Asianet Suvarna News Asianet Suvarna News

ಕುಸಿದು ಬಿದ್ದ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ! ಬಿಸಿಲಿನ ತಾಪ ಲೆಕ್ಕಕ್ಕೇ ಇಲ್ಲ!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತಃ ತಾವೇ ಬಿಚ್ಚಿಟ್ಟಿದ್ದಾರೆ. ನಾನು ನಿತ್ಯ ಅಡ್ಡಾಡುವ ಕಾರು ಬದಲಾಗಿರುವ ಕಾರಣ ಸೈಡ್ ಸ್ಟೆಪ್ ಇಲ್ಲದ ಕಾರಿನಲ್ಲಿ ಕಾಲು ಜಾರಿ ಹಿಂದಕ್ಕೆ ಮುಗ್ಗರಿಸಿದ್ದೇನೆ ಎಂದು ತಿಳಿಸಿದ್ದಾರೆ.

Siddaramaiah said what was the reason for his collapse sat
Author
First Published Apr 29, 2023, 1:50 PM IST

ಬೆಂಗಳೂರು (ಏ.29): ವಿಜಯನಗರ ಜಿಲ್ಲೆಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾರನ್ನು ಹತ್ತುವಾಗ ಕುಸಿದು ಬಿದ್ದ ಕಾರಣವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತಃ ತಾವೇ ಬಿಚ್ಚಿಟ್ಟಿದ್ದಾರೆ. ನಾನು ನಿತ್ಯ ಅಡ್ಡಾಡುವ ಕಾರು ಬದಲಾಗಿರುವ ಕಾರಣ ಸೈಡ್ ಸ್ಟೆಪ್ ಇಲ್ಲದ ಕಾರಿನಲ್ಲಿ ಕಾಲು ಜಾರಿ ಹಿಂದಕ್ಕೆ ಮುಗ್ಗರಿಸಿದ್ದೇನೆ ಎಂದು ತಿಳಿಸಿದ್ದಾರೆ.

ಈ ಕುರಿತು ಸ್ವತಃ ಸಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಸ್ಪಷ್ಟೀಕರಣ ನೀಡಿದ ಸಿದ್ದರಾಮಯ್ಯ ಅವರು, ನಾನು ನಿತ್ಯ ಅಡ್ಡಾಡುವ ಕಾರು ಬದಲಾಗಿರುವ ಕಾರಣ ಸೈಡ್ ಸ್ಟೆಪ್ ಇಲ್ಲದ ಕಾರಿನಲ್ಲಿ ಕಾಲು ಜಾರಿ ಹಿಂದಕ್ಕೆ ಮುಗ್ಗರಿಸಿದ್ದೇನೆ. ಯಾರೊಬ್ಬರೂ ಗಾಬರಿ ಆಗುವಂತಹ ಘಟನೆ ಏನೂ ನಡೆದಿಲ್ಲ. ನಾನು ಗಟ್ಟಿಮುಟ್ಟಾಗಿದ್ದೇನೆ. ಈಗ ನಾನು ಆರಾಮವಾಗಿದ್ದೇನೆ ಎಂದು ತಿಳಿಸಿದ್ದಾರೆ. ಇನ್ನು ಹೆಲಿಪ್ಯಾಡ್‌ನಿಂದ ಕಾರಿನಲ್ಲಿ ಪ್ರಚಾರ ಸ್ಥಳಕ್ಕೆ ಹೊರಟ ಸಿದ್ದರಾಮಯ್ಯ ಅವರು ಎಲ್ಲಿಯೂ ವಿಶ್ರಾಂತಿ ಪಡೆಯದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದು ಹೇಳಿದರು.

ಬಿಸಿಲಿನ ತಾಪಕ್ಕೆ ಕುಸಿದು ಬಿದ್ದ ಸಿದ್ದರಾಮಯ್ಯ: ವೈದ್ಯರಿಂದ ತಪಾಸಣೆ

ಇಂದು ಮಧ್ಯಾಹ್ನ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ  ಡಾ. ಎನ್.ಟಿ. ಶ್ರೀನಿವಾಸ್ ಪರವಾಗಿ ಪ್ರಚಾರ ಮಾಡುವ ಕಾರ್ಯಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಸಿದ್ದರಾಮಯ್ಯ ಅವರು, ಹೆಲಿಕಾಪ್ಟರ್‌ ಇಳಿದು ಕೈ ಬೀಸಿ ಕಾರಿನತ್ತ ಹೆಜ್ಜೆ ಹಾಕಿದರು. ಇನ್ನು ಕಾರನ್ನು ಹತ್ತುವಾಗ ಬಾಗಿಲ ಬಳಿಯೇ ಕುಸಿದರು. ಈ ವೇಳೆ ಅಕ್ಕಪಕ್ಕದಲ್ಲಿದ್ದ ಕಾರ್ಯಕರ್ತರು ಅವರನ್ನು ಹಿಡಿದುಕೊಮಡು ನಿಂತುಕೊಳ್ಳಲು ಸಹಾಯ ಮಾಡಿದರು. ನಂತರ ಕಾರಿನಲ್ಲಿ ಕುಳಿತು ನೀರನ್ನು ಕುಡಿದು ಅಲ್ಲಿಂದ ಪ್ರಚಾರದ ಸ್ಥಳಕ್ಕೆ ತೆರಳಿದರು.

