ಅರ್ಕಾವತಿ ತನಿಖೆಯಾದರೆ ಚುನಾವಣೆಗೂ ಮುನ್ನ ಸಿದ್ದರಾಮಯ್ಯ ಜೈಲಿಗೆ: ನಳಿನ್ ಕುಮಾರ್ ಕಟೀಲು
ಅರ್ಕಾವತಿ ಹಗರಣದ ತನಿಖೆಯಾದರೆ ಭ್ರಷ್ಟಾಚಾರದ ಆರೋಪದಡಿ ಮುಂದಿನ ಚುನಾವಣೆಗೆ ಮುನ್ನವೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಾರೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
ಬಂಟ್ವಾಳ (ಜ.15): ಅರ್ಕಾವತಿ ಹಗರಣದ ತನಿಖೆಯಾದರೆಭ್ರಷ್ಟಾಚಾರದ ಆರೋಪದಡಿ ಮುಂದಿನ ಚುನಾವಣೆಗೆ ಮುನ್ನವೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಾರೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು. ಶ್ರೀಕ್ಷೇತ್ರ ಪೊಳಲಿಯ ಸುಮಂಗಳ ಸಭಾಂಗಣದಲ್ಲಿ ಶನಿವಾರ ಸಂಜೆ ಬಂಟ್ವಾಳ ಶಾಸಕ ರಾಜೇಶ್ ನಾಯ್‌್ಕ ಉಳಿಪ್ಪಾಡಿಗುತ್ತು ನೇತೃತ್ವದಲ್ಲಿ ಬಂಟ್ವಾಳ ಕ್ಷೇತ್ರ ವ್ಯಾಪ್ತಿಯಲ್ಲಿ 13 ದಿನಗಳ ಕಾಲ ನಡೆಯಲಿರುವ ಗ್ರಾಮ ವಿಕಾಸ ಪಾದಯಾತ್ರೆ ’ಗ್ರಾಮದೆಡೆಗೆ ಶಾಸಕರ ನಡಿಗೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪರಿವಾರ ವಾದ, ಆತಂಕವಾದ, ಭ್ರಷ್ಟಾಚಾರ ವಾದ ದೇಶಕ್ಕೆ ಕಾಂಗ್ರೆಸ್ ನೀಡಿದ ಕೊಡುಗೆ ಎಂದು ತೀವ್ರ ವಾಗ್ದಾಳಿ ನಡೆಸಿದ ನಳಿನ್ ಕುಮಾರ್, ದೇಶದೆಲ್ಲೆಡೆ ನರೇಂದ್ರ ಮೋದಿ ಅವರು ತಂದ ಪರಿವರ್ತನೆ ಎದ್ದು ಕಾಣುತ್ತಿದೆ. ಹೀಗಾಗಿ 2023ರ ವಿಧಾನಸಭಾ ಚುನಾವಣೆಯಲ್ಲಿ ಹುಲಿಯಾ ಕಾಡಿಗೆ ಹೋಗುತ್ತೆ, ಬಂಡೆ ಹುಡಿಯಾಗುತ್ತೆ, ಇಲ್ಲಿ ಸಚಿವ ಸ್ಥಾನಕ್ಕೆ ಸೂಟ್ ಹೊಲಿಸಿದವರು ನಿರುದ್ಯೋಗಿ ಆಗ್ತಾರೆ ಎಂದು ವ್ಯಂಗ್ಯವಾಡಿದರು.
ಬಂಟ್ವಾಳದಲ್ಲಿ ರಾಜೇಶ್ ನಾಯ್‌್ಕ ಜನಪರ ಶಾಸಕ ಎಂದು ಬಿಂಬಿತರಾಗಿದ್ದಾರೆ. ಶರತ್ ಹತ್ಯೆ, ಕಲ್ಲಡ್ಕ ಗಲಭೆ ಕಾಂಗ್ರೆಸ್ ಅವಧಿಯಲ್ಲಿ ಆಗಿದ್ದರೆ, ಇವತ್ತು ಬಂಟ್ವಾಳದಲ್ಲಿ ಮನೆ ಮನೆಗೆ ಅನ್ನ ,ನೀರು ನೀಡುವ ಕೆಲಸ ಬಿಜೆಪಿ ಆಡಳಿತದಲ್ಲಿ ಆಗುತ್ತಿದೆ ಎಂದರು.
ಸ್ಯಾಂಡ್, ಲ್ಯಾಂಡ್ ಮಾಫಿಯಾ ಬಂದ್: ಬಂಟ್ವಾಳದಲ್ಲಿ ಈ ಹಿಂದೆ ನಡೆಯುತ್ತಿದ್ದ ಗೂಂಡಾಗಿರಿ ರಾಜಕಾರಣ, ಸ್ಯಾಂಡ್, ಲ್ಯಾಂಡ್ ಮಾಫಿಯಾವನ್ನು ಬಂದ್ ಮಾಡಿರುವ ಶಾಸಕ ರಾಜೇಶ್, ಅಭಿವೃದ್ಧಿ ಅಂದರೆ ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ನಮ್ಮ ಶಾಸಕರ ಮೇಲೆ ಆರೋಪ ಮಾಡಿ ಜೈಲಿಗೆ ಹೋದ, ಆದರೆ ನಮ್ಮ ಮುನಿರತ್ನ ಹೋಗಿಲ್ಲ. ಅಂದರೆ ನಾವು ಸರಿ ಇದ್ದೇವೆ ಎಂದ ನಳಿನ್, ಸಿದ್ದರಾಮಯ್ಯರಿಗೆ ತಾಕತ್ ಇದ್ರೆ ನಮ್ಮ ಶೇ.40 ಪರ್ಸೆಂಟ್ ವಿರುದ್ಧ ಲೋಕಾಯುಕ್ತಕ್ಕೆ ದೂರು ಕೊಡಲಿ ಎಂದು ಸವಾಲೆಸೆದರು.
