Asianet Suvarna News Asianet Suvarna News

ನೀರಿನ ಸಮಸ್ಯೆ ವಾರದೊಳಗೆ ಪರಿಹರಿಸಿ: ಪ್ರಲ್ಹಾದ್ ಜೋಶಿ ಖಡಕ್ ಸೂಚನೆ

ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಸಮರ್ಪಕವಾಗಿ ನೀರು ಪೂರೈಕೆಯಾಗದೇ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ಒಂದು ವಾರದೊಳಗೆ ನೀರಿನ ಸಮಸ್ಯೆ ಪರಿಹರಿಸದೇ ಇದ್ದಲ್ಲಿ ಕಂಪನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಎಚ್ಚರಿಕೆ ನೀಡಿದರು.

Solve water problem within a week: Minister Pralhad Joshi instructs at dharwad rav
Author
First Published May 21, 2023, 4:42 AM IST

ಹುಬ್ಬಳ್ಳಿ (ಮೇ.21) : ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಸಮರ್ಪಕವಾಗಿ ನೀರು ಪೂರೈಕೆಯಾಗದೇ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ಒಂದು ವಾರದೊಳಗೆ ನೀರಿನ ಸಮಸ್ಯೆ ಪರಿಹರಿಸದೇ ಇದ್ದಲ್ಲಿ ಕಂಪನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಎಚ್ಚರಿಕೆ ನೀಡಿದರು.

ಅವರು ಶನಿವಾರ ತಮ್ಮ ಕಚೇರಿಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ(Hubli-Dharwad Metropolitan Corporation) ಅಧಿಕಾರಿಗಳು ಹಾಗೂ ಎಲ್‌ ಆ್ಯಂಡ್‌ ಟಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಖಡಕ್‌ ವಾರ್ನಿಂಗ್‌ ನೀಡಿದರು.

ಕಲಘಟಗಿಗೆ ಸಕ್ಕರೆ ಕಾರ್ಖಾನೆ ತರುವರೇ ಸಂತೋಷ ಲಾಡ್‌!...

ಹುಬ್ಬಳ್ಳಿ- ಧಾರವಾಡ(Hubballi dharwad)ದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ನಿರಂತರ ವ್ಯತ್ಯಯ ಉಂಟಾಗಿರುವುದರಿಂದ ನಾಗರಿಕರು ಆಕ್ರೋಶ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳ ಸಭೆ ಕರೆದ ಸಚಿವರು, ಅವಳಿ ನಗರದಲ್ಲಿ ಸಮರ್ಪಕವಾಗಿ ನೀರು ಪೂರೈಕೆಯಾಗದೇ ಇರುವ ಬಗ್ಗೆ ಅನೇಕ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ, ಎಲ್‌ ಆ್ಯಂಡ್‌ ಟಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು ಬರುವ ಒಂದು ವಾರದೊಳಗೆ ನೀರಿನ ಸಮರ್ಪಕ ಪೂರೈಕೆ ಹಾಗೂ ನಿರ್ವಹಣೆ ಆಗದೇ ಇದ್ದಲ್ಲಿ, ಹಾಗೂ 3 ದಿನಗಳಲ್ಲಿ ಹಳೆಯ ನೌಕರರನ್ನು ಮರು ನೇಮಕಾತಿ ಮಾಡದೇ ಇದ್ದಲ್ಲಿ, ಕಂಪನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರೊಂದಿಗೆ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ, ಅವಳಿ ನಗರದ ಗುತ್ತಿಗೆಯನ್ನು ತೆಗೆದುಹಾಕುವುದಾಗಿ ಎಚ್ಚರಿಕೆ ನೀಡಿದರು.

ಈ ಹಿಂದೆ ಇದ್ದ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿ ಶೀಘ್ರ ನೇಮಕಾತಿ ಮಾಡಿಕೊಳ್ಳುವಂತೆ ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಅವರಿಗೆ ಆದೇಶಿಸಿದರು.

