Asianet Suvarna News Asianet Suvarna News

ಸಿದ್ದರಾಮಯ್ಯ ಉತ್ತಮ ಬಜೆಟ್ ಕೊಡಲಿದ್ದಾರೆ: ಸಚಿವ ಎಚ್.ಕೆ.ಪಾಟೀಲ್‌

ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮವಾದ ಬಜೆಟ್ ಮಂಡಿಸಲಿದ್ದು, ಗದಗ ಜಿಲ್ಲೆಗೂ ವಿಶೇಷ ಕೊಡುಗೆಗಳು ಸಿಗುವ ವಿಶ್ವಾಸವಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್‌ ಹೇಳಿದರು. 

Siddaramaiah will give a good budget Says Minister HK Patil gvd
Author
First Published Feb 12, 2024, 9:59 AM IST

ಗದಗ (ಫೆ.12): ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮವಾದ ಬಜೆಟ್ ಮಂಡಿಸಲಿದ್ದು, ಗದಗ ಜಿಲ್ಲೆಗೂ ವಿಶೇಷ ಕೊಡುಗೆಗಳು ಸಿಗುವ ವಿಶ್ವಾಸವಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್‌ ಹೇಳಿದರು. ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಹೆಚ್ಚುವರಿಯಾಗಿ 60 ಸಾವಿರ ಕೋಟಿ ರು. ಹೊರೆ ಇದೆ. ಈ ಹಿನ್ನೆಲೆಯಲ್ಲಿ ಸಿಎಂ ಅವರು ಎಲ್ಲವನ್ನೂ ಅಳೆದು ತೂಗಿ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದ್ದಾರೆ. ಡಂಬಳಕ್ಕೆ ತೋಟಗಾರಿಕೆ ಕಾಲೇಜು ಮಂಜೂರು ಮಾಡುವಂತೆ ಒತ್ತಾಯಿಸಲಾಗಿದೆ. 

ಅದೇ ರೀತಿ, ಜಿಲ್ಲೆಗೆ ಎಂಜಿನಿಯರಿಂಗ್‌ ಕಾಲೇಜುಗಳನ್ನು ನೀಡುವಂತೆ ಕೇಳಲಾಗಿದೆ. ಗ್ಯಾರಂಟಿ ಭಾರದ ನಡುವೆಯೂ ಹೊಸ ಯೋಜನೆಗಳನ್ನು ಗದಗ ಜಿಲ್ಲೆಗೆ ಅಪೇಕ್ಷಿಸಲಾಗಿದೆ ಎಂದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಧೂಳು ತಿನ್ನುತ್ತಿದ್ದ ಕಡತಗಳಿಗೆ ಮುಕ್ತಿ ನೀಡುವ ಸಂಕಲ್ಪ ಹೊಂದಿದ್ದು, ಹಳೆ ಕಡತಗಳಿಗೆ ಹೊಸ ಸ್ಪರ್ಶದ ಮೂಲಕ ಮುಕ್ತಿ ನೀಡಲು ಕ್ರಮವಹಿಸಿದೆ. ಅದರ ಭಾಗವಾಗಿಯೇ ಈಚೆಗೆ ಮುಂಡರಗಿಯಲ್ಲಿ ನಡೆದ ತಾಲೂಕು ಮಟ್ಟದ ಜನತಾ ದರ್ಶನದಲ್ಲಿ 331 ಅರ್ಜಿಗಳು ಸ್ವೀಕೃತ ಆಗಿದ್ದವು. ಆ ಸಂದರ್ಭದಲ್ಲಿ ಏಳು ದಿನಗಳ ಒಳಗಾಗಿ ಶೇ 95ರಷ್ಟು ಅರ್ಜಿ ವಿಲೇವಾರಿ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿತ್ತು. 