ಸಿದ್ದರಾಮಯ್ಯ ಕುಸಿಯಲು ಇನ್ನೊಂಂದು ಕಾರಣ : ಸಿದ್ದರಾಮಯ್ಯ ಕುಸಿದಿರೋದು ಸನ್ ಸ್ಟೋಕ್ ಜೊತೆಗೆ ಮತ್ತೊಂದು ಕಾರಣವಿದೆ. ನಿನ್ನೆ ಎಡಗೈಗೆ ಸ್ವಲ್ಪ ಗಾಯವಾ ಗಿತ್ತಂತೆ. ಅದರ ಮೇಲೆ ಭಾರ ಹಾಕಿರೋದ್ರಿಂದಲೇ ಕುಸಿದಿದ್ದಾರೆ. ಕಾರು ಏರುವಾಗ ಡೋರ್ ಮೇಲೆ ಹತ್ತಿ ನಿಲ್ಲುವಾಗ ಎಡಗೈ ಮೇಲೆ ಭಾರವಾಗಿದೆ. ಹೀಗಾಗಿ ಸನ್ ಸ್ಟ್ರೋಕ್ ಜೊತೆಗೆ ಕೈ ಮೇಲೆ ಭಾರ ಹಾಕಿರೋದೆ ಬಿಳಲು ಕಾರಣವೆಂದು ಹೇಳಲಾಗ್ತಿದೆ ಕಳೆದ ವಾರ ಬೆಂಗಳೂರಿನಲ್ಲಿ ಇದ್ದಾಗ ಎಡಗೈಗೆ ಪಟ್ಟಿ ಹಾಕಿಕೊಂಡು ಓಡಾಡಿದ್ದರು ಎಂದು ಅವರ ಆಪ್ತರು ಮಾಹಿತಿ ನೀಡಿದ್ದರು. ಆದರೆ, ಈಗ ಸಿದ್ದರಾಮಯ್ಯ ಅವರೇ ಸ್ಪಷ್ಟ ಕಾರಣ ಬಿಚ್ಚಿಟ್ಟಿದ್ದಾರೆ.

ಶ್ರೀನಿವಾಸ್‌ ಪರ ಪ್ರಚಾರ ಕಾರ್ಯದಲ್ಲಿ ಭಾಗಿ: ಇನ್ನು ಹೆಲಿಪ್ಯಾಡ್‌ನಲ್ಲಿ ನಡೆದ ಘಟನೆಯ ನಂತರ ವೈದ್ಯರ ಸಲಹೆಯಂತೆ ನೀರು ಹಾಗೂ ಗ್ಲುಕೋಸ್‌ ನೀರನ್ನು ಸೇವಿಸಿದರು. ನಂತರ ವಿಶ್ರಾಂತಿಯನ್ನು ಪಡೆಯದೇ ಪ್ರಚಾರ ಕಾರ್ಯಕ್ಕೆ ತೆರಳಿದರು. ನಂತರ, ಕೂಡ್ಲಿಗಿಯಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಪಕ್ಷದ ಅಭ್ಯರ್ಥಿ ಡಾ. ಶ್ರೀನಿವಾಸ್ ಅವರನ್ನು ಗರಿಷ್ಠ ಮತಗಳ ಅಂತರದಿಂದ ಗೆಲ್ಲಿಸಿಕೊಡುವಂತೆ ಮನವಿ ಮಾಡಿದರು.

ಮೋದಿ, ಬಿಜೆಪಿಗರ ಹುಟ್ಟುಗುಣ ವಿಷ ಕಾರುವುದು: ಬಿ.ಕೆ.ಹರಿಪ್ರಸಾದ್‌

ಈ ವೇಳೆ ಪಿಎಸ್‌ಐ ನೇಮಕಾತಿಯಲ್ಲಿ ಪ್ರತೀ ಹುದ್ದೆಗೆ 70 - 80 ಲಕ್ಷ ಲಂಚ ನಿಗದಿ ಮಾಡಿ ಕೋಟಿ ಕೋಟಿ ಹಣ ಕೊಳ್ಳೆ ಹೊಡೆದ ಶಾಸಕರು, ಸಚಿವರು ಇಂದೂ ಕೂಡ ಹೊರಗಡೆ ನೆಮ್ಮದಿಯಾಗಿದ್ದಾರೆ ಎಂದು ಬಿಜೆಪಿ ವಿರುದ್ಧ ಆರೋಪ ಮಾಡಿದರು. ಇನ್ನು ಪ್ರಾಮಾಣಿಕವಾಗಿ ಪರೀಕ್ಷೆ ಎದುರಿಸಿ ಪಾಸಾದ ಅಭ್ಯರ್ಥಿಗಳ ಸರ್ಕಾರಿ ಉದ್ಯೋಗದ ಕನಸಿಗೆ ಕೊಳ್ಳಿಯಿಟ್ಟು, ಅವರ ಭವಿಷ್ಯವನ್ನು ಬಲಿಪಡೆದ ಬಿಜೆಪಿ ಸರ್ಕಾರದ ಭ್ರಷ್ಟಾಚಾರಗಳ ಕರ್ಮಕಾಂಡವನ್ನು ಮತ ನೀಡುವ ಮುನ್ನ ನೆನಪಿಸಿಕೊಂಡು, ನಿಮ್ಮ ಮಕ್ಕಳ, ಅಣ್ಣ ತಂಗಿಯರ ಉಜ್ವಲ ಭವಿಷ್ಯಕ್ಕಾಗಿ ಕಾಂಗ್ರೆಸನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

Follow Us:
Download App:
  • android
  • ios