ಸಾಕಷ್ಟುನೀರು ಇದ್ದರೂ ನಿತ್ಯ ನೀರು ಪೂರೈಕೆ ವಾರ್ಡ್‌ಗಳಲ್ಲಿಯೂ ವ್ಯತ್ಯಯವಾಗುತ್ತಿದ್ದು, ಇನ್ನುಳಿದ ವಾರ್ಡ್‌ಗಳಲ್ಲಿ 10ರಿಂದ 12 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಳೆದ 2 ತಿಂಗಳುಗಳಿಂದÜ ಹದಗೆಟ್ಟದೆ.

ಹುಬ್ಬಳ್ಳಿ ಹಳೆ ಹುಬ್ಬಳ್ಳಿ, ಬಂಕಾಪುರ ಚೌಕ್‌, ಇಸ್ಲಾಂಪುರ, ದಾಜೀಬಾನ್‌ ಪೇಟೆ, ನೆಹರು ನಗರ, ಗೋಕುಲ ರಸ್ತೆ ಹಾಗೂ ಧಾರವಾಡದ ಮದಿಹಾಳ, ಸವದತ್ತಿ ರಸ್ತೆ, ಡಿಪೋ ಸರ್ಕಲ್‌ ಸೇರಿದಂತೆ ಸಾಕಷ್ಟುಪ್ರದೇಶಗಳಲ್ಲಿ ನೀರಿನ ಸರಬರಾಜು ಸಮರ್ಪಕವಾಗಿ ಆಗುತಿಲ್ಲ. ಮೇಲಿಂದ ಮೇಲೆ ಜನರು ತೀವ್ರವಾದ ಕುಡಿಯುವ ನೀರಿನ ಸಮಸ್ಯೆ ಎದುರಿಸುತಿದ್ದಾರೆ. ಸಮರ್ಪಕ ನೀರು ಪೂರೈಕೆಗಾಗಿ ಜಲಮಂಡಳಿಯಿಂದ ನಿಮ್ಮ ಕಂಪನಿಗೆ ನೀರು ಸರಬರಾಜು ಮಾಡುವ ಹೊಣೆ ನೀಡಲಾಗಿದೆ. ಆದರೆ, ನೀವು ಸರಿಯಾದ ರೀತಿಯಲ್ಲಿ ನೀರನ್ನು ಸರಬರಾಜು ಮಾಡುತ್ತಿಲ್ಲ. ಸಮರ್ಪಕ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

 

Karnataka election results 2023: ಕೇಂದ್ರದ ಸಹಕಾರಕ್ಕೆ ಫಲಿತಾಂಶ ಅಡ್ಡಿ ಆಗದು: ಜೋಶಿ

ಈ ಸಂದರ್ಭದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರ ಈರೇಶ ಅಂಚಟಗೇರಿ, ಉಪಮಹಾಪೌರ ಉಮಾ ಮುಕುಂದ, ಸಭಾ ನಾಯಕ ತಿಪ್ಪಣ್ಣ ಮಜ್ಜಿಗಿ, ರೂಪಾ ಶೆಟ್ಟಿ, ಈಶ್ವರಗೌಡ ಪಾಟೀಲ, ಪಾಲಿಕೆಯ ಆಯುಕ್ತ ಗೋಪಾಲಕೃಷ್ಣ, ಸ್ಮಾರ್ಚ್‌ ಸಿಟಿ ಎಂ.ಡಿ. ಪ್ರಿಯಾಂಗಾ, ಪಾಲಿಕೆಯ ಸದಸ್ಯರಾದ ಶಿವು ಮೆಣಸಿನಕಾಯಿ, ಬೀರಪ್ಪ ಖಂಡೆಕಾರ, ಎಲ್‌ ಆ್ಯಂಡ್‌ ಟಿ ಅಧಿಕಾರಿಗಳು ಉಪಸ್ಥಿತರಿದ್ದರು.

Follow Us:
Download App:
  • android
  • ios