Asianet Suvarna News Asianet Suvarna News

Assembly Election:ಸಿದ್ದರಾಮಯ್ಯಗೆ ಕ್ಷೇತ್ರ ಸಿಗದಿರುವುದೇ ಕಾಂಗ್ರೆಸ್‌ ದುರ್ಗತಿಗೆ ನಿರದರ್ಶನ: ಯತ್ನಾಳ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸ್ಪರ್ಧಿಸಲು ನಿರ್ದಿಷ್ಟಕ್ಷೇತ್ರ ಸಿಗದಿರುವುದು ಕಾಂಗ್ರೆಸ್‌ ಪಕ್ಷದ ದುರ್ಗತಿಗೆ ನಿದರ್ಶನ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವ್ಯಂಗ್ಯವಾಡಿದರು.

Siddaramaiahs failure to get a constituency is an example of Congress' failure says yatnal rav
Author
First Published Nov 25, 2022, 11:44 AM IST

ಧಾರವಾಡ (ನ.25) : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸ್ಪರ್ಧಿಸಲು ನಿರ್ದಿಷ್ಟಕ್ಷೇತ್ರ ಸಿಗದಿರುವುದು ಕಾಂಗ್ರೆಸ್‌ ಪಕ್ಷದ ದುರ್ಗತಿಗೆ ನಿದರ್ಶನ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವ್ಯಂಗ್ಯವಾಡಿದರು. ತಾಲೂಕಿನ ಮುಮ್ಮಿಗಟ್ಟಿಬಳಿಯ ಗರಗ ಕ್ರಾಸ್‌ನಲ್ಲಿ ಶಾಸಕರ . 8.30 ಕೋಟಿ ಅನುದಾನಲ್ಲಿ ಕೈಕೊಳ್ಳಲಾಗುತ್ತಿರುವ ದ್ವಿಪಥ ರಸ್ತೆ, ಮಹಾದ್ವಾರ ನಿರ್ಮಾಣ ಕಾಮಗಾರಿಯ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾಂಗ್ರೆಸ್‌ ಇದೀಗ ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಪಕ್ಷದಲ್ಲಿನ ಆಂತರಿಕ ಗೊಂದಲ ಇನ್ನಿತರ ಕಾರಣಗಳಿಂದ ಒಗ್ಗಟ್ಟಿಲ್ಲ. ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ತೀರ್ಮಾನಿಸಲು ಸಾಧ್ಯವಾಗುತ್ತಿಲ್ಲ ಎಂದರು.

ಇಸ್ಲಾಂ, ಕ್ರೈಸ್ತ ರಾಷ್ಟ್ರವಾಗಿಸಲು ಹಿಂದು ಸಮಾಜ ಬಿಡಲ್ಲ: ಯತ್ನಾಳ್

ಪರೇಶ ಮೇಸ್ತಾ ಸಾವಿನ ಪ್ರಕರಣದಲ್ಲಿ ಕಾಂಗ್ರೆಸ್‌ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ. ಪ್ರಕರಣದ ಸತ್ಯ ಹೊರಬರಲಿ ಎಂಬ ಉದ್ದೇಶದಿಂದ ಸರ್ಕಾರ ಪುನಃ ತನಿಖೆಗೊಳಪಡಿಸುವ ಸಂಭವವಿದೆ ಎಂದ ಅವರು, ಮಂಗಳೂರು ಬಾಂಬ್‌ ಸ್ಫೋಟವನ್ನು ಎನ್‌ಐಎಗೆ ಕೊಡಬೇಕು. ದೇಶ ವಿರೋಧಿ ಚಟುವಟಿಕೆಗಳಲ್ಲಿ ಇಸ್ಲಾಂ ಗುಪ್ತವಾದಿಗಳು ಇದ್ದಾರೆ. ಅವರಿಗೆ ಕಠಿಣ ಶಿಕ್ಷೆಯಾಗಲು ಎನ್‌ಐಎಗೆ ಈ ಪ್ರಕರಣ ವಹಿಸಬೇಕೆಂದರು.

ಸಚಿವ ಸಂಪುಟ ವಿಸ್ತರಣೆ ಪ್ರಶ್ನೆಗೆ, ಶೀಘ್ರದಲ್ಲಿಯೇ ಸಂಪುಟ ವಿಸ್ತರಣೆ ಆಗಲಿದೆ. ರಮೇಶ ಜಾರಕಿಹೊಳಿ ನಮ್ಮ ಪಕ್ಷದ ಮುಖಂಡರು. ಅವರು ಪಕ್ಷ ತೊರೆಯುವ ಸಾಧ್ಯತೆ ಇಲ್ಲ. ಅಲ್ಲದೇ ಅವರು ಸಚಿವರಾಗುವುದು ನಿಶ್ಚಿತ. ಆದರೆ, ತಾವು ಸಚಿವ ಪದವಿಯ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದರು.

Karnataka Politics: ಶಾಸಕ ಯತ್ನಾಳ್ ವಿರುದ್ದ ಭುಗಿಲೆದ್ದ ಆಕ್ರೋಶ, ಸತೀಶ್ ಜಾರಕಿಹೊಳಿ ಬೆಂಬಲಿಗರ ಪ್ರತಿಭಟನೆ

ಪಂಚಮಸಾಲಿ ಸಮಾಜದ ಬೇಡಿಕೆಯ ಹೋರಾಟ ಕುರಿತು ಯಾವುದೇ ರಾಜೀ ಇಲ್ಲ. ಕೂಡಲಸಂಗಮ ಸ್ವಾಮೀಜಿ ಅವರನ್ನು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮತ್ತು ಬಸನಗೌಡ ಪಾಟೀಲ ಅವರು ದಾರಿ ತಪ್ಪಿಸುತ್ತಿದ್ದಾರೆ ಎಂಬ ಸಚಿವ ಮುರುಗೇಶ ನಿರಾಣಿ ಹೇಳಿಕೆಗೆ, ಹರಿಹರ ಪೀಠದ ಸ್ವಾಮೀಜಿ ಅವರನ್ನು ಯಾರು ದಾರಿ ತಪ್ಪಿಸುತ್ತಿದ್ದಾರೆ? ಮುಂಬರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ರಾಜ್ಯಾದ್ಯಂತ ಪ್ರಚಾರ ನಡೆಸಲಿದ್ದೇನೆ. ಈ ವಿಷಯದಲ್ಲಿ ಯಾರಿಗೂ ಸಂಶಯಬೇಡ ಎಂದರು.

Follow Us:
Download App:
  • android
  • ios