Asianet Suvarna News Asianet Suvarna News

ಬಿಎಸ್‌ವೈ ಭೇಟಿ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ

*  ನಮ್ಮ-ಅವರ ಸಿದ್ಧಾಂತ ತದ್ವಿರುದ್ಧ: ಸಿದ್ದರಾಯಯ್ಯ
*  ಟಿಪ್ಪು ಬಗ್ಗೆ ಇನ್ನೊಮ್ಮೆ ಇಬ್ರಾಹಿಂ ಓದಿಕೊಳ್ಳಲಿ
*  ಕುಮಾರಸ್ವಾಮಿ ಹೇಳಿದ್ದೆಲ್ಲವೂ ವೇದವಾಕ್ಯವಲ್ಲ
 

Siddaramaiah React on BS Yediyurappa Met Issue grg
Author
Bengaluru, First Published Oct 17, 2021, 2:35 PM IST
  • Facebook
  • Twitter
  • Whatsapp

ಹುಬ್ಬಳ್ಳಿ(ಅ.17):  ನಾನು ಬಿ.ಎಸ್‌. ಯಡಿಯೂರಪ್ಪ(BS Yediyurappa) ಅವರನ್ನು ಭೇಟಿ ಮಾಡಿದ್ದನ್ನು ಸಾಬೀತುಪಡಿಸಿದರೆ ರಾಜಕೀಯದಿಂದ ನಿವೃತ್ತಿ(Political Retirement) ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು ಅಪ್ಪಟ ಸುಳ್ಳು. ಅವರು ಆರ್‌ಎಸ್‌ಎಸ್‌ನಿಂದ(RSS) ಬಂದವರು. ಅವರು ನಾವು ತದ್ವಿರುದ್ಧ. ಅವರನ್ನು ಭೇಟಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 
ಅಧಿಕಾರದಲ್ಲಿ ಇರುವವರನ್ನು ನಾನು ಯಾವತ್ತೂ ಭೇಟಿಯಾಗಲ್ಲ. ಅದನ್ನೆಲ್ಲ ನಾವು ಕಲಿತೇ ಇಲ್ಲ. ಅದು ನನ್ನ ಸಿದ್ಧಾಂತ ಎಂದ ಅವರು, ಬೇಕಾದರೆ ನಾನು ಭೇಟಿಯಾಗಿದ್ದೇನೋ ಇಲ್ಲವೋ ಎಂಬುದನ್ನು ಅವರನ್ನು ಕೇಳಿ ನೋಡಿ. ಕಾಂಗ್ರೆಸ್‌ ಜಾತ್ಯತೀತ, ಪ್ರಜಾಪ್ರಭುತ್ವಕ್ಕೆ ಹೆಸರಾದ ಪಕ್ಷ. ಬಿಜೆಪಿ(BJP) ಅದಕ್ಕೆ ತದ್ವಿರುದ್ಧ. ಭೇಟಿಯಾಗುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

ಸಲೀಂ-ಉಗ್ರಪ್ಪ(Saleem-VS Ugrappa) ಸಂಭಾಷಣೆ ಹಿಂದೆ ಸಿದ್ದರಾಮಯ್ಯ ಕೈವಾಡವಿದೆ ಎನ್ನುವ ಜಗದೀಶ ಶೆಟ್ಟರ್‌(Jagadish Shettar) ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಹಾಗಿದ್ದರೆ ಯತ್ನಾಳ(Basanagouda Patil Yatnal), ವಿಶ್ವನಾಥ ಇಬ್ಬರು ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರದ(Corruption) ಆರೋಪ ಮಾಡಿದ್ದರು. ಅನಂತಕುಮಾರ, ಬಿ.ಎಸ್‌. ಯಡಿಯೂರಪ್ಪ ಮಾತನಾಡಿದ್ದರು. ಅವಕ್ಕೂ ನಾನೇ ಕಾರಣನಾ? ಶೆಟ್ಟರ್‌ ಮುಖ್ಯಮಂತ್ರಿ ಆಗಿದ್ದವರು. ಅವರೇ ಹೀಗೆ ಮಾತನಾಡಿದರೆ ಹೇಗೆ? ಎಲ್ಲದಕ್ಕೂ ಸಿದ್ದರಾಮಯ್ಯ ಟಾರ್ಗೆಟ್‌ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು. ಉಗ್ರಪ್ಪ ನಿಮ್ಮ ಪಟ್ಟಶಿಷ್ಯನಂತೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಉಗ್ರಪ್ಪ ಸೀನಿಯರ್‌. ಅವರು ಶಿಷ್ಯರಲ್ಲ. ಲೀಡರ್‌ ಎಂದು ನುಡಿದರು.

