'ಸೋನಿಯಾ ನಮ್ಮ ತಾಯಿ, ರಾಹುಲ್ ನಮ್ಮ ಸಹೋದರ: ಗಾಂಧಿ ಕುಟುಂಬದ ಗುಲಾಮರು ಹೌದು'

ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಇಡಿ ವಿಚಾರಣೆ ವಿರೋಧಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ. ಈ ವೇಳೆ ಡಿಕೆಶಿ ಪ್ರತಿಕ್ರಿಯಿಸಿ, ಅವರು ಹೇಳ್ತಿದ್ದರಲ್ಲ ನಾವು ಗುಲಾಮರು ಅಂತ ಹೌದು ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

sonia gandhi Our Mother Rahul Gandhi Brother Says DK Shiakumar rbj

ಬೆಂಗಳೂರುಮ (ಜುಲೈ,26): ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ವಿಚಾರಣೆಗೊಳಪಡಿಸಿದ್ದು, ಇದನ್ನು ವಿರೋಧಿಸಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ಮಾಡುತ್ತಿದೆ. ಇತ್ತ ಬೆಂಗಳೂರಿನಲ್ಲೂ ಸಹ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿತು. 

ಈ ವೇಳೆ ಮಾತನಾಡಿದ ಡಿಕೆ ಶಿವಕುಮಾರ್, ಸೋನಿಯಾ ಗಾಂಧಿಯವರೇ ನಮ್ಮ ತಾಯಿ. ರಾಹುಲ್ ಗಾಂಧಿ ನಮ್ಮ‌ ಸಹೋದರ. ಅವರ ಜೊತೆ ನಾವು ಇದ್ದೇವೆ. ಹೆದರುಕೊಳ್ಳಬೇಡಿ.. ನಿಮ್ಗೂ ಒಳ್ಳೆಯ ಕಾಲ ಬರುತ್ತೆ.ದೇಶಕ್ಕಾಗಿ ಗಾಂಧಿ ಕುಟುಂಬ ಗುಲಾಮರು ಹೌದು ಎಂದರು.

ಹೈಕಮಾಂಡ್‌ ಅಂಗಳಕ್ಕೆ ಕರ್ನಾಟಕ ಕಾಂಗ್ರೆಸ್‌ ಒಳಜಗಳ: ಕೈ ಕಹಾನಿಯ ಇನ್‌ಸೈಡ್ ಸ್ಟೋರಿ ಇಲ್ಲಿದೆ

ಭಾರತಾಂಭೆ ಕೆಲಸ ಮಾಡಿದ ಗಾಂಧಿ ಕುಟುಂಬ. ಅವರು ಹೇಳ್ತಿದ್ದರಲ್ಲ ನಾವು ಗುಲಾಮರು ಅಂತ ಹೌದು.. ನಾವು ಭಾರತಾಂಬೆಯ ಕೆಲಸ ಮಾಡ್ತಿದ್ದೇವೆ. ಜನರ ಸೇವೆ ಮಾಡ್ತಿದ್ದೇವೆ, ಭಾರತ ತಾಯಿ ಸೇವೆ ಮಾಡ್ತಿದ್ದೇವೆ  ಭಾರತ ತಾಯಿ ಮಕ್ಕಳಾದ ನಾವು ಭಾರತದ  ಕೆಲಸ ಮಾಡಿತ್ತಿದ್ದೇವೆ ಎಂದು ಬಿಜೆಪಿಗೆ ತಿರಗೇಟು ನೀಡಿದರು.

ಈ ದೇಶದಲ್ಲಿ ಇಡಿ ಸಿಬಿಐಯನ್ನ ದುರ್ಬಳಕೆ ನಡೆಯುತ್ತಿದೆ. ಸಾವಿರಾರು ವಿರೋಧ ಪಕ್ಷದ ನಾಯಕರ ಬಾಯಿಯನ್ನ ಮುಚ್ಚಲು ಹೊರಟಿದ್ದಾರೆ.. ಬಿಜೆಪಿಯವರ ಒಬ್ಬರ ಮೇಲೆ ಕ್ರಮ ಕೈಗೊಂಡಿಲ್ಲ. ಅವರ ಪಕ್ಷದ ಒಬ್ಬರನ್ನೂ ಅರೆಸ್ಟ್ ಮಾಡಿಲ್ಲ, ವಿಚಾರಣೆ ಸಹ ಮಾಡಿಲ್ಲ.. ಸೋನಿಯಾ ಗಾಂಧಿಯವರು ಈಗ ವಿಚಾರಣೆ ಎದರಿಸುತ್ತಿದ್ದಾರೆ‌. ಅವರ ಜೊತೆಗೆ ಕಾಂಗ್ರೆಸ್ ಪಕ್ಷ ಇದೆ ಎಂದು ಹೇಳಿದರು.

ನ್ಯಾಷನಲ್ ಹೆರಾಲ್ಡ್ ನ್ನ ಸೋನಿಯಾ ಗಾಂಧಿ ಸ್ವಂತ ಆಸ್ತಿಯಂದು ಹೇಳಿಲ್ಲ. ನಮ್ಮ ನಾಯಕರಿಗೆ ಕಿರುಕುಳ ಕೊಟ್ಟು ಜೈಲಿಗೆ ಹಾಕಲಿ. ಪ್ರಧಾನಮಂತ್ರಿ ಸ್ಥಾನ ತ್ಯಾಗ ಮಾಡಿದ್ದ ಮಹಿಳೆಗೆ ಕಿರುಕುಳ ಕೊಡ್ತಿದ್ದಾರೆ‌. ಯಾವ ಆಸ್ತಿ ಮಾಡಿಕೊಂಡಿದ್ದಾರೆ? ಸರ್ಕಾರಕ್ಕೆ ದೇಶಕ್ಕೆ ಅಂಥವರಿಗೆ ಕಿರುಕುಳ ಕೊಡ್ತಿದ್ದಾರೆ. 75 ವರ್ಷದ ಸ್ವತಂತ್ರೋತ್ಸವ ತಂದು‌ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಸಂವಿಧಾನದ ತಂದು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಪ್ರಜಾಪ್ರಭುತ್ವ ಕಾರಣದಿಂದ ನೀವು ಪಿಎಂ ಆಗಿದ್ದೀರಾ. ಕಟ್ಟಿದ ಸಂಸ್ಥೆಗಳನ್ನ ಒಡೆದು ಹಾಕುತ್ತೀದ್ದೀರಾ ಎಂದು ಪ್ರಶ್ನಿಸಿದರು.

Latest Videos
Follow Us:
Download App:
  • android
  • ios