ಸದಾನಂದ ಗೌಡರ ವಿರುದ್ಧ ಅಪಪ್ರಚಾರ ತಪ್ಪು: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ನಮ್ಮ ಪಕ್ಷದ ಹಿರಿಯ ನಾಯಕರು. ಅವರ ವಿರುದ್ದ ಯಾರಾದರೂ ಅಪಪ್ರಚಾರ ಮಾಡಿದ್ದರೇ ಅದು ತಪ್ಪು. ಅವರ ಬೆನ್ನಿಗೆ ಪಕ್ಷ ಇರಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.
ನವದೆಹಲಿ (ಜೂ.08): ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ನಮ್ಮ ಪಕ್ಷದ ಹಿರಿಯ ನಾಯಕರು. ಅವರ ವಿರುದ್ದ ಯಾರಾದರೂ ಅಪಪ್ರಚಾರ ಮಾಡಿದ್ದರೇ ಅದು ತಪ್ಪು. ಅವರ ಬೆನ್ನಿಗೆ ಪಕ್ಷ ಇರಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ. ಬುಧವಾರ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸದಾನಂದ ಗೌಡರ ಅಸಮಾಧಾನ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಡಿವಿಎಸ್, ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಯಾರದರೂ ಅವರ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೋ ಎನ್ನುವುದೂ ಗೊತ್ತಿಲ್ಲ. ಎಲ್ಲಾ ಸಂಸದರ ಹಾಗೆ ಅವರ ಬಗ್ಗೆಯೂ ನಮಗೆ ಅತ್ಯಂತ ಗೌರವವಿದೆ ಎಂದರು.
ಇದೇ ವೇಳೆ, ಕಾಂಗ್ರೆಸ್‌ನ ಗ್ಯಾರಂಟಿ ಬಗ್ಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ನ ಗ್ಯಾರಂಟಿಗಳು ಗೊಂದಲದ ಗೂಡಾಗಿವೆ. ರಾಜ್ಯ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ಸತ್ಯ ಹೇಳಿದ್ದಾರೆ. ಅವರನ್ನು ನಾನು ಅಭಿನಂದಿಸುತ್ತೇನೆ. ಸರ್ಕಾರದಲ್ಲಿದ್ದೂ ಸತ್ಯ ಮಾತಾಡಿದ್ದಾರೆ ಎಂದರು. ಕಾಂಗ್ರೆಸ್, ಚುನಾವಣಾ ಪೂರ್ವದಲ್ಲಿ ಏನು ಹೇಳಿತ್ತು. ಈಗ ಹೇಗೆ ನಡೆದುಕೊಳ್ಳುತ್ತಿದೆ ಎಂಬುದು ಗೊತ್ತಾಗುತ್ತಿದೆ. ಯುವನಿಧಿ, ಗೃಹಲಕ್ಷ್ಮಿ ಯೋಜನೆ ಜಾರಿಯಲ್ಲಿ ಹತ್ತಾರು ಗೊಂದಲಗಳಿವೆ. ಮೊದಲು ಎಲ್ಲರಿಗೂ ಉಚಿತ ಎಂದರು. ಈಗ ಷರತ್ತುಗಳು ಅನ್ವಯ ಎನ್ನುತ್ತಿದ್ದಾರೆ. ಅವೆಲ್ಲಾ ಬೋಗಸ್ ಘೋಷಣೆಗಳು ಎಂದು ಕುಟುಕಿದರು.
24 ಪುಟಗಳ ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ: ಪ್ರಿಯಕರನಿಗೆ 'ಐ ಲವ್ ಯೂ' ಸಂದೇಶ!
ಮುಂಗಾರು ಬೆಳೆಗಳ ಬೆಲೆ ಹೆಚ್ಚಳ: ಮುಂಗಾರು ಹಂಗಾಮಿನ 2023-24ನೇ ಸಾಲಿನ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ರೈತರು ತಾವು ಬೆಳೆದ ಬೆಳೆಗಳನ್ನು ಅತ್ಯುತ್ತಮ ಬೆಲೆಗೆ ಮಾರಾಟ ಮಾಡಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದಂತಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿ, ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯ ಅಡಿಯಲ್ಲಿ ಗುಣಮಟ್ಟದ ಭತ್ತದ ಬೆಂಬಲ ಬೆಲೆಯನ್ನು ಕಳೆದ ಸಾಲಿಗಿಂತ .143 ಹೆಚ್ಚಳ ಮಾಡಿದ್ದು, .2183 ನಿದಿಪಡಿಸಲಾಗಿದೆ.
