Asianet Suvarna News Asianet Suvarna News

Karnataka Politics: ಖರ್ಗೆ Rallyಯಲ್ಲಿ ‘ಸಿದ್ದು, ಡಿಕೆಶಿ ಸಿಎಂ’ ಕೂಗು!

  • ಸರ್ವೋದಯದಲ್ಲಿ ‘ಸಿದ್ದು, ಡಿಕೆಶಿ ಸಿಎಂ’ ಕೂಗು; ಬೆಂಬಲಿಗರ ಜೈಕಾರ
  • ವೇದಿಕೆಯಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಭಾಷಣ ವೇಳೆ ಘೋಷಣೆ ಕೂಗಿದ ಅಭಿಮಾನಿಗಳು
  • ಅರಮನೆ ಮೈದಾನದ ಸುತ್ತಮುತ್ತ ಮಿಂಚಿದ ಕಾಂಗ್ರೆಸ್‌ ನಾಯಕರ ಕಟೌಟ್‌
  • ನಿರೀಕ್ಷೆಗೂ ಮೀರಿ ಆಗಮಿಸಿದ್ದ ಕಾರ್ಯಕರ್ತರು
Siddu and Sarvodaya shouts in congress sarvodaya pogram at bengaluru rav
Author
First Published Nov 7, 2022, 7:51 AM IST

ಬೆಂಗಳೂರು (ನ.7) : ನಗರದಲ್ಲಿ ಭಾನುವಾರ ನಡೆದ ಕಾಂಗ್ರೆಸ್‌ನ ಸರ್ವೋದಯ ಸಮಾರಂಭವು ಹಲವು ವಿಶೇಷತೆಗಳಿಗೆ ಸಾಕ್ಷಿಯಾಯಿತು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬೆಂಬಲಿಗರು ಮುಂದಿನ ಸಿಎಂ ಎಂದು ಕೂಗಿದ್ದು, ಸಮಾವೇಶದಲ್ಲಿ ಮಾರ್ದನಿಸಿತು.

ಮಲ್ಲಿಕಾರ್ಜುನ ಖರ್ಗೆ ಒಗ್ಗಟ್ಟಿನ ಟಾನಿಕ್‌: ಬೆಂಗಳೂರಲ್ಲಿ ಕಾಂಗ್ರೆಸ್‌ ಸರ್ವೋದಯ ಸಮಾವೇಶ

ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಡಿ.ಕೆ.ಶಿವಕುಮಾರ್‌ ಭಾಷಣ ಸಂದರ್ಭದಲ್ಲಿ ‘ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌’ ಎಂದು ಕೆಲ ಕಾರ್ಯಕರ್ತರು ಘೋಷಣೆ ಕೂಗಿದರು. ಇತ್ತ ಸಿದ್ದರಾಮಯ್ಯ ಬೆಂಬಲಿಗರು ಕೂಡಾ ‘ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂದು ಜೈಕಾರ ಹಾಕಿದರು. ಹಿರಿಯ ಮುಖಂಡರ ಸೂಚನೆ ಮೇರೆಗೆ ಸ್ಥಳದಲ್ಲಿದ್ದ ಕಾರ್ಯಕರ್ತರು ಮತ್ತೊಮ್ಮೆ ಮುಖ್ಯಮಂತ್ರಿ ಘೋಷಣೆ ಕೂಗದಂತೆ ಬೆಂಗಲಿಗರಿಗೆ ಸೂಚಿಸಿದರು.

ಕಲ್ಯಾಣ ಕರ್ನಾಟಕದವರೇ ಹೆಚ್ಚು

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶುಭಕೋರಲು ಸಮಾವೇಶಕ್ಕೆ ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್‌, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಶನಿವಾರ ರಾತ್ರಿಯೇ ಕ್ರೂಜರ್‌, ಟಿಂಪೋ, ಬಸ್‌ಗಳಲ್ಲಿ ಹೊರಟು ಭಾನುವಾರ ಬೆಳಿಗ್ಗೆ ಅರಮನೆ ಮೈದಾನಕ್ಕೆ ಆಗಮಿಸಿದ್ದರು. ವೇದಿಕೆ ಬಳಿ, ಮೈದಾನ ಸುತ್ತಮುತ್ತ ಉತ್ತರ ಕರ್ನಾಟಕದ ಗಾಂಧಿ ಟೋಪಿ ಹಾಕಿಕೊಂಡ ಜನರು ಗುಂಪು ಗುಂಪಾಗಿ ಕಂಡು ಬಂದರು. ಆಯಾ ಜಿಲ್ಲೆಗಳ ಕಾಂಗ್ರೆಸ್‌ ನಾಯಕರು ಅವರಿಗೆ ಮೈದಾನದಲ್ಲಿ ಊಟದ ವ್ಯವಸ್ಥೆ ಮಾಡಿದ್ದರು.

