Karnataka Politics: ‘ಸಿದ್ದು ಮುಂದಿನ ಸಿಎಂ’: ಡಿಕೆಶಿ ಎದುರೇ ಘೋಷಣೆ

  • ‘ಸಿದ್ದು ಮುಂದಿನ ಸಿಎಂ’: ಡಿಕೆಶಿ ಎದುರೇ ಘೋಷಣೆ
  •  ಬಾಸ್‌ ಬಾಸ್‌ ಸಿದ್ದು ಬಾಸ್‌ ಎಂದೂ ಉದ್ಘೋಷ
     
Siddu Next CM Slogan in front Of DK Shivakumar  in  Chamarajanagar snr

ಚಾಮರಾಜನಗರ (ಜ.03):  ಕಾಂಗ್ರೆಸ್‌ನಲ್ಲಿ (Congress) ‘ಮುಂದಿನ ಮುಖ್ಯಮಂತ್ರಿ’ ವಿಚಾರ ಪದೇ ಪದೇ ಸದ್ದು ಮಾಡುತ್ತಿದ್ದು, ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK Shivakumar) ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೋದಲ್ಲಿ ಬಂದಲ್ಲಿ ಅವರ ಬೆಂಬಲಿಗರು ಜಿದ್ದಿಗೆ ಬಿದ್ದವರಂತೆ ಘೋಷಣೆಗಳನ್ನು ಕೂಗುತ್ತಲೇ ಇದ್ದಾರೆ. ಭಾನುವಾರ ಡಿ.ಕೆ.ಶಿವಕುಮಾರ್‌ ಎದುರೇ ಸಿದ್ದರಾಮಯ್ಯ ಬೆಂಬಲಿಗರು ‘ಬಾಸ್‌ ಬಾಸ್‌ ಸಿದ್ದು ಬಾಸ್‌’, ‘ಮುಂದಿನ ಸಿಎಂ ಸಿದ್ದರಾಮಯ್ಯನವರಿಗೆ ಜೈ’ ಎಂದು ಘೋಷಣೆ ಕೂಗಿದ್ದಾರೆ.

ಮೇಕೆದಾಟು (Mekedatu)  ಪಾದಯಾತ್ರೆಯ ಪೂರ್ವಭಾವಿ ಸಭೆಗೆ ಭಾನುವಾರ ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಚಾಮರಾಜನಗರಕ್ಕೆ (Chamarajnagar) ಬಂದಿದ್ದರು. ಚಾಮರಾಜೇಶ್ವರ ದೇವಾಲಯದ ಪ್ರಾಂಗಣದಲ್ಲಿ ಡಿ.ಕೆ.ಶಿವಕುಮಾರ್‌ ಸಮ್ಮುಖದಲ್ಲೇ ಸಿದ್ದರಾಮಯ್ಯನವರ (Siddaramaiah) ಬೆಂಬಲಿಗರು, ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದರು. ಅಷ್ಟೇ ಅಲ್ಲದೆ ಡಿ.ಕೆ.ಶಿವಕುಮಾರ್‌ ದೇವಾಲಯ ಪ್ರದಕ್ಷಿಣೆ ಹಾಕುವಾಗಲೂ ಸಿದ್ದರಾಮಯ್ಯ ಅಭಿಮಾನಿಗಳು ನೃತ್ಯ ಮಾಡಿ, ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಕೂಗಿದರು. ಸಿದ್ದರಾಮಯ್ಯ ಸಿಎಂ ಆಗಬೇಕೆಂದೇ ಪೂಜೆ ಸಲ್ಲಿಸಬೇಕೆಂದು ಅಭಿಮಾನಿಗಳು ಒತ್ತಾಯಿಸಿದ ಘಟನೆಯೂ ನಡೆಯಿತು.

ನಾನು ಮುಂದಿನ ಸಿಎಂ ಸ್ಥಾನದ ಆಕಾಂಕ್ಷಿ ಎಂದ ಕೈ ಹಿರಿಯ ಮುಖಂಡ :  

ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಯುದ್ಧ ನಡೆಯುತ್ತಲೇ ಇದೆ. ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಧ್ಯೆ ಮುಂದಿನ ಸಿಎಂ ವಿಚಾರಕ್ಕೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇದರ ಮಧ್ಯೆ ಮತ್ತೋರ್ವ ಕಾಂಗ್ರೆಸ್ ಹಿರಿಯ ನಾಯಕ ನಾನೇ ಮುಂದಿನ ಸಿಎಂ ಆಗುವೆ ಎಂದು ಹೇಳಿದ್ದಾರೆ.

ಹೌದು.... ಮಲ್ಲಿಕಾರ್ಜುನ ಖರ್ಗೆ, ಡಾ.ಜಿ‌. ಪರಮೇಶ್ವರ್, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಘಟಾನುಘಟಿ ನಾಯಕರೇ ಇದ್ದಾರೆ. ಇವರೂ ಸಹ ಜೀವನದಲ್ಲಿ ಒಮ್ಮೆಯಾದರೂ ಸಿಎಂ ಆಗಬೇಕೆಂಬ ಕನಸು ಕಂಡಿರುವವರೇ. ಆದರೆ ಈಗ ಮತ್ತೆ ಹೊಸದೊಂದು ಹೆಸರು ಕೇಳಿ ಬಂದಿದೆ.

