ಬಾಗಲಕೋಟೆ, (ಫೆ.03): ಫೆಬ್ರವರಿ 6 ಆದ್ಮೇಲೆ ನಿಮಗೆ ಸ್ಪಷ್ಟ ಚಿತ್ರ ಸಿಗುತ್ತೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಈಗ ಬೂದಿಮುಚ್ಚಿದ ಕೆಂಡದಂತಿದೆ. ಫೆಬ್ರವರಿ 6ನೇ ತಾರೀಖು ಆದ್ಮೇಲೆ ಸ್ಪಷ್ಟ ಚಿತ್ರಣ ಸಿಗುತ್ತೆ ಎಂದು ಹೇಳಿದರು. 

10+3 ಅಡಿಯಲ್ಲಿ ಸಂಪುಟ ವಿಸ್ತರಣೆ: ಗೆದ್ದ ಓರ್ವ ಶಾಸಕನಿಗಿಲ್ಲ ಮಂತ್ರಿಗಿರಿ.!

ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಿದ್ದರಾಮಯ್ಯನವರ ಮಾತಿನ ಹಿಂದಿನ ಅರ್ಥವೇನು..? ಯಾವ ದೃಷ್ಟಿಯಿಂದ ಸಿದ್ದರಾಮಯ್ಯ ಈ ರೀತಿ ಹೇಳಿದರು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಈಗಾಗಲೇ 10+3 ಅನ್ವಯ 10 ನೂತನ ಶಾಸಕರು ಹಾಗೂ ಮೂವರು ಹಿರಿಯ ಬಿಜೆಪಿ ಶಾಸಕರಿಗೆ ಮಂತ್ರಿ ಸ್ಥಾನ ನೀಡಲು ಯಡಿಯೂರಪ್ಪ ತೀರ್ಮಾನಿಸಿದ್ದು, ಫೆ.06 ಅಂದ್ರೆ ಗುರುವಾರ ಸಂಪುಟ ವಿಸ್ತರಣೆಯಾಗಲಿದೆ. ಇದಕ್ಕೆ ಹೈಕಮಾಂಡ್‌ ಸಹ ಒಪ್ಪಿಗೆ ಸೂಚಿಸಿದೆ.

ಸೋತ ಮತ್ತೋರ್ವ ನಾಯಕನಿಗೆ ಮಂತ್ರಿಗಿರಿ: ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ

ಆದ್ರೆ, ಸೋತಿರುವ ಸಿ.ಪಿ.ಯೋಗೇಶ್ವರ್‌ ಮಂತ್ರಿ ಸ್ಥಾನ ನೀಡುತ್ತಿರುವುದು ಮೂಲ ಬಿಜೆಪಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಮೂಲ ಬಿಜೆಪಿ ಶಾಸಕರು ರಾತ್ರೋ ರಾತ್ರಿ ಗುಪ್ತ್ ಗುಪ್ತ್ ಸಭೆ ನಡೆಸಿದ್ದಾರೆ.

ಇವೆಲ್ಲವುಗಳ ಬೆಳವಣಿಗೆಯಲ್ಲಿ ಸಿದ್ದರಾಮಯ್ಯ ಅವರು ಈ ತರಹದ ಹೇಳಿಕೆ ಕೊಟ್ಟಿರುವುದು ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣ ಏನಾದರೂ ಸಂಭವಿಸಹುದು ಎಂದು ಪರೋಕ್ಷವಾಗಿ ಹೇಳಿದ್ದಾರೆ.