Asianet Suvarna News Asianet Suvarna News

ಐದು ವರ್ಷವೂ ಸಿದ್ದರಾಮಯ್ಯ ಸಿಎಂ: ರಾಜಾ ವೆಂಕಟಪ್ಪ ನಾಯಕ

ರಾಜ್ಯ ಸರಕಾರದಲ್ಲಿ ನನಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲವೆಂದು, ಯಾವತ್ತು ಅಸಮಾಧಾನ ಮಾಡಿಕೊಂಡಿಲ್ಲ. ರಾಜ್ಯ ಕಾಂಗ್ರೆಸ್ ಪ್ರಭಾವಿ ನಾಯಕರು ಹಾಗೂ ಹೈಕಮಾಂಡ್‌ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ನನಗೆ ಯಾವುದೇ ಅಸಮಾಧಾನ ಇಲ್ಲವೆಂದು ತಿಳಿಸಿದ ಶಾಸಕ ರಾಜಾ ವೆಂಕಟಪ್ಪ ನಾಯಕ 

Siddaramaiah will Continue as CM for 5 years Says MLA Raja Venkatappa Naik grg
Author
First Published Nov 7, 2023, 12:09 PM IST

ಹುಣಸಗಿ(ನ.07):  ರಾಜ್ಯ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ. 5 ವರ್ಷಗಳವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದು, ಸರ್ಕಾರ ಸುಭದ್ರವಾಗಿರುತ್ತದೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ತಿಳಿಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರದಲ್ಲಿ ನನಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲವೆಂದು, ಯಾವತ್ತು ಅಸಮಾಧಾನ ಮಾಡಿಕೊಂಡಿಲ್ಲ. ರಾಜ್ಯ ಕಾಂಗ್ರೆಸ್ ಪ್ರಭಾವಿ ನಾಯಕರು ಹಾಗೂ ಹೈಕಮಾಂಡ್‌ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ನನಗೆ ಯಾವುದೇ ಅಸಮಾಧಾನ ಇಲ್ಲವೆಂದು ತಿಳಿಸಿದರು.

ನಾನು ಯಾವುದೇ ಆಸೆಗಳು ಇಟ್ಟುಕೊಂಡಿಲ್ಲ, ಪಕ್ಷದಲ್ಲಿ ನಿಷ್ಠೆಯಿಂದ ಕಾರ್ಯೋನ್ಮುಖವಾಗಿದ್ದೇನೆ. ಈಗಾಗಲೇ ಹುಣಸಗಿಯಲ್ಲಿ ಸರಕಾರಿ ಸಕಲ ಕಚೇರಿಗಳು ಸ್ಥಾಪನೆಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಈ ನಿಟ್ಟಿನಲ್ಲಿ ಸರಕಾರವು ಕೂಡ ನೂತನ ತಾಲೂಕಿಗೆ ಅಗತ್ಯ ಇರುವ ಇಲಾಖೆಗಳನ್ನು ಕಲ್ಪಿಸಿಕೊಡಲಿದೆ. ಈಗಾಗಲೇ ಬಿಇಓ ಕಚೇರಿಗೆ ಕಟ್ಟಡ ಪರಿಶೀಲಿಸಿದೆ. ಇನ್ನು ಅವಶ್ಯ ಇರುವ ಇಲಾಖೆಗಳನ್ನು ಹಂತ ಹಂತವಾಗಿ ದೊರಿಕಿಸಿಕೊಡಲಾಗುವುದು ಎಂದು ಭರವಸೆ ನೀಡಿದ ಅವರು, ಸಮಗ್ರ ಇಲಾಖೆಗಳೊಂದಿಗೆ ಮಿನಿ ವಿಧಾನಸೌಧವನ್ನು 2 ವರ್ಷಗಳಲ್ಲಿಯೇ ಕಲ್ಪಿಸಲು ಚಿಂತಿಸಲಾಗಿದೆ ಎಂದರು.

ಸರ್ಕಾರ ಪತನ ಕಾಂಗ್ರೆಸ್ಸಿಗರಿಂದಲೇ ಆಗುತ್ತೆ: ಮಾಜಿ ಸಚಿವ ಬಿ.ಸಿ. ಪಾಟೀಲ್‌

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್, ಬಸವರಾಜ ಬಳಿ, ನಿಂಗಣ್ಣ ಬಾಚಿಮಟ್ಟಿ, ಚನ್ನಯ್ಯಸ್ವಾಮಿ ಹಿರೇಮಠ, ಆರ್.ಎಂ.ರೇವಡಿ, ಬಸವರಾಜ ಸಜ್ಜನ್ ಸೇರಿದಂತೆ ಇತರರಿದ್ದರು.

Follow Us:
Download App:
  • android
  • ios