ರಾರಾಜಿಸಿದ ಕಟೌಟ್‌

ಸಮಾವೇಶ ನಡೆಯುತ್ತಿದ್ದ ತ್ರಿಪುರವಾಸಿನಿ ಪ್ರವೇಶ ದ್ವಾರದಲ್ಲಿಯೇ ಸೋನಿಯಾ ಗಾಂಧಿ, ರಾಹುಲ್‌ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ರಣದೀಪ್‌ ಸಿಂಗ್‌ ಸುರ್ಜೆವಾಲ ಅವರ ಬೃಹತ್‌ದಾಕಾರದ ಕಟೌಟ್‌ ನಿಲ್ಲಿಸಲಾಗಿತ್ತು. ಇತ್ತ ನಗರದ ಅರಮನೆ ರಸ್ತೆ, ಮೇಖ್ರಿ ವೃತ್ತ, ಸದಾಶಿವ ನಗರದ ಖರ್ಗೆ ಅವರ ಮನೆ ರಸ್ತೆ, ವಿಮಾನ ನಿಲ್ದಾಣ ರಸ್ತೆಗಳಲ್ಲಿ ಕಾಂಗ್ರೆಸ್‌ ಬಾವುಟ, ಶುಭ ಕೋರುವ ಪ್ಲೆಕ್ಸ್‌, ಕಟೌಟ್‌ಗಳು ರಾರಾಜಿಸುತ್ತಿದ್ದವು.

ಐಕ್ಯತಾ ಯಾತ್ರೆ ವಿಡಿಯೋ ಅಬ್ಬರ

ಸಮಾವೇಶ ತಡವಾದ ಹಿನ್ನೆಲೆ ವೇದಿಕೆಯ ಎಲ್‌ಇಡಿ ಪರದೆ ಮೇಲೆ ರಾಹುಲ್‌ ಗಾಂಧಿಯವರ ಭಾರತ ಐಕ್ಯತೆ (ಭಾರತ್‌ ಜೋಡೋ) ಯಾತ್ರೆಯ ರಾಜ್ಯಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳನ್ನು ಒಳಗೊಂಡ ವಿಡಿಯೋ ತುಣುಕುಗಳನ್ನು ಪ್ರದರ್ಶಿಸಲಾಯಿತು. ಪ್ರಮುಖವಾಗಿ ರಾಹುಲ್‌ ಗಾಂಧಿ ಮಾತುಗಳು, ಚರ್ಚೆಗಳು, ಸಂದರ್ಶನಗಳು, ಯಾತ್ರೆ ಬಗ್ಗೆ ಜನರ ಪ್ರತಿಕ್ರಿಯೆ, ಭಾಗವಹಿಸಿದ್ದ ಜನಸ್ತೋಮ ಒಳಗೊಂಡ ವಿಡಿಯೋಗಳು ಸಮಾವೇಶದಲ್ಲಿ ನೆರೆದಿದ್ದ ಕಾರ್ಯಕರ್ತರು, ಬೆಂಬಲಿಗರನ್ನು ಮೂಕವಿಸ್ಮಿತಗೊಳಿಸಿದ್ದವು.

ಮಳೆಯಲ್ಲಿ ನೆನೆದ ಸಾವಿರಾರು ಕಾರ‍್ಯಕರ್ತರು

ಸಮಾವೇಶಕ್ಕೆ ಉತ್ತರ ಕರ್ನಾಟಕ ಸೇರಿದಂತೆ ಹಲವು ಜಿಲ್ಲೆಗಳಿಂದ 50 ಸಾವಿರಕ್ಕೂ ಅಧಿಕ ಮಂದಿ ಆಗಮಿಸಿದ್ದರು. ಅರಮನೆ ಮೈದಾನದ ತ್ರಿಪುರವಾಸಿನಿಯ ಒಳಾಂಗಣ ಕಾರ್ಯಕ್ರಮವಾಗಿದ್ದ ಹಿನ್ನೆಲೆ 30 ರಿಂದ 35 ಸಾವಿರ ಮಂದಿಗೆ ಆಸನ ವ್ಯವವಸ್ಥೆ ಮಾಡಲಾಗಿತ್ತು. ಕುರ್ಚಿ ಸಿಗದೇ, ನಿಲ್ಲಲು ಸ್ಥಳವಿಲ್ಲದೆ ಸಾವಿರಾರು ಮಂದಿ ಹೊರಭಾಗದಲ್ಲಿದ್ದರು. ಆ ಸಂದರ್ಭದಲ್ಲಿ ಸುರಿದ ಭಾರಿ ಮಳೆಗೆ ಬಹುತೇಕ ಸಿಲುಕಿ ಒದ್ದೆಯಾದರು. ದೂರದೂರಿಂದ ಸಾಕಷ್ಟುಮಂದಿ ಬಂದಿದ್ದು, ಹೆಚ್ಚಿನ ಸ್ಥಳಾವಕಾಶ ನೀಡಬೇಕಿತ್ತು ಎಂದು ಕೆಲ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಖರ್ಗೆ ಕಾರ‍್ಯಕ್ರಮದಲ್ಲೂ ಸಿದ್ದರಾಮಯ್ಯ ಹವಾ!