ವಿವಾದ ರಹಿತ ಶಾಸಕ: ನಾಯಕ ಪದಕ್ಕೆ ಅರ್ಥ ತುಂಬಿದವರು ಶಾಸಕ ರಾಜೇಶ್ ನಾಯ್ಕ…. ರಾಜ್ಯದಲ್ಲಿ ವಿವಾದ ರಹಿತ ಶಾಸಕರಲ್ಲಿ ರಾಜೇಶ್ ನಾಯ್ಕ… ಅವರು ಓರ್ವರಾಗಿದ್ದಾರೆ ಎಂದು ಬಣ್ಣಿಸಿದ ನಳಿನ್ ಕುಮಾರ್ ಅಭಿವೃದ್ಧಿ ಮತ್ತು ಪಕ್ಷ ಸಂಘಟನೆಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕಾರ್ಯ ಶ್ಲಾಘನೀಯ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್‌್ಕ ಮಾತನಾಡಿ ಜನಸೇವೆ ಮಾಡುವ ಅವಕಾಶವನ್ನು ಬಂಟ್ವಾಳದ ಜನತೆ ನೀಡಿದ್ದು, ಇದನ್ನು ಪ್ರಾಮಾಣಿಕವಾಗಿ ಮಾಡಿರುವ ಸಂತಸ ಇದೆ ಎಂದರು.
ಸೋನಿಯಾ ಗಾಂಧಿ ಮುಂದೆ ಕೈಕಟ್ಟಿ ನಿಲ್ತಿದ್ದ ಸಿದ್ರಾಮಯ್ಯ; ಹಾಗಂತ ಅವರನ್ಮ Pomeranian dog ಅನ್ನೋಕಾಗುತ್ತಾ?: ನಳಿನ್
ಕ್ಷೇತ್ರ ಬಿಜೆಪಿ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ ಸಭಾಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಕಿಯೋನ್ಸಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಪೊಳಲಿ ದೇವಳದ ಅರ್ಚಕರಾದ ರಾಮ್ ಭಟ್, ನಾರಾಯಣ ಭಟ್, ಪ್ರಮುಖರಾದ ಸುಲೋಚನಾ ಭಟ್, ತುಂಗಪ್ಪ ಬಂಗೇರ, ಮಾಧವ ಮಾವೆ, ಸುದರ್ಶನ್ ಬಜ, ರವೀಶ್ ಶೆಟ್ಟಿಉಪಸ್ಥಿತರಿದ್ದರು. ಗ್ರಾಮ ವಿಕಾಸ ಪಾದಯಾತ್ರೆ ಸಂಚಾಲಕ ಬಿ. ದೇವದಾಸ್ ಶೆಟ್ಟಿಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಬಿಜೆಪಿ ಕಾರ್ಯದರ್ಶಿ ಡೊಂಬಯ್ಯ ಅರಳ ಕಾರ್ಯಕ್ರಮ ನಿರ್ವಹಿಸಿದರು.
ಗುಜರಾತ್ ನಲ್ಲಿ ಮೋದಿ-ಶಾ ರೋಡ್ ಶೋ ನಡೆಸಿದ ರಥ, ಬಂಟ್ವಾಳದಲ್ಲಿ ಪ್ರಚಾರಕ್ಕೆ ಬಳಕೆ
ಡಿಕೆಶಿಗೆ ಸವಾಲ್: ಡಿಕೆಶಿಯವರೇ ಪವರ್ ಮಿನಿಸ್ಟರ್ ಆಗಿದ್ದಾಗ ಕೃಷಿಕರ ಪಂಪ್ ಸೆಟ್‌ಗಳಿಗೆ ಹತ್ತು ಸಾವಿರ ಶುಲ್ಕ ಹಾಕಿದವರು ನೀವು. ಸುಳ್ಯದ ಬೆಳ್ಳಾರೆಯ ಯುವಕ ಕರೆಂಟ್ ಕೇಳಿದ್ದಕ್ಕೆ ರಾತ್ರೋರಾತ್ರಿ ಜೈಲಿಗೆ ಹಾಕಿದ್ರಿ. ಈಗ ಉಚಿತ ವಿದ್ಯುತ್ ಕೊಡೋ ಭರವಸೆ ಕೊಡ್ತಾ ಇದ್ದೀರಿ, ನೀವು ಈ ರಾಜ್ಯಕ್ಕೆ ಕೊಟ್ಟಿದ್ದು ಕೊಲೆ ಭಾಗ್ಯ ಮಾತ್ರ ಎಂದು ನಳಿನ್ ಕುಮಾರ್ ಟೀಕಾಪ್ರಹಾರಗೈದರು.