Asianet Suvarna News Asianet Suvarna News

Assembly Elections 2023: ಸಿದ್ದು ಕೋಲಾರದಿಂದ ನನ್ನ ವಿರುದ್ಧ ಸ್ಪರ್ಧಿಸುವುದಿಲ್ಲ: ವರ್ತೂರು ಪ್ರಕಾಶ್‌

Karnataka Assembly Elections 2023: ಕೋಲಾರದಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ನನ್ನ ವಿರುದ್ದ ಸಿದ್ದರಾಮಯ್ಯ ಕಣಕ್ಕಿಳಿಯುವ ದುಸ್ಸಾಹಸ ಮಾಡುವುದಿಲ್ಲ, ನಾನೂ ಕುರುಬ ಸಮಾಜದವನೇ, ಇಲ್ಲಿಗೆ ಬಂದರೆ ಇಡೀ ರಾಜ್ಯದ ಜನತೆ ಅವರಿಗೆ ಛೀಮಾರಿ ಹಾಕುತ್ತಾರೆ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್‌ ಎಚ್ಚರಿಸಿದರು. 

Siddaramaiah will not contest against me from Kolar says Varthur Prakash gvd
Author
First Published Nov 14, 2022, 10:56 AM IST

ಕೋಲಾರ (ನ.14): ಕೋಲಾರದಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ನನ್ನ ವಿರುದ್ದ ಸಿದ್ದರಾಮಯ್ಯ ಕಣಕ್ಕಿಳಿಯುವ ದುಸ್ಸಾಹಸ ಮಾಡುವುದಿಲ್ಲ, ನಾನೂ ಕುರುಬ ಸಮಾಜದವನೇ, ಇಲ್ಲಿಗೆ ಬಂದರೆ ಇಡೀ ರಾಜ್ಯದ ಜನತೆ ಅವರಿಗೆ ಛೀಮಾರಿ ಹಾಕುತ್ತಾರೆ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್‌ ಎಚ್ಚರಿಸಿದರು. ಸಿದ್ದರಾಮಯ್ಯ ಕೋಲಾರ ಭೇಟಿ ಸಂದರ್ಭದಲ್ಲೇ ಮಾಜಿ ಸಿಎಂ ಸಂಚರಿಸುವ ಮಾರ್ಗದಲ್ಲೇ ವೇಮಗಲ್‌ ಮೂಲಕ ಸೀತಿ-ಮದ್ದೇರಿ-ರಾಜಕಲ್ಲಹಳ್ಳಿವರೆಗೂ ಬೃಹತ್‌ ಬೈಕ್‌ ರಾರ‍ಯಲಿ ಮೂಲಕ ಶಕ್ತಿ ಪ್ರದರ್ಶನ ನಡೆಸಿ ಸಿದ್ದರಾಮಯ್ಯರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು.

ಸಿದ್ದು ಕೋಲಾರದಿಂದ ಸ್ಪರ್ಧಿಸುವುದಿಲ್ಲ: ರಾರ‍ಯಲಿ ಮಾರ್ಗದಲ್ಲಿಯೇ ಅವರು ಬೇರೆ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆಗೊಡವರನ್ನು ಸ್ವಾಗತಿಸಿ ಮಾತನಾಡಿ, ರಮೇಶ್‌ಕುಮಾರ್‌, ಎಸ್‌ಎನ್‌.ನಾರಾಯಣಸ್ವಾಮಿ ಮತ್ತಿತರರು ಅವರ ಸೋಲಿನ ಭಯದಿಂದ ಸಿದ್ದರಾಮಯ್ಯರನ್ನು ಬರುವಂತೆ ಗೋಗರೆಯುತ್ತಿದ್ದಾರೆ. ಆದರೆ ಈವರೆಗೂ ಸಿದ್ದರಾಮಯ್ಯ ಬರುವುದಾಗಿ ಎಲ್ಲೂ ಹೇಳಿಲ್ಲ. ಅವರು, ವೇಮಗಲ್‌ ಹೋಬಳಿಯಲ್ಲಿ ನನ್ನ ಬಳಿಯೇ ತಿಂದು ತೇಗಿ ಕೊಬ್ಬಿದ ಮೂವರು ವಂಚಕರನ್ನು ನಂಬಿ ಕೋಲಾರಕ್ಕೆ ಬರುವ ಧೈರ್ಯ ಮಾಡುವುದಿಲ್ಲ ಎಂದರು.