ಮಲ್ಲಿಕಾರ್ಜುನ ಖರ್ಗೆ ಅವರ ಅಭಿನಂದನಾ ಸಮಾವೇಶವಾದರೂ ಕೂಡಾ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರ ಅಭಿಮಾನಿಗಳ ಕೇಕೆ, ಚಪ್ಪಾಳೆ ಜೋರಿತ್ತು. ಇತರೆ ನಾಯಕರು ವೇದಿಕೆ ಆಗಮಿಸಿದಾಗ ಸುಮ್ಮಸಿದ್ದ ಕಾರ್ಯಕರ್ತರು, ಬೆಂಬಲಿಗರು ಸಿದ್ದರಾಮಯ್ಯ ಅವರು ವೇದಿಕೆ ಆಗಮಿಸಿದಾಗ ಕೆಲ ನಿಮಿಷಗಳು ಕೇಕೆ, ಜೈಕಾರ ಹಾಕಿದರು. ಬಳಿಕ ಡಿ.ಕೆ.ಶಿವಕುಮಾರ್‌, ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯ ಅವರ ಹೆಸರು ಪ್ರಸ್ತಾಪಿಸಿದಾಗಲೂ ಅಭಿಮಾನಿಗಳ ಜೋರಾಗಿ ಚಪ್ಪಾಳೆ, ಶಿಳ್ಳೆ ಹೊಡೆದರು. ಇನ್ನು ಸಿದ್ದರಾಮಯ್ಯ ಭಾಷಣ ಸಂದರ್ಭದಲ್ಲಿ ಎರಡು ಮೂಡು ನಿಮಿಷ ನಿರಂತವಾಗಿ ಜೈಕಾರ ಹಾಕಿದರು.

ಖರ್ಗೆ ಕೇಶ ವಿನ್ಯಾಸ ಆಕರ್ಷಣೆ

ಮಲ್ಲಿಕಾರ್ಜುನ ಖರ್ಗೆಯವರ ಉತ್ತರ ಕರ್ನಾಟಕದ ಅಭಿಮಾನಿಯೊಬ್ಬ ಖರ್ಗೆ ಅವರ ಹೆಸರಿನಲ್ಲಿ ಕೇಶ ವಿನ್ಯಾಸ ಮಾಡಿಸಿಕೊಂಡು ಬಂದಿದ್ದ. ‘ಎಐಸಿಸಿ ಅಧ್ಯಕ್ಷ ಖರ್ಗೆ’ ಎಂದು ತಲೆ ಮೇಕೆ ಬರೆಸಿಕೊಂಡಿದ್ದನು. ಹಲವರು ಆತನ ಜೊತೆ ಪೋಟೋ, ಸೆಲ್ಫಿ ತೆಗೆಸಿಕೊಂಡರು.

ಬಿಜೆಪಿ ಸೋಲಿಸಿ ಮಲ್ಲಿಕಾರ್ಜುನ ಖರ್ಗೆಗೆ ಅಭಿನಂದನೆ: ಸಿದ್ದರಾಮಯ್ಯ

ಖರ್ಗೆ ಕುರಿತ ಕಿರುಚಿತ್ರ

ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಜೀವನ ಕುರಿತ ಕಿರುಚಿತ್ರ ಪ್ರದರ್ಶಿಸಲಾಯಿತು. ಮೊದಲ ಬಾರಿ ಶಾಸಕರಾಗಿ ಆಯ್ಕೆಯಿಂದ ಹಿಡಿದು ಎಐಸಿಸಿ ಹುದ್ದೆ ಅಲಂಕರಿಸುವವರೆಗೂ ನಡೆದು ಬಂದ ಹಾದಿಯನ್ನು ಪರಿಚಯಿಸಲಾಯಿತು. ‘ಗುಲ್ಬರ್ಗಾ ಶಾಂತಿಯಾತ್ರೆ, ಕಾರ್ಮಿಕ ಹೋರಾಟಗಳು, ಕಾರ್ಮಿಕ ಪರ ಯೋಜನೆಗಳು, ಕಲ್ಯಾಣ ಕರ್ನಾಟಕಕ್ಕೆ ನೀಡಿ 371 ಜೆ ಮೀಸಲಾತಿ’ ಸೇರಿದಂತೆ ಖರ್ಗೆ ಸಾಧನೆಗಳನ್ನು ಕಿರುಚಿತ್ರದಲ್ಲಿ ವಿವರಿಸಲಾಗಿತ್ತು.

Follow Us:
Download App:
  • android
  • ios