Asianet Suvarna News Asianet Suvarna News

ಬೆಳಗಾವಿ ಅಧಿವೇಶನ 2023: ಮೊದಲ ದಿನವೇ ಸಚಿವರ ಗೈರಿಗೆ ಸಭಾಪತಿ ಹೊರಟ್ಟಿ ಗರಂ

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಸೋಮವಾರದಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಿದೆ. ಕಲಾಪದ ಮೊದಲ ದಿನ ವಿಧಾನಪರಿಷತ್ತಿನಲ್ಲಿ ನಿಗದಿತ ಸಚಿವರು ಗೈರಾಗಿದ್ದಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಅವರು, ಸಭಾನಾಯಕ ಎನ್‌.ಎಸ್‌. ಬೋಸರಾಜು ಅವರನ್ನು ತರಾಟೆಗೆ ತೆಗೆದುಕೊಂಡರು. 

Speaker Basavaraj Horatti Slams Ministers Absence in Belagavi Winter Session First Day grg
Author
First Published Dec 5, 2023, 6:31 AM IST

ವಿಧಾನಪರಿಷತ್(ಡಿ.05):  ಚಳಿಗಾಲದ ಅಧಿವೇಶನದ ಮೊದಲ ದಿನದ ಕಾಲಪದ ಆರಂಭದಲ್ಲಿಯೇ ಸಭಾಪತಿ ಬಸವರಾಜ ಹೊರಟ್ಟಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಕಲಾಪಕ್ಕೆ ನಿಗದಿತ ಸಚಿವರು ಗೈರಾಗಿದ್ದಕ್ಕೆ ಗರಂ ಆದ ಸಭಾಪತಿಗಳು, ಕಲಾಪಕ್ಕೆ ಹಾಜರಾಗುವುದಕ್ಕಿಂತ ಬೇರೆ ಯಾವ ಕೆಲಸವೂ ಮುಖ್ಯವಾಗುವುದಿಲ್ಲ ಎಂದು ಹೇಳಿದರು.

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಸೋಮವಾರದಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಿದೆ. ಕಲಾಪದ ಮೊದಲ ದಿನ ವಿಧಾನಪರಿಷತ್ತಿನಲ್ಲಿ ನಿಗದಿತ ಸಚಿವರು ಗೈರಾಗಿದ್ದಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಅವರು, ಸಭಾನಾಯಕ ಎನ್‌.ಎಸ್‌. ಬೋಸರಾಜು ಅವರನ್ನು ತರಾಟೆಗೆ ತೆಗೆದುಕೊಂಡರು. ಪ್ರಶ್ನೋತ್ತರ ಕಲಾಪದ ಸಂದರ್ಭದಲ್ಲಿ ಸದಸ್ಯರೊಬ್ಬರು ಉನ್ನತ ಶಿಕ್ಷಣ ಸಚಿವರಿಗೆ ಕೇಳಿದ್ದ ಪ್ರಶ್ನೆಗೆ ಎನ್‌.ಎಸ್‌. ಬೋಸರಾಜು ಅವರು ಉತ್ತರಿಸಲು ಎದ್ದಾಗ, ಅದನ್ನು ತಡೆದ ಬಸವರಾಜ ಹೊರಟ್ಟಿ, ನಿಮ್ಮ ಸಚಿವರೆಲ್ಲ ಎಲ್ಲಿ ಹೋದರು? ನಿಗದಿಯಂತೆ ಯಾರ್ಯಾರು ಕಲಾಪಕ್ಕೆ ಹಾಜರಾಗಬೇಕೆಂದಿದೆ, ಅವರೆಲ್ಲ ಏಕೆ ಬಂದಿಲ್ಲ ಎಂದು ಪ್ರಶ್ನಿಸಿದರು.

ವಿಪಕ್ಷದ ಎಲ್ಲ ಪ್ರಶ್ನೆಗೆ ಕಾಂಗ್ರೆಸ್‌ ಸರ್ಕಾರ ಉತ್ತರಿಸಲಿದೆ: ಸಿಎಂ ಸಿದ್ದರಾಮಯ್ಯ

ಅದಕ್ಕೆ ಬೋಸರಾಜು ಅವರು, ನಿಗದಿತ ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಶೀಘ್ರದಲ್ಲಿ ಬರುತ್ತಾರೆ ಎಂದು ಹೇಳಿದರು. ಅದರಿಂದ ಮತ್ತಷ್ಟು ಸಿಟ್ಟಾದ ಸಭಾಪತಿಗಳು, ಸಚಿವರಿಗೆ ಅಧಿವೇಶನಕ್ಕಿಂತ ಬೇರೆ ಯಾವುದೂ ಮುಖ್ಯವಾಗುವುದಿಲ್ಲ. ಮಂಗಳವಾರದಿಂದ ನಿಗದಿತ ಸಚಿವರು ಕಲಾಪಕ್ಕೆ ಹಾಜರಾಗುವಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.

Latest Videos
Follow Us:
Download App:
  • android
  • ios