Asianet Suvarna News Asianet Suvarna News

ಸಿದ್ದರಾಮಯ್ಯ ಸರ್ಕಾರವೂ ಮಹಿಷನ ರೀತಿ ಮರ್ಧನ ಆಗಲಿದೆ: ಎಂ.ಪಿ.ರೇಣುಕಾಚಾರ್ಯ

ಹಿಂದುಗಳ ಭಾವನೆ ಕೆರಳಿಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡಿದೆ. ಮಹಿಷ ಮರ್ಧನ ರೀತಿಯೇ ಕಾಂಗ್ರೆಸ್ ಸರ್ಕಾರದ ಮರ್ಧನವೂ ಆಗಲಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. 

Siddaramaiahs government will also be beaten like Mahisha Says MP Renukacharya gvd
Author
First Published Oct 13, 2024, 8:29 AM IST | Last Updated Oct 13, 2024, 8:29 AM IST

ದಾವಣಗೆರೆ (ಅ.13): ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವಿಜಯದಶಮಿ ಹಬ್ಬದ ದಿನವೇ ನಿರ್ಧರಿಸಿದೆ. ಹಿಂದುಗಳ ಭಾವನೆ ಕೆರಳಿಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡಿದೆ. ಮಹಿಷ ಮರ್ಧನ ರೀತಿಯೇ ಕಾಂಗ್ರೆಸ್ ಸರ್ಕಾರದ ಮರ್ಧನವೂ ಆಗಲಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. ನಗರದಲ್ಲಿ ಶನಿವಾರ ಸಾರ್ವಜನಿಕ ವಿಜಯದಶಮಿ ಅಂಗವಾಗಿ ವಿಶ್ವ ಹಿಂದು ಪರಿಷತ್ತು ಹಾಗೂ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಹಮ್ಮಿಕೊಂಡಿದ್ದ ಬೃಹತ್ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ರಾಜ್ಯದಲ್ಲಿ ಭಯೋತ್ಪಾದಕರ ಸರ್ಕಾರ ಹಿಂಬಾಗಿಲ ಮೂಲಕ ಆಡಳಿತ ನಡೆಸುತ್ತಿದೆ. ದೇಶದ್ರೋಹಿಗಳ ಸರ್ಕಾರವೇ ಇಲ್ಲಿ ಆಡಳಿತ ನಡೆಸುತ್ತಿದೆ. ಈ ಹಿಂದೆ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳ ಮೇಲೆ ಹಾಕಿದ್ದ ಕೇಸ್‌ಗಳನ್ನು ಹಿಂಪಡೆದಿದ್ದರು. ಇದೇ ಕಾರಣಕ್ಕೆ ಭಯೋತ್ಪಾದನೆ ಹೆಚ್ಚಾಗುತ್ತಿದೆ ಎಂದು ಆರೋಪಿಸಿದರು.

120 ಜನರ ಕೇಸ್‌ ದಾಖಲು: ಮೂರು ವರ್ಷಗಳ ಹಿಂದೆ ಪೊಲೀಸ್ ಠಾಣೆಯನ್ನೇ ಸುಡಲು ಹೋಗಿದ್ದರು. ಕಲ್ಲು ತೂರಾಟ ಮಾಡಿ, ಪೊಲೀಸ್ ಅಧಿಕಾರಿ- ಸಿಬ್ಬಂದಿ, ಜನರ ಮನೆಗಳ ಮೇಲೆ ದಾಳಿ ಮಾಡಿದ್ದರು. ಮಾರಕಾಸ್ತ್ರಗಳನ್ನು ಸಹ ಬಳಕೆ ಮಾಡಿದ್ದರು. ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದರು. ಆಗ ಸುಮಾರು 120 ಜನರ ಮೇಲೆ ಕೇಸ್ ದಾಖಲು ಮಾಡಲಾಗಿತ್ತು. ಅದೇ ಕೇಸ್‌ಗಳನ್ನು ಇವತ್ತು ಕಾಂಗ್ರೆಸ್ ಸರ್ಕಾರ ಹಿಂಪಡೆಯುತ್ತಿದೆ. ನಾಚಿಕೆ ಆಗಲ್ಲವಾ ನಿಮಗೆ ಎಂದು ಸಿದ್ದರಾಮಯ್ಯಗೆ ಅವರನ್ನು ರೇಣುಕಾಚಾರ್ಯ ಪ್ರಶ್ನಿಸಿದರು.

ಮುಖ್ಯಮಂತ್ರಿ ಹುದ್ದೆ ಖಾಲಿ ಇದೆ ಅಂತ ನಿಮಗ್ಯಾರು ಹೇಳಿದ್ದು?: ಸಚಿವರಿಗೆ ಸಂಪುಟದಲ್ಲಿ ಸಿಎಂ ಕ್ಲಾಸ್‌

ನಾಡು, ನುಡಿ, ನೆಲ, ಜಲದ ವಿಚಾರದಲ್ಲಿ ಹೋರಾಟ ಮಾಡಿದವರ ಮೇಲೆ ಕೇಸ್‌ ವಾಪಸ್‌ ಪಡೆಯಲಿ. ದೇಶ ವಿರೋಧದ ಮೇಲೆ ಕೇಸ್ ದಾಖಲಿಸಿದ್ದನ್ನು ಹಿಂಪಡೆದರೆ, ಅಂಥವರು ಮತ್ತಷ್ಟು ಮೆರೆಯುತ್ತಾರೆ. ಜನರು ನಿಮಗೊಂದು ಅವಕಾಶ ಕೊಟ್ಟಿದ್ದಾರೆ. ಆದರೆ, ಇಬ್ಬಗೆ ನೀತಿಯನ್ನು ನೀವು ಇನ್ನೂ ಕೈಬಿಡುತ್ತಿಲ್ಲ. ಭಯೋತ್ಪಾದನೆ ಬೆಂಬಲ ಕೊಡುವ ಕೆಲಸ ಮೊದಲು ಕೈಬಿಡಿ ಎಂದು ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದರು.

Latest Videos
Follow Us:
Download App:
  • android
  • ios