Karnataka Politics: ನಾನು ಸಿಎಂ ಆಗುತ್ತೆನೆಂದು ಎಲ್ಲಿಯೂ ಹೇಳಿಲ್ಲ, ವದಂತಿಗಳಿಗೆ ತೆರೆಎಳೆದ ಸಚಿವ

ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕ್ರಪ್ಪ ಅವರು ನಾನು ಕೂಡು ಸಿಎಂ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದು, ಕಾಂಗ್ರೆಸ್‌ನಲ್ಲಿ (Congress)  ಸಂಚಲನ ಮೂಡಿಸಿದ್ದಾರೆ.  ದಾವಣಗೆರೆಯಲ್ಲಿ   ಸುದ್ದಿಗಾರರೊಂದಿಗೆ ಮಾತನಾಡಿದ ಶಾಮನೂರು ಶಿವಶಂಕರಪ್ಪ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ(Assembly election)  ಕಾಂಗ್ರೆಸ್ ಪಕ್ಷ 140ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ. ಸಿಎಂ ನಾನೇ ಆಗುವೆ, ನಾನು‌ ಕೂಡ ಸಿಎಂ ಸ್ಥಾನದ ಆಕಾಂಕ್ಷಿ ಎಂದು ಸ್ಪಷ್ಟಪಡಿಸಿದರು.

ಜನ ಬಿಜೆಪಿ ಮೇಲೆ ಬೇಸರಗೊಂಡಿದ್ದಾರೆ. ಬಿಜೆಪಿಯವರ ಆಡಳಿತದ ಬಗ್ಗೆ ಜನರಿಗೆ ಸಮಾಧಾನ ಇಲ್ಲ. ಇದೇ ಕಾರಣಕ್ಕೆ ಕಾಂಗ್ರೆಸ್ ಗೆಲ್ಲಿಸಲಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಸಹ ಕಾಂಗ್ರೆಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಲಿಲ್ಲಿದ್ದಾರೆ ಎಂದು ಶಾಮನೂರ ಶಿವಶಂಕರಪ್ಪ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆಗೆ ಸಿದ್ದರಾಮಯ್ಯ ಹಾಗೂ ಡಿ‌.ಕೆ. ಶಿವಕುಮಾರ್ ನಡುವೆ ಪೈಪೋಟಿ ಇದೆ‌. ಯಾರಾಗ್ತಾರೆ ಸಿಎಂ ಎಂಬ ಮಾಧ್ಯಮದವರ ಪ್ರಶ್ನೆಗೆ ಶಾಮನೂರು ಶಿವಶಂಕರಪ್ಪ ಅಚ್ಚರಿ ಹೇಳಿಕೆ ನೀಡುವ ಮೂಲಕ ಕುತೂಹಲ ಮೂಡಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹಾಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್(DK Shivakumar) ನಡುವೆ ಮುಂದಿನ ಸಿಎಂ ವಿಚಾರವಾಗಿ ಶೀತನ ಸಮರ ಏರ್ಪಟ್ಟಿರುವುದು ( Siddaramaiah) ಗೊತ್ತಿಲ್ಲದ ಸಂಗತಿ ಏನಲ್ಲ. ಇದರ ನಡುವೆ ಕಾಂಗ್ರೆಸ್​ನ ಮತ್ತೋರ್ವ ಹಿರಿಯ ನಾಯಕ ಜಿ. ಪರಮೇಶ್ವರ್ (G Parameshwar) ಅವರು ದಲಿತ ಸಿಎಂ ಅಸ್ತ್ರವನ್ನು (Dalit CM) ಪ್ರಯೋಗ ಮಾಡಿ ಮತ್ತೊಂದು ಹಂತದ ಚರ್ಚೆ ಹುಟ್ಟು ಹಾಕಿದ್ದಾರೆ.

ಪಂಜಾಬಿನಲ್ಲಿ ದಲಿತ ಸಮುದಾಯದವರನ್ನು ಸಿಎಂ ಮಾಡಿದ್ದಾರೆ. ನಮ್ಮಲ್ಲೂ ದಲಿತ ಸಿಎಂ ಕೇಳುವಂತದಾಗಬಹುದು. ಮುಂದಿನ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಪಡೆದರೆ ಇಲ್ಲೂ ದಲಿತ ಸಿಎಂ ಕೊಡಬೇಕು ಎಂದು ಕೇಳುವಂತದಾಗಬಹುದು. ಆದರೆ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಮೊದಲ ಆದ್ಯತೆ ಎಂದು ಹೇಳುವ ಮೂಲಕ ದಲಿತ ಸಿಎಂ ಅಸ್ತ್ರ ಪ್ರಯೋಗ ಮಾಡಿದ್ದಾರೆ ಎಂದು ಪರಮೇಶ್ವರ್ ಹೇಳಿದ್ದರು.

Latest Videos
Follow Us:
Download App:
  • android
  • ios