ಬೆಂಗಳೂರು, (ಜ.20): ರಾಮನಗರ ಜಿಲ್ಲೆಯ ದೇವರಕಗ್ಗಲಹಳ್ಳಿಯಲ್ಲಿ 5.7 ಗುಂಟೆ ಜಮೀನು ಮಂಜೂರು ಮಾಡಿದ್ದ ಸಿದ್ದರಾಮಯ್ಯಗೆ ಸಂಕಷ್ಟ ಎದುರಾಗಿದೆ.

2016ರಲ್ಲಿ ಸಿಎಂ ಆಗಿದ್ದ ಸಂದರ್ಭದಲ್ಲಿ ರಾಮನಗರ ಜಿಲ್ಲೆಯ ದೇವರಕಗ್ಗಲಹಳ್ಳಿಯಲ್ಲಿ 5.7 ಗುಂಟೆ ಕರಾಬು ಜಮೀನನ್ನು ಮಹತ್ಮಾಗಾಂಧಿ ವಿದ್ಯಾಪೀಠ ಟ್ರಸ್ಟ್ ಗೆ ಮಂಜೂರು ಮಾಡಿದ್ದರು.

ಸಜೀವ ಬಾಂಬ್‌ಗೆ ಬೆಚ್ಚಿ ಬಿದ್ದ ಮಂಗ್ಳೂರ್, ವಿಜಿಗೆ ಸಂಕಷ್ಟ ತಂದ ತಲ್ವಾರ್; ಜ.20ರ ಟಾಪ್ 10 ಸುದ್ದಿ!

ಆದ್ರೆ, ಇದು ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲ ಹಳ್ಳಿ ಎನ್ನುವರು ಎಸಿಬಿಗೆ ದೂರು ನೀಡಿದ್ದಾರೆ.

ಸರ್ವೋಚ್ಚ ನ್ಯಾಯಾಲದ ನಿಯಮದ ಪ್ರಕಾರ ಕರಾಬು ಜಮೀನು ಮಂಜೂರು ಮಾಡುವಂತ್ತಿಲ್ಲ. ಸಾರ್ವಜನಿಕ ಉದ್ದೇಶಕ್ಕೆ ಬಿ ಕರಾಬು ಜಮೀನು ಬಳಸಬೇಕು. ಅದು ಹರಾಜು ಪ್ರಕ್ರಿಯೆ ಮಾಡುಬೇಕು.

ಆದ್ರೆ, ಸಿದ್ದರಾಮಯ್ಯನವರು ಅದ್ಯಾವ ನಿಯಮಗಳನ್ನು ಪಾಲಿಸದೇ ಮಹತ್ಮಾಗಾಂಧಿ ವಿದ್ಯಾಪೀಠ ಟ್ರಸ್ಟ್ ಗೆ ಮಂಜೂರು ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲ ಹಳ್ಳಿ ಆರೋಪಿಸಿದ್ದಾರೆ.

ಅದ್ರೆ ಸಿದ್ದರಾಮಯ್ಯ ಯಾವುದನ್ನು ಪಾಲಿಸದೇ ಮಂಜೂರು ಮಾಡಿದ್ದಾರೆ. ಅದು ಕೂಡ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ. ಇದರಿಂದ ಸರ್ಕಾರಕ್ಕೆ 20 ರಿಂದ 30 ಕೋಟಿನಷ್ಟ ಮಾಡಿದ್ದಾರೆ.

ಜಮೀನು ಪರಬಾವೆಯಲ್ಲಿ ಅಕ್ರಮ ಭ್ರಷ್ಟಾಚಾರ ನಡೆದಿದ್ದು, ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.