Asianet Suvarna News Asianet Suvarna News

MLC Poll Campaign: ಗಾಂಧಿಯನ್ನು ಕೊಂದ ಗೋಡ್ಸೆ ಪಳೆಯುಳಿಕೆ ಬಿಜೆಪಿ, ಸಿದ್ದು ವಾಗ್ದಾಳಿ

* ಬೆಳಗಾವಿ ವಿಧಾನಪರಿಷತ್ ಕಣ ಜಿದ್ದಾಜಿದ್ದಿ
* ಕಾಂಗ್ರೆಸ್ ಅಭ್ಯರ್ಥಿ ಪರ ಸಿದ್ದರಾಮಯ್ಯ ಭರ್ಜರಿ ಪ್ರಚಾರ
* ಬಿಜೆಪಿ, ಆರ್‌ಎಸ್‌ಎಸ್‌ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದು

siddaramaiah slams bjp rss  and nathuram-godse at Belagavi during MLC campaign rbj
Author
Bengaluru, First Published Dec 5, 2021, 7:01 PM IST

ಬೆಳಗಾವಿ, (ಡಿ.05): ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆ(Karnataka MLC Election 2021) ರಂಗೇರಿದ್ದು, ಮತ್ತೆ ಆರೋಪ-ಪ್ರತ್ಯಾರೋಪಗಳು ಶುರುವಾಗಿವೆ. ಕಾಂಗ್ರೆಸ್(Congress), ಬಿಜೆಪಿ(BJP) ಹಾಗೂ ಜೆಡಿಎಸ್‌(JDS) ನಾಯಕರುಗಳ ಮಧ್ಯೆ ವಾಕ್ಸಮರ ತಾರಕಕ್ಕೇರುತ್ತಿದೆ.

ಇದಕ್ಕೆ ಪೂಕರವೆಂಬಂತೆ ಇಂದು (ಡಿ.05) ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಬೆಳಗಾವಿಯಲ್ಲಿ(Belagavi) ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಅಭ್ಯರ್ಥಿ  ಚನ್ನರಾಜ ಹಟ್ಟಿಹೊಳಿ (Channaraj Hattiholi) ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ದೇಶಕ್ಕಾಗಿ ಹೋರಾಡಿ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಗಾಂಧಿ ಅವರನ್ನು ಕೊಂದ ನಾಥೂರಾಮ್ ಗೋಡ್ಸೆ ಪಳೆಯುಳಿಕೆ ಬಿಜೆಪಿ ಎಂದು ಕಿಡಿಕಾರಿದರು.

Council Election Karnataka : ಬೆಳಗಾವಿ ಮತ್ತೊಂದು ಸುತ್ತಿನ ರಾಜಕೀಯ ಜಿದ್ದಾಜಿದ್ದಿನ ಸಮರಕ್ಕೆ ಸಜ್ಜು

ದೇಶಕ್ಕಾಗಿ ಬಿಜೆಪಿಯವರು ಏನು ತ್ಯಾಗ ಮಾಡಿದ್ದಾರೆ. ಏನು ಇಲ್ಲ. ಮಹಾತ್ಮ ಗಾಂಧಿಯವರನ್ನು ಕೊಂದಿದ್ದೇ ಇವರ ಕೊಡುಗೆ. ಮಹಾತ್ಮಾ ಗಾಂಧಿಯನ್ನು ಕೊಂದು ಹಾಕಿದ್ದು ಇದೇ ಆರ್‌ಎಸ್‌ಎಸ್‌ನವರು. ದೇಶಕ್ಕಾಗಿ ಹೋರಾಡಿದ ಮಹಾತ್ಮಗಾಂಧಿಯವರನ್ನು ಕೊಂದದ್ದು ಗೋಡ್ಸೆ. ಅವರ ಪಳೆಯುಳಿಕೆಯೇ ಬಿಜೆಪಿ. ಅವರ ವಂಶಸ್ಥರು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಬಿಜೆಪಿಯವರು ಯಾರು ದೇಶಕ್ಕಾಗಿ ಪ್ರಾಣ ಬಿಟ್ಟಿಲ್ಲ. ಲಕ್ಷಾಂತರ ಜನರು ಸ್ವಾತಂತ್ರ್ಯ ಹೋರಟಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ ಒಬ್ಬನೇ ಒಬ್ಬ ಬಿಜೆಪಿಯವರು ಪ್ರಾಣ ತ್ಯಾಗ ಮಾಡಿಲ್ಲ. ಸ್ವಾತಂತ್ರ್ಯ ಬಂದ ಮೇಲೆ ಇವರ ಪಕ್ಷ ಹುಟ್ಟಿದೆ. ಇವರು ಕಾಂಗ್ರೆಸ್‌ಗೆ ದೇಶಭಕ್ತಿಯ ಪಾಠ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಪ್ರಧಾನಿ ನರೇಂದ್ರ ಮೋದಿ ಆರ್‌ಎಸ್‌ಎಸ್‌ನಿಂದ ಬಂದವರು. ಆದರೆ ಬಸವರಾಜ ಬೊಮ್ಮಾಯಿ ಆರ್‌ಎಸ್‌ಎಸ್‌ನವರಲ್ಲ. ಲಾಟರಿ ಹೊಡೆದು ಸಿಎಂ ಆಗಿ ಬಿಟ್ಟಿದ್ದಾರೆ. ಯಡಿಯೂರಪ್ಪ ಅವರನ್ನು ಕಿತ್ತೆಸೆದಾಗ ಇವರನ್ನು ತಂದು ಕೂರಿಸಿದ್ದಾರೆ. ಈಗ ಇವರನ್ನು ತೆಗೆಯಬೇಕು ಎಂದು ಈಶ್ವರಪ್ಪ ಪ್ರಯತ್ನಿಸುತ್ತದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು. 

