್‌ ಎಲೆಕ್ಷನ್‌ ಆಫರ್‌

ಎನ್‌ಡಿಎ ಕೂಟದಿಂದ ಹೊರಬಂದ ಬಳಿಕ ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಪ್ರಬಲ ಕೂಟ ರಚಿಸಲು ಪ್ರಯತ್ನಿಸುತ್ತಿರುವ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಲೋಕಸಭೆಯ ಸಾರ್ವತ್ರಿಕ ಚುನಾವಣೆಗೂ ಮೊದಲೇ ಬಂಪರ್‌ ಭರವಸೆ ನೀಡಿದ್ದಾರೆ.

Special status to backward states if non-BJP party comes to power, Bihar cm Nitish kumar election offer akb
Author
First Published Sep 16, 2022, 10:02 AM IST

ಪಾಟ್ನಾ: ಎನ್‌ಡಿಎ ಕೂಟದಿಂದ ಹೊರಬಂದ ಬಳಿಕ ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಪ್ರಬಲ ಕೂಟ ರಚಿಸಲು ಪ್ರಯತ್ನಿಸುತ್ತಿರುವ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಲೋಕಸಭೆಯ ಸಾರ್ವತ್ರಿಕ ಚುನಾವಣೆಗೂ ಮೊದಲೇ ಬಂಪರ್‌ ಭರವಸೆ ನೀಡಿದ್ದಾರೆ.

ದೇಶದಲ್ಲಿ ಬಿಜೆಪಿಯೇತರ ಕೂಟ ಅಧಿಕಾರಕ್ಕೆ ಬಂದರೆ, ಹಿಂದುಳಿದಿರುವ ಎಲ್ಲ ರಾಜ್ಯಗಳಿಗೂ ವಿಶೇಷ ಸ್ಥಾನಮಾನ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಗಮನಾರ್ಹ ಎಂದರೆ, ಜಾರ್ಖಂಡ್‌ (Jharkhand) ರಚನೆಯಾದ ಬಳಿಕ ಖನಿಜ ಸಂಪನ್ಮೂಲ ಹಾಗೂ ಆದಾಯ ನಷ್ಟವಾಗಿರುವುದರಿಂದ ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ನಿತೀಶ್‌ ಕುಮಾರ್ (Nithish kumar) ಪ್ರತಿಪಾದಿಸಿಕೊಂಡು ಬಂದಿದ್ದಾರೆ. ಅದು ಈವರೆಗೂ ಈಡೇರಿಲ್ಲ. ಈ ನಡುವೆ, ಎಲ್ಲ ಹಿಂದುಳಿದಿರುವ ರಾಜ್ಯಗಳಿಗೂ ಅಂತಹದ್ದೊಂದು ಸ್ಥಾನ ಕಲ್ಪಿಸುವ ಆಶ್ವಾಸನೆಯನ್ನು ನೀಡಿದ್ದಾರೆ.  ಕೇಂದ್ರದಲ್ಲಿ ಮುಂದಿನ ಸರ್ಕಾರವನ್ನು ರಚಿಸುವ ಅಧಿಕಾರ ನಮಗೆ ಸಿಕ್ಕರೆ, ಎಲ್ಲ ಹಿಂದುಳಿದ (backward state) ರಾಜ್ಯಗಳಿಗೂ ವಿಶೇಷ ಸ್ಥಾನಮಾನ ನೀಡಲಾಗುತ್ತದೆ. ಅದನ್ನು ನೀಡದೇ ಇರುವುದಕ್ಕೆ ಯಾವುದೇ ಕಾರಣಗಳಿಲ್ಲ ಎಂದಿದ್ದಾರೆ.

ಏನಿದು ವಿಶೇಷ ಸ್ಥಾನ?:

