*   ಬಿಜೆಪಿ ಹೇಳುವುದು ಸತ್ಯವೂ ಅಲ್ಲ, ಶ್ರೇಷ್ಠವೂ ಅಲ್ಲ*  ಕಾಂಗ್ರೆಸ್‌ನಿಂದ ಅಸೋಸಿಯೇಟೆಡ್‌ ಜರ್ನಲ್‌ ಲಿಮಿಟೆಡ್‌ಗೆ ಸಾಲ*  ಸಾಲ ತೀರಿಸದ ಕಾರಣ, ಆಸ್ತಿಯನ್ನು ಈಕ್ವಿಟಿಯಾಗಿ ಬದಲಾಯಿಸಲಾಗಿದೆ  

ಹುಬ್ಬಳ್ಳಿ(ಜೂ.18):  ಇ.ಡಿ. ಬಳಸಿಕೊಂಡು ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್‌ ವರಿಷ್ಠರಾದ ಸೋನಿಯಾ ಗಾಂಧಿ-ರಾಹುಲ್‌ ಗಾಂಧಿ ಅವರ ವರ್ಚಸ್ಸಿಗೆ ಧಕ್ಕೆ ತರಲು ದುರುದ್ದೇಶದಿಂದ ಷಡ್ಯಂತ್ರ ಮಾಡಲಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ನಿಂದ ಅಸೋಸಿಯೇಟೆಡ್‌ ಜರ್ನಲ್‌ ಲಿಮಿಟೆಡ್‌ಗೆ ಸಾಲ ನೀಡಲಾಗಿದೆ. ಸಾಲ ತೀರಿಸದ ಕಾರಣ, ಆಸ್ತಿಯನ್ನು ಈಕ್ವಿಟಿಯಾಗಿ ಬದಲಾಯಿಸಲಾಗಿದ್ದು, ಅದು ಯಂಗ್‌ ಇಂಡಿಯಾ ಕಂಪನಿ ಮೂಲಕ ನಡೆದಿದೆ. ಪ್ರಕರಣದಲ್ಲಿ ಎಲ್ಲಿ ಅಪರಾಧ ಆಗಿದೆ ಎಂಬುದನ್ನು ಹೇಳುತ್ತಿಲ್ಲ. ಸುಳ್ಳು ಕೇಸ್‌ ಹಾಕಿ, ಕಿರುಕುಳ ನೀಡಲು, ಕಾಂಗ್ರೆಸ್‌ ನಾಯಕರ ವರ್ಚಸ್ಸು ಕಡಿಮೆ ಮಾಡಲು ಹುನ್ನಾರ ನಡೆಸಲಾಗಿದೆ. ಅದಕ್ಕೆ ನಮ್ಮ ವಿರೋಧವಿದೆ ಎಂದರು.

ಸಿದ್ದರಾಮಯ್ಯ ವಿರುದ್ಧ ಅಟ್ರಾಸಿಟಿ ಕೇಸ್, ಬಂಧಿಸಿ ನ್ಯಾಯ ಒದಗಿಸುವಂತೆ ಒತ್ತಾಯ

ಬಿಜೆಪಿ ಹೇಳುವುದು ಸತ್ಯವೂ ಅಲ್ಲ, ಶ್ರೇಷ್ಠವೂ ಅಲ್ಲ. 1937ರಲ್ಲಿ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಆರಂಭವಾಯಿತು. ಸ್ವಾತಂತ್ರ್ಯದ ಜನಜಾಗೃತಿಗಾಗಿ ಪತ್ರಿಕೆ ಕೆಲಸ ಮಾಡಿತ್ತು. ನಂತರ ಅದು ನಷ್ಟದಲ್ಲಿತ್ತು. ಅದಕ್ಕೆ ಕಾಂಗ್ರೆಸ್‌ನವರು .90 ಕೋಟಿ ಸಾಲ ನೀಡಿದ್ದರು. ಆ ಸಾಲವನ್ನು ಯಂಗ್‌ ಇಂಡಿಯಾ ಕಂಪನಿಗೆ ಷೇರ್‌ ಆಗಿ ಬದಲಾಯಿಸಲಾಗಿದೆ ಎಂದರು.