ಬಿಜೆಪಿಯವರು ಯಾವತ್ತಿಗೂ ಅಧಿಕಾರ ವಿಕೇಂದ್ರಿಕರಣದಲ್ಲಿ ನಂಬಿಕೆ ಇಟ್ಟವರಲ್ಲ. ಕೇಂದ್ರಿಕೃತ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟವರು. ಎಲ್ಲವೂ ದೆಹಲಿಯಲ್ಲೇ ತೀರ್ಮಾನವಾಗಬೇಕು ಎನ್ನುವವರು. ಸ್ಥಳೀಯ ಆಡಳಿತದಲ್ಲಿ ಮೀಸಲಾತಿ ತಂದವರು ನಾವು ಎಂದರು.

ಬೆಳಗಾವಿಯಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಜಿದ್ದಾಜಿದ್ದಿನ ಸಮರ
 
 ಗಡಿ ಜಿಲ್ಲೆ ಬೆಳಗಾವಿ ಮತ್ತೊಂದು ಸುತ್ತಿನ ರಾಜಕೀಯ (Politics) ಜಿದ್ದಾಜಿದ್ದಿನ ಸಮರಕ್ಕೆ ಸಜ್ಜಾಗುತ್ತಿದೆ. ದ್ವಿ ಸದಸ್ಯ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ (BJP), ಕಾಂಗ್ರೆಸ್ (Congress) ಮತ್ತು ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ (Lakhan Jarkiholi) ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿಯ  ಮಹಾಂತೇಶ ಕವಟಗಿಮಠ, ಕಾಂಗ್ರೆಸ್‌ನ ಚನ್ನ ರಾಜ್ ಹಟ್ಟಿಹೊಳಿ, ಎಎಪಿಯ ಶಂಕರ ಹೆಗಡೆ, ಪಕ್ಷೇತರ ಅಭ್ಯರ್ಥಿಗಳಾದ ಲಖನ್ ಜಾರಕಿಹೊಳಿ, ಕಲ್ಮೇಶ ಗಾಣಗಿ ಮತ್ತು ಶಂಕರ ಕುಡ ಸೋಮಣ್ಣವರ ಅಂತಿಮವಾಗಿ ಚುನಾವಣಾ ಕಣದಲ್ಲಿದ್ದಾರೆ. ಎರಡು ಸ್ಥಾನಗಳಿದ್ದರೂ ಕೈ, ಬಿಜೆಪಿ ತಲಾ ಒಂದೇ ಸ್ಥಾನಕ್ಕೆ ಸ್ಪರ್ಧಿಸಿವೆ. ಇನ್ನು ಬಿಜೆಪಿಯಿಂದ ಟಿಕೆಟ್ ಸಿಗದ್ದಕ್ಕೆ ಉದ್ಯಮಿ ಲಖನ್ ಜಾರಕಿಹೊಳಿ ಪಕ್ಷೇತರ ರಾಗಿ ಸ್ಪರ್ಧಿಸಿರುವುದರಿಂದ ಎರಡೂ ಪಕ್ಷಗಳಿಗೆ ಮತ ವಿಭಜನೆ ಆತಂಕವೂ ಎದುರಾಗಿದೆ. ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಮೇಲೆ ಪ್ರಬಲ ಹಿಡಿತ ಹೊಂದಿರುವ ಜಾರಕಿಹೊಳಿ ಸಹೋದರರು ಇಲ್ಲಿ ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸನ್ನೂ ಹೊಂದಿದ್ದಾರೆ. 

ರಮೇಶ್ ಜಾರಕಿಹೊಳಿ (Ramesh jarkiholi) ಅವರಂತೂ ಮೊದಲ ಪ್ರಾಶಸ್ತ್ಯ ಮತ ಬಿಜೆಪಿಗೆ ನೀಡಿ, 2ನೇ ಮತವನ್ನು ಕಾಂಗ್ರೆಸ್ ವಿರುದ್ಧ ಹಾಕಿ ಎಂದು ಜಿಲ್ಲಾದ್ಯಂತ ಪ್ರಚಾರ ಕಾರ್ಯವನ್ನು ಕೈಗೊಂಡಿದ್ದಾರೆ. ತಮ್ಮ ರಾಜಕೀಯ(Politics) ವೈರಿಯಾಗಿರುವ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಅವರನ್ನು ಸೋಲಿಸಲು ಪಣ ತೊಟ್ಟಿದ್ದಾರೆ. 

ಜಾತಿ ಲೆಕ್ಕಾಚಾರ: ಮೇಲ್ಮನೆ ಚುನಾವಣೆಯಲ್ಲಿಯೂ (Election) ಜಾತಿ ಲೆಕ್ಕಾಚಾರವೂ ಶುರುವಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಅಹಿಂದ್ ವರ್ಗದ ಸದಸ್ಯರೇ ಅಧಿಕ ಪ್ರಮಾಣದಲ್ಲಿದ್ದಾರೆ. ಅದರಲ್ಲಿಯೂ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ರಾಜಕೀಯ ಮುಖಂಡರು ಮತಗಳ ಜಾತಿವಾರು ಲೆಕ್ಕಾಚಾರದಲ್ಲಿ ನಿರತರಾಗಿದ್ದಾರೆ  

Follow Us:
Download App:
  • android
  • ios