ಶೀಘ್ರದಲ್ಲೆ ಮತ್ತೊಂದು ಜೆಡಿಎಸ್ ಸೀನಿಯರ್ ವಿಕೆಟ್ ಪತನ : ಬಿಜೆಪಿ ಸೇರ್ಪಡೆ ಬಗ್ಗೆ ಕನ್ಫರ್ಮ್

  • ಶೀಘ್ರದಲ್ಲೆ ಮತ್ತೊಂದು ಜೆಡಿಎಸ್ ವಿಕೆಟ್ ಪತನವಾಗುವ ಬಗ್ಗೆ ಇದೀಗ ಸೂಚನೆ
  • ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಶೀಘ್ರ ದಳ ಪಾಳಯ ತೊರೆಯುವುದಾಗಿ ಅಧಿಕೃತ ಹೇಳಿಕೆ
soon Sandesh nagaraj To quit JDs snr

ಬೆಂಗಳೂರು (ಅ.01): ಶೀಘ್ರದಲ್ಲೆ ಮತ್ತೊಂದು ಜೆಡಿಎಸ್ (JDS) ವಿಕೆಟ್ ಪತನವಾಗುವ ಬಗ್ಗೆ ಇದೀಗ ಸೂಚನೆ ಸಿಕ್ಕಿದೆ.  ಈಗಾಗಲೇ ಜಿಟಿ ದೇವೇಗೌಡ (GT Devegowda) ಹಾಗು ಕೋಲಾರ ಶಾಸಕ ಶ್ರೀನಿವಾಸ (Shrinivas gowda) ತುದಿಗಾಲಲ್ಲಿ ನಿಂತಿದ್ದು, ಜೆಡಿಎಸ್ ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್ (sandesh nagaraj) ಶೀಘ್ರ ದಳ ಪಾಳಯ ತೊರೆಯುವುದಾಗಿ ಅಧಿಕೃತ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನ (Bengaluru) ಬಿಜೆಪಿ ಕಚೇರಿಯಲ್ಲಿಂದು ಮಾತನಾಡಿದ ಜೆಡಿಎಸ್ ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್  ನಾನು ಬಿಜೆಪಿಗೆ ಬರುತ್ತೇವೆ, ಮತ್ತೆ ಮೂರನೇ ಬಾರಿ ಮೈಸೂರು- ಚಾಮರಾಜನಗರ (Mysuru-chamarajanagar) ಸ್ಥಳೀಯ ಸಂಸ್ಥೆಯಿಂದ ಗೆದ್ದು ಬರುತ್ತೇನೆ ಎಂದು ಹೇಳಿದರು. 

ಜಿಟಿಡಿಗೆ ಕಾಂಗ್ರೆಸ್‌ ರತ್ನಗಂಬಳಿ : ಸೀಕ್ರೇಟ್ ಒಂದನ್ನು ಹೇಳಿ ಜೆಡಿಎಸ್ ತೊರೆಯುತ್ತಿರುವ ಗೌಡರು

ಜನವರಿ 5ರ ತನಕ ಜೆಡಿಎಸ್ ಸದಸ್ಯನಾಗಿ ಇರುತ್ತೇನೆ.  ಕಳೆದ ಒಂದೂವರೆ ವರ್ಷದಿಂದ ನಾನು ಜೆಡಿಎಸ್ ನಿಂದ ದೂರ ಉಳಿದಿದ್ದೇನೆ. ಯಾರ ಸಂಪರ್ಕದಲ್ಲಿಯೂ ಇಲ್ಲ ಎಂದು ಸ್ಪಷ್ಟಪಡಿಸಿದರು. 

ಇನ್ನು ಬಿಜೆಪಿ ಸೇರ್ಪಡೆ ವಿಚಾರವಾಗಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯಾಧ್ಯಕ್ಷರ ಭೇಟಿ ಮಾಡಬೇಕಿತ್ತು. ಇಬ್ಬರೂ ಸಿಗಲಿಲ್ಲ. ಮುಂದಿನ ದಿನಗಳಲ್ಲಿ  ಬಸವರಾಜ ಬೊಮ್ಮಾಯಿ,  ಯಡಿಯೂರಪ್ಪ ಅವರ ಜೊತೆ ಚರ್ಚೆ ಮಾಡಿ ಬರುತ್ತೇನೆ ಎಂದು ಸ್ಪಷ್ಟಪಡಿಸಿದರು. 

ಮುಂದಿನ ದಿನಗಳಲ್ಲಿ ಬಿಜೆಪಿಗೆ ಬರುವುದು ಖಚಿತವಾಗಿದ್ದು, ಸಿಎಂ ಬಸವರಾಜ ಬೊಮ್ಮಾಯಿ (Basavaraja bommai), ಅಧ್ಯಕ್ಷ ಕಟೀಲ್ ಮನಸ್ಸು ಮಾಡಬೇಕು ಎಂದರು. ಅಲ್ಲದೇ ಜೆಡಿಎಸ್ ತೊರೆದು ಬಿಜೆಪಿ ಸೇರುತ್ತೇನೆ ಎನ್ನುವುದನ್ನು ಸ್ಪಷ್ಟಪಡಿಸಿದರು ಸಂದೇಶ ನಾಗರಾಜ್ ನಾಗರಾಜ್.

ಮತ್ತೆ ಆಪರೇಷನ್ ಕಾಂಗ್ರೆಸ್ ಸದ್ದು ಮಾಡಿದ್ದು, ಈಗಾಗಲೇ ಇಬ್ಬರು ಜೆಡಿಎಸ್‌ ನಾಯಕರಿಗೆ ಕಾಂಗ್ರೆಸ್ ಗಾಳ ಹಾಕಿದೆ. ಕಾಂಗ್ರೆಸ್‌ಗೆ ಚಾಮುಂಡೇಶ್ವರಿ ಕ್ಷೇತ್ರದ  ಜಿಟಿ ದೇವೆಗೌಡ ಹಾಗು ಕೋಲಾರದ ಶ್ರೀನಿವಾಸ್‌ ಗೌಡ ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ.ಶೀಘ್ರದಲ್ಲೇ ಅವರ ಸೇರ್ಪಡೆಯೂ ಖಚಿತವಾಗಿದೆ. 

ದೇವೇಗೌಡ್ರು ಕ್ರಮಕ್ಕೆ ಸೂಚಿಸಿದ ಬೆನ್ನಲ್ಲೇ ಡಿಕೆಶಿ ಭೇಟಿಯಾದ ಜೆಡಿಎಸ್ ಶಾಸಕ

ಇಬ್ಬರು ಮುಖಂಡರು ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಭೇಟಿಯಾಗಿದ್ದಾರೆ. ಅಲ್ಲದೇ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ.

ಇಷ್ಟೇ ಅಲ್ಲದೇ ಆಪರೇಷನ್ ಹಸ್ತ ಜೋರಾಗಿಯೇ ನಡೆಯುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿ ಮುಖಂಡರನ್ನು ಭೇಟಿ ಮಾಡಿದ್ದು, ಸೇರ್ಪಡೆ ಲಿಸ್ಟ್‌ ಕೊಟ್ಟಿದ್ದಾರೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಜೋರಾಗಿದೆ. 

Latest Videos
Follow Us:
Download App:
  • android
  • ios