ವಿಶೇಷ ಸ್ಥಾನಮಾನ ಸಿಕ್ಕರೆ, ಆ ರಾಜ್ಯಕ್ಕೆ ಸಿಗುವ ಅನುದಾನದಲ್ಲಿ (grant) ಕೇಂದ್ರ ಶೇ.90 ಹಾಗೂ ರಾಜ್ಯ ಶೇ.10ರಷ್ಟು ಭರಿಸಬೇಕಾಗುತ್ತದೆ. ಹೀಗಾಗಿ ಹೆಚ್ಚಿನ ಕೇಂದ್ರೀಯ ಅನುದಾನ ಬಳಸಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಬಹುದಾಗಿದೆ. ಸದ್ಯ ದೇಶದಲ್ಲಿ ಅರುಣಾಚಲಪ್ರದೇಶ (Arunachala Pradesh), ಅಸ್ಸಾಂ (Assam), ಹಿಮಾಚಲಪ್ರದೇಶ (Himachala Pradesh), ಜಮ್ಮು-ಕಾಶ್ಮೀರ (Jammu Kashmir), ಮಣಿಪುರ (Manipura), ಮೇಘಾಲಯ (Meghalaya), ಮಿಜೋರಂ (Mizoram), ನಾಗಾಲ್ಯಾಂಡ್‌ (Nagaland), ಸಿಕ್ಕಿಂ (sikkim)  ಹಾಗೂ ಉತ್ತರಾಖಂಡ ಸೇರಿ 11 ರಾಜ್ಯಗಳಿಗೆ ವಿಶೇಷ ಸ್ಥಾನಮಾನವಿದೆ (Special status). ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ನೀಡಲು ಅವಕಾಶವಿಲ್ಲ. ಆದಾಗ್ಯೂ ಸದ್ಯ ನಿಷ್ಕ್ರಿಯವಾವಾಗಿರುವ ಯೋಜನಾ ಆಯೋಗದ ಅಂಗಸಂಸ್ಥೆ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಶಿಫಾರಸು ಆಧರಿಸಿ, ವಿವಿಧ ಮಾನದಂಡ ಪರಿಗಣಿಸಿ 11 ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಇದೀಗ 14ನೇ ಹಣಕಾಸು ಆಯೋಗದ ವರದಿ ಬಳಿಕ ವಿಶೇಷ ಸ್ಥಾನಮಾನ ನೀಡುವ ಪರಿಪಾಠ ಅಂತ್ಯವಾಗಿದೆ. ಆದಾಗ್ಯೂ ಬಿಹಾರ (bihar), ಒಡಿಶಾ (Odisha), ಜಾರ್ಖಂಡ್‌ಗಳಿಂದ (Jharkhand) ತೀವ್ರ ಒತ್ತಡವಿದೆ.

ನಿತೀಶ್ ಕುಮಾರ್‌ ನಿಗೂಢ ಹೆಜ್ಜೆ ಹಿಂದಿನ ರಹಸ್ಯಗಳೇನು?

ಮುಂದಿನ ಕರ್ನಾಟಕ ವಿಧಾನಸಭೆ ಚುನಾವಣೆ ಮಧ್ಯೆಯೇ 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯ ಕಾವು ಶುರುವಾಗಿದೆ. ಬೆಲೆ ಏರಿಕೆ ಸೇರಿದಂತೆ ನಾನಾ ವಿಚಾರಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಜನ ಅಸಮಾಧಾನಗೊಂಡಿದ್ದಾರೆ. ಈ ಮೊದಲ ಎರಡು ಸಲ ಮೋದಿ ಮೇಲಿದ್ದ ಅಭಿಮಾನ ಈಗ ಉಳಿದಿಲ್ಲ.ಈ ಹಿನ್ನೆಲೆಯ್ಲಲಿ ಆಡಳಿತ ವಿರೋಧಿ ಅಲೆ ಶುರುವಾಗುತ್ತಿದೆ. ಇದರ ಲಾಭ ಪಡೆದುಕೊಳ್ಳಲು ಕಾಂಗ್ರೆಸ್ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಆರಂಭಿಸಿದೆ. ಮತ್ತೊಂದೆಡೆ ಮುಂದಿನ ಲೋಕಸಭಾ ಚುನಾವಣಾ ವೇಳೆಗೆ  ಪರ್ಯಾಯ ರಂಗ ಇನ್ನಷ್ಟ ಬಲಗೊಳಿಸಲು ಕೆಲ ನಾಯಕರು ಮುಂದಾಗಿದ್ದಾರೆ. .

ಮೋದಿ, ಶಾಗೆ ಶಾಕ್, ಬಿಜೆಪಿ ಸಖ್ಯ ತೊರೆದಿದ್ದೇಕೆ ಬಿಹಾರ ಸಿಎಂ ನಿತೀಶ್ ಕುಮಾರ್..?

ಕೆಲ ದಿನಗಳ ಹಿಂದಷ್ಟೇ ಪ್ರಾದೇಶಿಕ ಪಕ್ಷದ ನಾಯಕರು ಪರಸ್ಪರ ಭೇಟಿಯಾಗಿ ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್‌ಡಿ ದೇವೇಗೌಡ ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರ ಪರವಾಗಿ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅಖಾಡಕ್ಕಿದಿದ್ದಾರೆ. ಇದಕ್ಕೆ ಪೂರಕವೆಂಬಂತೆ ಎನ್‌ಡಿಎ ಮೈತ್ರಿಕೂಟದಿಂದ ಆಚೆ ಬಂದಿರುವ ನಿತೀಶ್ ಕುಮಾರ್ ಅವರನ್ನು ಕಳೆದ ವಾರವಷ್ಟೇ ಕುಮಾರಸ್ವಾಮಿ ಭೇಟಿ ಮಾಡಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲೂ ಕುತೂಹಲ ಹಾಗೂ ಸಂಚಲನ ಮೂಡಿಸಿದೆ.

Follow Us:
Download App:
  • android
  • ios