ಕೋಲಾರದಲ್ಲಿ ಸಿದ್ದುಗಿರುವ ಸಮಸ್ಯೆ ಶ್ರೀನಿವಾಸ್‌ಗೌಡ: ಎಚ್‌ಡಿಕೆ

ಸಿದ್ದರಾಮಯ್ಯ ಅವರು ಮಾಜಿ ಸಿಎಂ, ಒಂದು ಪಕ್ಷದ ಶಾಸಕಾಂಗ ಪಕ್ಷದ ನಾಯಕರು ಇಡೀ ರಾಜ್ಯದಲ್ಲಿ ಪ್ರವಾಸ ಮಾಡುವಂತೆ ಕೋಲಾರಕ್ಕೆ ಬಂದಿದ್ದಾರೆ ಅಷ್ಟೆ, ಅದೇ ಸಮುದಾಯದ ನಾನಿದ್ದೇನೆ ಇಲ್ಲಿ ಎಂಬುದು ಗೊತ್ತಿದೆ, ನನ್ನ ಬಗ್ಗೆ ಅವರಿಗೆ ಗೊತ್ತಿದೆ. ಕೋಲಾರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಡಿ.20 ರಂದು ನಾನು ನಡೆಸುವ ಬೃಹತ್‌ ಸಮಾವೇಶದಲ್ಲಿ ಕ್ಷೇತ್ರದ 1 ಲಕ್ಷ ಮಂದಿ ಪಾಲ್ಗೊಳ್ಳಲಿದ್ದಾರೆ, ಈ ಸಮಾವೇಶದಂದೇ ನನ್ನ ಗೆಲುವಿನ ಘೋಷಣೆಯಾಗಲಿದೆ ಎಂದು ಸಾರಿದರು.

ಬಿಜೆಪಿಯಿಂದ ಮಾತ್ರ ರೈತರ ಅಭಿವೃದ್ಧಿ: ಪ್ರತಿ ಗ್ರಾಮದಿಂದ ಜನ ಬರಬೇಕು, ಜೂನಿಯರ್‌ ಕಾಲೇಜು ಮೈದಾನದಲ್ಲಿ ಅದು ನಮ್ಮ ಶಕ್ತಿ ಪ್ರದರ್ಶನವಾಗಲಿದ್ದು, ನನ್ನ ವಿರುದ್ದ ಕಣಕ್ಕಿಳಿಯುವ ಪ್ರತಿಸ್ಪರ್ಧಿಗಳಿಗೆ ನಡುಕ ತರಲಿದೆ. ಬಿಜೆಪಿಯಿಂದ ಮಾತ್ರವೇ ರೈತರು ಮತ್ತು ಗ್ರಾಮೀಣಾಭಿವೃದ್ದಿ ಸಾಧ್ಯ, ರೈತರ ಖಾತೆಗಳಿಗೆ ಕೇಂದ್ರ ಸರ್ಕಾರ 6 ಸಾವಿರ ಹಾಗೂ ರಾಜ್ಯ ಸರ್ಕಾರ 4 ಸಾವಿರ ಸೇರಿ 10 ಸಾವಿರ ಹಾಕುತ್ತಿದೆ, ಈ ಕೆಲಸ ಮಾಡಲು ಬೇರೆ ಪಕ್ಷಗಳಿಂದ ಸಾಧ್ಯವೇ ಎಂದು ಪ್ರಶ್ನಿಸಿದರು.

