ಮೇಲ್ಮನೆಯಲ್ಲಿ ಕಾಗದರಹಿತ ಕಲಾಪಕ್ಕೆ ಕ್ರಮ: ಹೊರಟ್ಟಿ

* ಕಲಾಪ, ಪ್ರಶ್ನೋತ್ತರ ಡಿಜಿಟಲೀಕರಣ
* ಮೇಲ್ಮನೆ ಮಾದರಿ ಮಾಡಲು ಸಂಕಲ್ಪ
* ಲೋಕಸಭೆ ಸ್ಪೀಕರ್‌ ಜತೆ ಸಂವಾದ
 

Speaker Basavaraj Horatti talks over Digitization in Vidhanaparishat grg

ಬೆಂಗಳೂರು(ಜೂ.23): ವಿಧಾನ ಪರಿಷತ್ತನ್ನು ಮಾದರಿ ಮಾಡುವ ಸಂಕಲ್ಪ ತೊಡಲಾಗಿದೆ. ಸದನದ ಕಲಾಪ, ಪ್ರಶ್ನೋತ್ತರವನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ಇ-ವಿಧಾನ ಕಾರ್ಯಕ್ರಮದಡಿ ಕಾಗದರಹಿತ ಕಲಾಪಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಸಂಸದೀಯ ಕಾರ್ಯ ವಿಧಾನ ಕುರಿತು ಲೋಕಸಭಾಧ್ಯಕ್ಷರಾದ ಓಂ ಬಿರ್ಲಾರವರು ದೇಶದ ಎಲ್ಲಾ ರಾಜ್ಯಗಳ ವಿಧಾನ ಮಂಡಲಗಳ ಸಭಾಪತಿಗಳು ಹಾಗೂ ಸಭಾಧ್ಯಕ್ಷರೊಂದಿಗೆ ಮಂಗಳವಾರ ನಡೆಸಿದ ವರ್ಚುವಲ್‌ ಸಂವಾದದಲ್ಲಿ ಅವರು ಮಾತನಾಡಿದರು.

ಖಾಸಗಿ ಶಾಲಾ ಶಿಕ್ಷಕರಿಗೂ ಪ್ಯಾಕೇಜ್‌ ನೀಡಿ: ಸಿಎಂಗೆ ಹೊರಟ್ಟಿ ಪತ್ರ

114 ವರ್ಷಗಳ ಇತಿಹಾಸವಿರುವ ರಾಜ್ಯ ವಿಧಾನ ಪರಿಷತ್‌ನಲ್ಲಿ ಆಮೂಲಾಗ್ರ ಬದಲಾವಣೆಗೆ ಒತ್ತು ನೀಡಲಾಗಿದೆ. ಇ-ವಿಧಾನದಡಿ ಕಲಾಪ ಕಾರ್ಯವನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. ಬಜೆಟ್‌ ಅಧಿವೇಶನದಿಂದಲೇ ಪರಿಷತ್ತಿನ ಕಾರ್ಯಕಲಾಪಗಳನ್ನು ರಾಜ್ಯಸಭೆಯ ಮಾದರಿಯಲ್ಲಿ ಮಾಡಲಾಗುತ್ತಿದೆ. ನಿಗದಿತ ವೇಳೆ ಹಾಗೂ ಅವಧಿಯಲ್ಲಿಯೇ ಪ್ರಶ್ನೋತ್ತರ, ಶೂನ್ಯ ವೇಳೆ ಸೇರಿದಂತೆ ವಿವಿಧ ಕಾರ್ಯಕಲಾಪಗಳನ್ನು ನಡೆಸುವ ಮೂಲಕ ದೇಶದಲ್ಲಿಯೇ ಮಾದರಿಯಾಗಿದೆ ಎಂದರು. ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು, ಕಳೆದ ಎರಡು ವರ್ಷಗಳ ಅವಧಿಯಲ್ಲಿ ತಾವು ಸದನದ ಕಲಾಪ ನಡೆಸಿದ ರೀತಿ ಹಾಗೂ ಅನುಭವಗಳನ್ನು ಹಂಚಿಕೊಂಡರು.

ಕೋವಿಡ್‌ ನಡುವೆ 31 ದಿನ ಕಲಾಪ:

ಕೋವಿಡ್‌ ನಡುವೆಯೂ ಕಳೆದ ವರ್ಷ 31 ದಿವಸ ವಿಧಾನಸಭೆ ಕಲಾಪವನ್ನು ನಡೆಸಲಾಗಿದೆ. ಬೇರೆ ಯಾವ ರಾಜ್ಯದಲ್ಲೂ ಇಷ್ಟುದಿವಸ ಕಲಾಪ ನಡೆಸಿಲ್ಲ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಲೋಕ ಸಭಾಧ್ಯಕ್ಷ ಓಂ ಬಿರ್ಲಾ ಅವರಿಗೆ ಮಾಹಿತಿ ನೀಡಿದರು. ಸಂವಿಧಾನದ ಬಗ್ಗೆ 8 ದಿವಸ ಕಲಾಪದಲ್ಲಿ ಚರ್ಚೆಯಾಗಿದ್ದು, ಸುಮಾರು 50 ಸದಸ್ಯರು ಭಾಗವಹಿಸಿದ್ದರು. ಹಲವು ಅಮೂಲ್ಯ ಸಲಹೆಗಳನ್ನು ಸದಸ್ಯರು ನೀಡಿದರು ಎಂದು ಕಾಗೇರಿ ವಿವರಿಸಿದರು.
 

Latest Videos
Follow Us:
Download App:
  • android
  • ios