Asianet Suvarna News Asianet Suvarna News

ಸೋನಿಯಾ ಗಾಂಧಿ ಮುಂದೆ ಕೈಕಟ್ಟಿ ನಿಲ್ತಿದ್ದ ಸಿದ್ರಾಮಯ್ಯ; ಹಾಗಂತ ಅವರನ್ಮ Pomeranian dog ಅನ್ನೋಕಾಗುತ್ತಾ?: ನಳಿನ್

ಅಧಿಕಾರ ಕಳೆದುಕೊಂಡ ನಂತರ ವಿಪಕ್ಷ ನಾಯಕ ಸಿದ್ದರಾಮಯ್ಯ ಬೌದ್ಧಿಕ ದಿವಾಳಿಯಾಗಿದ್ದು, ಈಗ ಮಾನಸಿಕ ಸಮಸ್ಯೆಗಳು ಶುರುವಾಗಿದ್ದರಿಂದ ಬಾಯಿಗೆ ಬಂದಂತೆ ಮಾತ ನಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಳೀನಕುಮಾರ ಕಟೀಲ್‌ ಸನಾತನ ಹಿಂದು ಧರ್ಮೀಯರು ಕೊಲೆಗಡುಕರೆಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

Siddaramaiah has started suffering from mental illness says Nalina Kumar Kateel rav
Author
First Published Jan 7, 2023, 3:27 PM IST

ದಾವಣಗೆರೆ (ಜ.7) : ಅಧಿಕಾರ ಕಳೆದುಕೊಂಡ ನಂತರ ವಿಪಕ್ಷ ನಾಯಕ ಸಿದ್ದರಾಮಯ್ಯ ಬೌದ್ಧಿಕ ದಿವಾಳಿಯಾಗಿದ್ದು, ಈಗ ಮಾನಸಿಕ ಸಮಸ್ಯೆಗಳು ಶುರುವಾಗಿದ್ದರಿಂದ ಬಾಯಿಗೆ ಬಂದಂತೆ ಮಾತ ನಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಳೀನಕುಮಾರ ಕಟೀಲ್‌ ಸನಾತನ ಹಿಂದು ಧರ್ಮೀಯರು ಕೊಲೆಗಡುಕರೆಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸನಾತನ ಧರ್ಮವು ಭಾರತೀಯರ ಪ್ರತೀಕವಾಗಿದೆ. ಸನಾತನ ಧರ್ಮವೆಂದರೆ ಹಿಂದು ಧರ್ಮವಾಗಿದೆ. ಹಿಂದು ಧರ್ಮಕ್ಕೆ ಸಿದ್ದರಾಮಯ್ಯ ಅವಮಾನ ಮಾಡಿದ್ದಾರೆ. ರಾಜಕೀಯಕ್ಕೂ ಅವಮಾನ ಮಾಡಿದ್ದಾರೆ. ಮುಖ್ಯಮಂತ್ರಿಗಳಿಗೂ ಸಿದ್ದರಾಮಯ್ಯ ಅವಮಾನಿಸಿದ್ದಾರೆ ಎಂದರು.

ಅಸೆಂಬ್ಲಿ ಚುನಾವಣೆ ಮುನ್ನ ಸಿದ್ದರಾಮಯ್ಯ ಜೈಲಿಗೆ: ನಳಿನ್‌ ಕುಮಾರ್‌ ಕಟೀಲ್‌

ಸಮಾಜವಾದಿ ಚಿಂತಕರೆಂದು ಹೇಳಿಕೊಳ್ಳುವ ಸಿದ್ದರಾಮಯ್ಯ(Siddaramaiah) ಇಂತಹ ಬಾಲಿಶ ಹೇಳಿಕೆಗಳನ್ನು ನೀಡುವ ಮೂಲಕ ರಾಜಕೀಯಕ್ಕೆ ಅವಮಾನಿಸುತ್ತಿದ್ದಾರೆ. ಹಿಂದು ಸಮಾಜವನ್ನು ಅವಮಾನಿಸುವುದು ಸಿದ್ದರಾಮಯ್ಯನವರ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಟೀಕಿಸಿದರು. ಹಿಂದೆ ಕಾಂಗ್ರೆಸ್ಸಿನ ನಾಯಕರೇ ಸಿದ್ದರಾಮಯ್ಯ ಬಗ್ಗೆ ಸಾಕಷ್ಟುಹೇಳುತ್ತಿದ್ದರು. ಸೋನಿಯಾ ಗಾಂಧಿ(Soniya gandhi) ಮುಂದೆ ಸಿದ್ದರಾಮಯ್ಯ ಕೈಕಟ್ಟಿಕುಳಿತುಕೊಳ್ಳುತ್ತಿದ್ದರು ಅಂತಾ. ಹಾಗೆಂದ ಮಾತ್ರಕ್ಕೆ ಸಿದ್ದರಾಮಯ್ಯನವರನ್ನು ಪಮೋರಿಯನ್‌ ನಾಯಿ(Pomeranian dog) ಅಂತಾ ಅನ್ನೋಕೆ ಆಗುತ್ತಾ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.