ಒಗ್ಗಟ್ಟಾಗಿ ಲೋಕಸಭೆ ಚುನಾವಣೆ ಎದುರಿಸಲು ಸಿದ್ಧರಾಗಿ: ಕಾರ್ಯಕರ್ತರಿಗೆ ಶಾಸಕ ಶಿವಲಿಂಗೇಗೌಡ ಕರೆ

ಅದರಂತೆ, 331 ಅರ್ಜಿಗಳ ಪೈಕಿ 319 ಅರ್ಜಿಗಳನ್ನು ತಾರ್ಕಿಕ ಅಂತ್ಯ ನೀಡಲಾಗಿದೆ. ಇನ್ನು 12 ಅರ್ಜಿಗಳು ಮಾತ್ರ ಬಾಕಿ ಉಳಿದಿವೆ. ಇದು ನಮ್ಮ ಸರ್ಕಾರದ ಬದ್ಧತೆ ಎಂದರು. ದೇಶ ವಿಭಜನೆ ಮಾತನಾಡುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ಕುರಿತ ಈಶ್ವರಪ್ಪ ಹೇಳಿಕೆಗೆ ನೀವು ನೀಡಿದ್ದ 24 ಗಂಟೆಯ ಗಡುವು ಮುಗಿದಿದ್ದು, ತಾಕತ್ತಿದ್ದರೆ ನನ್ನನ್ನು ಬಂಧಿಸಲಿ ಎನ್ನುವ ಈಶ್ವರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ, ಈಶ್ವರಪ್ಪ ಅವರಂತಾ ಹಿರಿಯ ನಾಯಕರಿಂದ ಈ ರೀತಿಯ ಮಾತುಗಳನ್ನು ನಾನು ನಿರೀಕ್ಷಿಸಿರಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನಾತ್ಮಕವಾಗಿ ಏನು ಆಗಬೇಕು ಅದು ಆಗಿಯೇ ಆಗುತ್ತದೆ ಎಂದರು.

ಮದುವೆ ಎಂದರೆ ವರ್ಕ್​ ಶಾಪ್, ಕೀಪ್ ಶಾಪಿಂಗ್ ವೈಫಿ: ವಿವಾಹ ವಾರ್ಷಿಕೋತ್ಸವಕ್ಕೆ ಗೋಲ್ಡನ್​ ಸ್ಟಾರ್ ಗಣೇಶ್‌ ಫನ್ನಿ ವಿಶ್!

ಪಿ.ವಿ. ನರಸಿಂಹರಾವ್ ಗೆ ಭಾರತ ರತ್ನ ಸ್ವಾಗತ: ದಿ. ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರಿಗೆ ಭಾರತ ರತ್ನ ನೀಡಿರುವುದು ಸ್ವಾಗತಾರ್ಹ. ಇವತ್ತು ಮೋದಿ ಅವರು ಭಾರತ ಜಗತ್ತಿನ 3 ಅತ್ಯುತ್ತಮ ಆರ್ಥಿಕ ರಾಷ್ಟ್ರವಾಗಿ ಭಾರತ ಹೊರಹೊಮ್ಮುತ್ತಿದೆ ಎನ್ನುತ್ತಿದ್ದಾರಲ್ಲ, ಅದಕ್ಕೆಲ್ಲಾ ಬುನಾದಿ ಹಾಕಿದವರು ನರಸಿಂಹರಾವ್ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಹೇಳಿದರು. ದೇಶದ ಆರ್ಥಿಕತೆಗೆ ಉತ್ತೇಜನ ನೀಡಲು ಮನಮೋಹನ ಸಿಂಗ್ ಅವರಂತಾ ಆರ್ಥಿಕ ತಜ್ಞರನ್ನು ಗುರುತಿಸಿ, ಅವರ ಕೈಯಲ್ಲಿ ದೇಶದ ಹಣಕಾಸು ಖಾತೆಯನ್ನು ನೀಡಿ ಭಾರತವನ್ನು ಆರ್ಥಿಕವಾಗಿ ಸುಭದ್ರವಾಗಿಟ್ಚದ್ದು ನರಸಿಂಹರಾಯರು, ಅವರಿಗೆ ಭಾರತ ರತ್ನ ಬಂದಿರುವುದು ಸಂತಸ ತಂದಿದೆ ಎಂದರು.

Follow Us:
Download App:
  • android
  • ios