ಮಲ್ಲಿಕಾರ್ಜುನ ಖರ್ಗೆ ಮತ್ತೆ ಜೆಡಿಎಸ್ ಜತೆ ದೋಸ್ತಿ ಮಾಡ್ತಾರಾ? ಸಿದ್ದರಾಮಯ್ಯ ಹೇಳಿದ್ದು ಹೀಗೆ
* ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟ
* ಯಾರಿಗೂ ಸ್ಪಷ್ಟ ಬಹುಮತ ಬಾರದೇ ಅತಂತ್ರ ಪರಿಸ್ಥಿತಿ ನಿರ್ಮಾಣ
* ಮಲ್ಲಿಕಾರ್ಜುನ ಖರ್ಗೆ ಮತ್ತೆ ಜೆಡಿಎಸ್ ಜತೆ ದೋಸ್ತಿ ಮಾಡ್ತಾರಾ?
ಬೆಂಗಳೂರು, (ಸೆ.06): ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚಿಸಲು ಕಾಂಗ್ರೆಸ್ ನಾಯಕರು ದೇವೇಗೌಡ್ರ ನಿವಾಸಕ್ಕೆ ಹೋಗಿದ್ರು. ಅದರಲ್ಲಿ ಮಲ್ಲಿಕಾರ್ಜುನ ಖರ್ಗೆ ಸಹ ಇದ್ರು. ಬಳಿಕ ಮೈತ್ರಿ ಮುರಿದು ಬಿತ್ತು. ಇದೀಗ ಮತ್ತೆ ಮಲ್ಲಿಕಾರ್ಜುನ ಖರ್ಗೆ ಕುಮಾರಸ್ವಾಮಿ ಅಥವಾ ದೇವೇಗೌಡ್ರ ಮನೆ ಬಾಗಿಲು ತಟ್ಟುತ್ತಾರಾ..? ಎನ್ನುವ ಚರ್ಚೆಗಳು ಶುರುವಾಗಿವೆ.
ಹೌದು....ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಯಾರಿಗೂ ಸ್ಪಷ್ಟ ಬಹುಮತ ಬಾರದೇ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಜೆಡಿಎಸ್ ಕಿಂಗ್ ಮೇಕರ ಸ್ಥಾನ ವಹಿಸಿದೆ. ಅವರು ಯಾರಿಗೆ ಬೆಂಬಲಿಸುತ್ತಾರೆಯೋ ಅವರು ಆಡಳಿತ ಚುಕ್ಕಾಣಿ ಹಿಡಿಯಲಿದೆ.
ಕಲಬುರಗಿ ಅತಂತ್ರ : 4 ಸ್ಥಾನದಲ್ಲಿ ಗೆದ್ದ ಜೆಡಿಎಸ್ ಕಿಂಗ್ ಮೇಕರ್
ಈ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರವನ್ನು ಹಿಡಿತದಲ್ಲಿಟ್ಟುಕೊಳ್ಳಲು ಮಲ್ಲಿಕಾರ್ಜುನ ಖರ್ಗೆ ಅವರು ಮತ್ತೆ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಬೇಕಾದ ಅನಿರ್ವಾಯತೆ ಎದುರಾಗಿದೆ. ಇನ್ನು ಈ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಜೆಡಿಎಸ್ ಮತ್ತು ಪಕ್ಷೇತರರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಬಳಿ ಮಾತಾಡುತ್ತೇನೆ. ಮೊದಲು ಖರ್ಗೆ ಬಳಿ ಚರ್ಚಿಸಿ ಅಮೇಲೆ ಒಂದು ತೀರ್ಮಾನಕ್ಕೆ ಬರುತ್ತೇವೆ. ನಾನು ಈಗಲೇ ಇದರ ಕುರಿತು ಮಾತಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಲಬುರಗಿಯ ಪಾಲಿಕೆ ಚುನಾವಣೆಯ ಒಟ್ಟು 55 ವಾರ್ಡ್ಗಳ ಮತ ಎಣಿಕೆ ಮುಕ್ತಾಯವಾಗಿದೆ. 55 ವಾರ್ಡುಗಳ ಪೈಕಿ ಕಾಂಗ್ರೆಸ್ 27ರಲ್ಲಿ ಗೆಲುವು ಸಾಧಿಸಿದ್ರೆ, ಬಿಜೆಪಿ 23, ಜೆಡಿಎಸ್ 4, ಪಕ್ಷೇತರೊಬ್ಬರು ಗೆಲುವು ಸಾಧಿಸಿದ್ದಾರೆ. ಇನ್ನು ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಮ್ಯಾಜಿಕ್ ನಂಬರ್ 28 ಆಗಿದ್ದು, ಕಾಂಗ್ರೆಸ್ಗೆ ಇನ್ನೂ ಒಂದು ಸೀಟು ಬೇಕಿದೆ.
ಅಧಿಕಾರಕ್ಕೇರಲು ಕೇವಲ ಒಂದು ಬೇಕಿರುವುದರಿಂದ ಇರುವ ಓರ್ವ ಪಕ್ಷೇತರ ಸದಸ್ಯನನ್ನು ಕಾಂಗ್ರೆಸ್ ಸೆಳೆಯುವ ಎಲ್ಲಾ ಸಾಧ್ಯತೆಗಳಿವೆ.