Asianet Suvarna News Asianet Suvarna News

ಮಂಡ್ಯಕ್ಕೆ ಸುಮಲತಾ ಅಂಬರೀಶ್ ಆಹ್ವಾನ: ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟ ಸಿದ್ದು

* ಮಂಡ್ಯಕ್ಕೆ ಸಿದ್ದರಾಮಯ್ಯಗೆ ಆಹ್ವಾನ ಕೊಟ್ಟ ಸುಮಲತಾ ಅಂಬರೀಶ್
* ಸುಮಲತಾ ಅಂಬರೀಶ್ ಆಹ್ವಾನದ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ
* ಬಾದಾಮಿಯಲ್ಲಿ ಅಭಿಪ್ರಾಯ ತಿಳಿಸಿದ ಸಿದ್ದರಾಮಯ್ಯ

Siddaramaiah Reacts On Sumalatha Ambareesh invite To Mandya rbj
Author
Bengaluru, First Published Jul 12, 2021, 4:29 PM IST
  • Facebook
  • Twitter
  • Whatsapp

ಬಾಗಲಕೋಟೆ, (ಜುಲೈ.12): ಸುಮಲತಾ ಅಂಬರೀಶ್ ಅವರು ಮಂಡ್ಯಕ್ಕೆ ಆಹ್ವಾನ ಮಾಡಿದ ವಿಚಾರ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನನಗೆ ಸುಮಲತಾ ಅವರು ಆಹ್ವಾನ ಮಾಡಿದ್ದು ನಿಜ. ಮಂಡ್ಯಕ್ಕೆ ಹೋಗುತ್ತೇನೆ. ಯಾವಾಗ ಹೋಗುತ್ತೇನೆ ಅಂತ ಇನ್ನೂ ನಿಧಾ೯ರ ಆಗಿಲ್ಲ. ಯಾರ ಹೋರಾಟಕ್ಕೂ ನನ್ನ ಬೆಂಬಲ ಇಲ್ಲ. ನ್ಯಾಯಕ್ಕೆ ನನ್ನ ಬೆಂಬಲ ಎಂದು ತಮ್ಮ ನಿಲುವು ಪ್ರಕಟಿಸಿದರು.

ಇಂದು (ಸೋಮವಾರ) ಬಾದಾಮಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಯಾರ ತಪ್ಪಿದೆ ಅಂತ ನನಗೆ ಗೊತ್ತಿಲ್ಲ,  ಸುಮಲತಾಳದ್ದು ಐತೋ, ಕುಮಾರಸ್ವಾಮಿದ್ದು ಐತೋ, ಅಥವಾ ಜೆಡಿಎಸ್ ನದ್ದು  ಅಂತಲ್ಲ, ನ್ಯಾಯದ ಪರ ನನ್ನ ಬೆಂಬಲ ಎಂದರು.

KRS ಸಮರ ಮತ್ತು ಅಂಬರೀಶ್ ಅಂತಿಮ ಸಂಸ್ಕಾರ!  ಮಾತಿನ ಯುದ್ಧ

ಅಕ್ರಮ ಮೈನಿಂಗ್ ನಡೆಯುತ್ತಿದ್ದರೆ ಅದನ್ನು ನಿಲ್ಲಸಬೇಕಾಗಿದ್ದು ಸಕಾ೯ರದ ಜವಾಬ್ದಾರಿ. ಓವ೯ ಲೋಕಸಭಾ ಸದಸ್ಯೆ ಅವರ ಆರೋಪವನ್ನು ಸಕಾ೯ರ ಗಂಭೀರವಾಗಿ ಪರಿಗಣಿಸಬೇಕಿತ್ತು. ಅಕ್ರಮ ಮೈನಿಂಗ್, ಕ್ರಸರ್ ಬಗ್ಗೆ ವಿಚಾರಣೆ ಮಾಡಿ ಕ್ರಮ ಕೈಗೊಳ್ಳಬೇಕಿತ್ತು ಎಂದು ಹೇಳಿದರು.

ರಾಜ್ಯದಲ್ಲಿ ಎಲ್ಲೆಡೆ ಅಕ್ರಮ ನಡೆಯುತ್ತಿದೆ. ಈ ಅಕ್ರಮ ಸಿಎಂ ಯಡಿಯೂರಪ್ಪ, ಸಚಿವ ಈಶ್ವರಪ್ಪ ಕ್ಷೇತ್ರ ಸೇರಿದಂತೆ ಎಲ್ಲೆಡೆ ನಡೆಯುತ್ತಿದೆ. ಸಕಾ೯ರ ಏನು ಹೇಳಿದ್ರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಯಡಿಯೂರಪ್ಪಗೆ ಕುಚಿ೯ ಉಳಿಸಿಕೊಳ್ಳುವುದು, ಮಗನಿಗೆ ದುಡ್ಡು ಹೊಡೆಯೋದೆ ಕೆಲಸವಾಗಿದೆ ಎಂದು ಕಿಡಿಕಾರಿದರು.

Follow Us:
Download App:
  • android
  • ios