ಅದೇ ರೀತಿ ಜೋಳದ ಬೆಂಬಲ ಬೆಲೆಯನ್ನು ಕಳೆದ ಸಾಲಿಗಿಂತ .210 ಹೆಚ್ಚಳ ಮಾಡಿದ್ದು, .3180 ನಿಗದಿಪಡಿಸಲಾಗಿದೆ. ರಾಗಿ ಬೆಂಬಲ ಬೆಲೆಯನ್ನು ಕಳೆದ ಸಾಲಿಗಿಂತ .268 ಹೆಚ್ಚಳ ಮಾಡಿದ್ದು, .3846 ನಿಗದಿಪಡಿಸಲಾಗಿದೆ. ಗೋವಿನಜೋಳ ಬೆಂಬಲ ಬೆಲೆಯನ್ನು ಕಳೆದ ಸಾಲಿಗಿಂತ .128 ಹೆಚ್ಚಳ ಮಾಡಿದ್ದು, .2090, ತೊಗರಿ ಕಳೆದ ಸಾಲಿಗಿಂತ .400 ಹೆಚ್ಚಳ ಮಾಡಿದ್ದು, .7000, ಹೆಸರುಕಾಳು ಕಳೆದ ಸಾಲಿಗಿಂತ .803 ಹೆಚ್ಚಳ ಮಾಡಿದ್ದು .8558, ಉದ್ದು ಕಳೆದ ಸಾಲಿಗಿಂತ .350 ಹೆಚ್ಚಳ ಮಾಡಿದ್ದು, .6950 ನಿಗದಿ ಮಾಡಲಾಗಿದೆ.
ಶೇಂಗಾ ಕಳೆದ ಸಾಲಿಗಿಂತ .527 ಹೆಚ್ಚಳ ಮಾಡಿದ್ದು, .6377, ಸೂರ್ಯಕಾಂತಿ ಕಳೆದ ಸಾಲಿಗಿಂತ .360 ಹೆಚ್ಚಳ ಮಾಡಿದ್ದು, .6760, ಸೋಯಾಬಿನ್ ಕಳೆದ ಸಾಲಿಗಿಂತ .300 ಹೆಚ್ಚಳ ಮಾಡಿದ್ದು .4600, ಸಜ್ಜೆ ಕಳೆದ ಸಾಲಿಗಿಂತ .150 ಹೆಚ್ಚಳ ಮಾಡಿದ್ದು .2500, ಎಳ್ಳು ಕಳೆದ ಸಾಲಿಗಿಂತ .805 ಹೆಚ್ಚಳ ಮಾಡಿದ್ದು .8635, ಹುಚ್ಚೆಳ್ಳು ಕಳೆದ ಸಾಲಿಗಿಂತ .447 ಹೆಚ್ಚಳ ಮಾಡಿದ್ದು .7734, ಹತ್ತಿ (ಮಧ್ಯಮ) ಕಳೆದ ಸಾಲಿಗಿಂತ .540 ಹೆಚ್ಚಳ ಮಾಡಿದ್ದು .6620, ಹತ್ತಿ (ಉತ್ತಮ) ಕಳೆದ ಸಾಲಿಗಿಂತ .640 ಹೆಚ್ಚಳ ಮಾಡಿದ್ದು .7020 ನಿಗದಿಪಡಿಸಲಾಗಿದೆ.
ಕಾಂಗ್ರೆಸ್‌ನವರು ನಮ್ಮನ್ನು ಲೆಕ್ಕಕ್ಕೂ ಇಟ್ಟಿಲ್ಲ: ಎಚ್.ಡಿ.ಕುಮಾರಸ್ವಾಮಿ
ಕೇಂದ್ರ ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆ ಮಾರ್ಗಸೂಚಿಗಳ ಅನ್ವಯ ರೈತರಿಂದ ಹಿಂಗಾರು ಬೆಳೆಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಮಹತ್ವದ ನಿರ್ಧಾರ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ಕೇಂದ್ರ ಕೃಷಿ ಸಚಿವ ನರೇಂದ್ರಸಿಂಗ್ ತೋಮರ್ ಅವರಿಗೆ ರಾಜ್ಯದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.