ರೈತರ ಹಿತ ರಕ್ಷಣೆ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು. ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ನನ್ನ ಅವಧಿಯಲ್ಲಿ ನಡೆದಿರುವ ಸಿಮೆಂಟ್‌ ರಸ್ತೆ ಕಾಮಗಾರಿಗಳಿಗೆ ಅನುದಾನ ನೀಡಿದ್ದೇ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ, ಇದೀಗ ಮಾನ ಮರ್ಯಾದೆ ಬಿಟ್ಟು ಸಿದ್ದರಾಮಯ್ಯರಿಗೆ ದುಂಬಾಲು ಬಿದ್ದಿರುವ ಕೆ.ಶ್ರೀನಿವಾಸಗೌಡ ಏನಾದರೂ ಒಂದು ಕೆಲಸ ಮಾಡಿದ್ದಾರೆಯೇ. ನಾನು ನುಡಿದಂತೆ ನಡೆಯುವೆ, ಸದಾ ನಿಮ್ಮೊಂದಿಗೆ ಇರುವೆ ಎಂದು ಅಭಯ ನೀಡಿದರು.

ಕಾಶಿಯಲ್ಲಿರುವ ಕರ್ನಾಟಕ ಛತ್ರ ಅಭಿವೃದ್ಧಿ: ಸಚಿವೆ ಶಶಿಕಲಾ ಜೊಲ್ಲೆ

ಬಿಜೆಪಿಗೆ ಹಲವರ ಸೇರ್ಪಡೆ: ಸಿದ್ದರಾಮಯ್ಯ ಆಗಮಿಸುವ ವೇಮಗಲ್‌-ಸೀತಿ ಮಾರ್ಗದಲ್ಲೇ ತಮ್ಮ ಶಕ್ತಿಪ್ರದರ್ಶನಕ್ಕೆ ಬೈಕ್‌ ರಾರ‍ಯಲಿ ನಡೆಸಿದ ವರ್ತೂರು ಪ್ರಕಾಶ್‌ ನೇತೃತ್ವದಲ್ಲಿ ರಾಜಕಲ್ಲಹಳ್ಳಿ ಗ್ರಾಮದಲ್ಲಿ ನೂರಾರು ಮಂದಿ ಒಕ್ಕಲಿಗರ, ತಿಗಳ, ಪರಿಶಿಷ್ಟರು ಸೇರಿದಂತೆ ಅನೇಕರು ಬಿಜೆಪಿಗೆ ಸೇರ್ಪಡೆಯಾದರು. ರಾಜಕಲ್ಲಹಳ್ಳಿ ಮುಖಂಡರಾದ ವೆಂಕಟೇಶಪ್ಪ, ಶಿವಾರೆಡ್ಡಿ, ಶಿವಣ್ಣ, ನಿವೃತ್ತ ಶಿಕ್ಷಕ ಶಿವಣ್ಣ, ಕುಪ್ಪಣ್ಣ, ಪೆರುಮಾಳಪ್ಪ, ಮಹೇಶ್‌, ವೆಂಕಟೇಶಪ್ಪ, ಕೆ.ಆರ್‌.ನಾರಾಯಣಸ್ವಾಮಿ, ಶ್ರೀನಿವಾಸ್‌, ದೇವರಾಜ್‌, ಮುಕುಂದ, ಗೋವಿಂದಗೌಡ, ಜಗದೀಶ್‌ ಮತ್ತಿತರರು ಬಿಜೆಪಿಗೆ ಸೇರ್ಪಡೆಯಾದರು. ಜಿಪಂ ಮಾಜಿ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್‌, ಕೆಯುಡಿಎ ಅಧ್ಯಕ್ಷ ವಿಜಯಕುಮಾರ್‌, ಮುಖಂಡರಾದ ಬೆಗ್ಲಿ ಪ್ರಕಾಶ್‌, ಜಿಪಂ ಮಾಜಿ ಸದಸ್ಯರಾದ ರೂಪಶ್ರೀ, ಮಂಜುನಾಥ್‌, ಅರುಣ್‌ ಪ್ರಸಾದ್‌, ಸಿಡಿ.ರಾಮಚಂದ್ರೇಗೌಡ ಇದ್ದರು.

Follow Us:
Download App:
  • android
  • ios