ಬೆಳಗಾವಿ ಕುಕ್ಕರ್ ಒಡೆದ್ರೆ ಡಿಕೆಶಿ ಮನೆ ಒಡೆಯುತ್ತದೆ: ನಳಿನ್ ಕುಮಾರ್ ಕಟೀಲ್ ವ್ಯಂಗ್ಯ

ರಾಜ್ಯವನ್ನೇ ಶಾಪಿಂಗ್‌ ಮಾಲ್‌ ಮಾಡಿದವರು ಕಾಂಗ್ರೆಸ್ಸಿನವರು. ಭ್ರಷ್ಟಾಚಾರ, ಕಮಿಷನ್‌, ಏಜೆಂಟ್‌ಗಿರಿ ತಂದಿದ್ದೇ ಕಾಂಗ್ರೆಸ್ಸಿನವರು. ಇನ್ನು ಪ್ರಿಯಾಂಕ ಖರ್ಗೆ ಹೇಳಿಕೆ ಅದೇ ಪ್ರಿಯಾಂಕರಿಗೆ ಸಲ್ಲುತ್ತದೆ. ಮಲ್ಲಿಕಾರ್ಜುನ ಖರ್ಗೆ 50 ಸಾವಿರ, 20 ಸಾವಿರ ಕೋಟಿ ಅಂತಾ ಲೆಕ್ಕ ಕೊಟ್ಟಿದ್ದಾರೆ. ಹಾಗಾದರೆ, ಇಷ್ಟೊಂದು ಕೋಟಿ ಎಲ್ಲಿಂದ ಬಂದಿತು ಪ್ರಿಯಾಂಕ ಖರ್ಗೆಯವರೇ

ನಳಿನ್‌ ಕುಮಾರ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ

ದಾವಣಗೆರೆಯಿಂದಲೇ ವಿಜಯಿಯಾತ್ರೆ ಆರಂಭ

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್‌ ಶಾ ಹಾಗೂ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ತಂತ್ರಗಾರಿಕೆ ಮೂಲಕ ಬಿಜೆಪಿ ರಾಜ್ಯದಲ್ಲೂ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು. ಬಿಜೆಪಿ ವಿಜಯಿ ಯಾತ್ರೆ ದಾವಣಗೆರೆಯಿಂದಲೇ ಆರಂಭವಾಗಿದೆ. ಪಕ್ಷ ಗೆಲುವಿನ ಓಟವನ್ನು ಮುಂದುವರಿಸಲಿದೆ. ಅಮಿತ್‌ ಶಾ ಹಿಂದೆ ಇಲ್ಲಿಗೆ ಬಂದಾಗ ಇಂತಹದ್ದೇ ಸ್ಪಂದನೆ ವ್ಯಕ್ತವಾಗಿತ್ತು. ಬೂತ್‌ಗೆ ರಾಷ್ಟ್ರೀಯ ಅಧ್ಯಕ್ಷರು ಬಂದು, ಸಂವಾದ ಮಾಡಿದಾಗ ಅದು ಗೆಲುವಿನ ಸಂಕೇತವೆಂಬುದಾಗಿ ರಾಜಕೀಯ ವಿಶ್ಲೇಷಕರೊಬ್ಬರು ಬರೆದಿದ್ದ ಗಮನಸಿದ್ದೇವೆ. ಬಿಜೆಪಿಯಿಂದ 50 ಲಕ್ಷಕ್ಕೂ ಅಧಿಕ ಕಾರ್ಯಕರ್ತರು, ಅಭಿಮಾನಿಗಳ ಮನೆ ಮೇಲೆ ಧ್ವಜ ಹಾರಿಸಲಿದ್ದೇವೆ ಎಂದು ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲ್‌ ಹೇಳಿದರು.

Follow Us:
Download App:
  • android
  • ios