'ಇದು ರಾಜಕೀಯವಾಗಿ ಡಿಕೆಶಿ ಮುಗಿಸಲು ಸಿದ್ದರಾಮಯ್ಯ ಷಡ್ಯಂತ್ರ'

ಜಾತಿ ಸಮೀಕ್ಷೆ(Caste Census) ಬಗ್ಗೆ ಕೂಡಾ ಜಗದೀಶ್‌ ಶೆಟ್ಟರ್‌ ಸುಳ್ಳು ಹೇಳುತ್ತಿದ್ದಾರೆ. ನನ್ನ ಕಾಲದಲ್ಲಿ ಸಮೀಕ್ಷೆ ಪೂರ್ಣ ಆಗಿದ್ದರೆ ನಾನೇ ಹೊರ ತರುತ್ತಿದ್ದೆ. ಆದರೆ ಆಗ ವರದಿ ಪೂರ್ಣವಾಗಿರಲಿಲ್ಲ. ಬೇಕಾದರೆ ಕಮಿಷನ್‌ನ ಅಧ್ಯಕ್ಷರಾಗಿರುವ ಕಾಂತ್‌ರಾಜ್‌ ಅವರನ್ನು ಕೇಳಲಿ ಎಂದ ಅವರು, ಡಿಸೆಂಬರ್‌ನಲ್ಲಿ ನಡೆಯುವ ಅಧಿವೇಶನದಲ್ಲಿ ಜಾತಿ ಸಮೀಕ್ಷೆ ವರದಿ ಬಹಿರಂಗಕ್ಕೆ ಒತ್ತಾಯಿಸುವೆ ಎಂದು ತಿಳಿಸಿದರು.

ಪ್ರಧಾನಿ ಕೊಡುಗೆ:

ಜಾಗತಿಕ ಹಸಿವು ಸೂಚ್ಯಂಕದಲ್ಲಿ(Global Hunger Index) ಭಾರತ(India) 101ಕ್ಕೆ ಸ್ಥಾನಕ್ಕೆ ಬಂದಿದೆ. ಇದು ಪ್ರಧಾನಿ ಮೋದಿ(Narendra Modi) ಅವರ ಕೊಡುಗೆ. ನಾನು ದೇಶ ಉದ್ಧಾರ, ಸ್ವರ್ಗ, ಅಚ್ಛೇ ದಿನ್‌(Achche Din) ಮಾಡುತ್ತೇನೆ ಎಂದು ಮೋದಿ ಹೇಳಿದ್ದರು. ಈಗ ಜನರು ಹಸಿವಿನಿಂದ(Hunger) ಬಳಲುವಂತೆ ಮಾಡಿದ್ದಾರೆ. 2020ರಲ್ಲಿ ಹಸಿವಿನ ಸೂಚ್ಯಂಕದಲ್ಲಿ 94ನೇ ಸ್ಥಾನದಲ್ಲಿತ್ತು. ಆದರೆ ಇದೀಗ 101ಕ್ಕೇರಿದೆ. ಅಂದರೆ ಬಡತನ(Poor) ಮತ್ತಷ್ಟು ಹೆಚ್ಚಾಗಿದೆ ಎಂದರು.

ಅನ್ನಭಾಗ್ಯ(Anna Bhagya) ಯೋಜನೆ ಸೋಮಾರಿಗಳನ್ನು ಮಾಡುತ್ತಿದೆ ಎಂಬ ಎಚ್‌.ಡಿ. ಕುಮಾರಸ್ವಾಮಿ ಆರೋಪಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು, ಹೊಟ್ಟೆ ತುಂಬಿದವರು ಹಾಗೇ ಹೇಳುತ್ತಾರೆ. ಹಸಿವು ಯಾರು ಅನುಭವಿಸಿದ್ದಾರೆ ಅವರು ಯಾರು ಈ ರೀತಿ ಹೇಳುವುದಿಲ್ಲ. ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದೆಲ್ಲವೂ ವೇದವಾಕ್ಯವಲ್ಲ. ಅನ್ನಭಾಗ್ಯದಿಂದ ಸೋಮಾರಿಗಳಾಗಿದ್ದಾರೆ ಎಂದು ಬಡವರು ಹೇಳಲಿ. ಅವರು ಅಕ್ಕಿ ಕೊಡಬೇಡಿ ಎಂದು ಹೇಳುತ್ತಾರೆಯೇ? ಕೇಳಿ ನೋಡಿ. ಆಗ ತಿಳಿಯಲಿದೆ ಎಂದು ಮರು ಪ್ರಶ್ನಿಸಿದರು.

ಮುಸ್ಲಿಂ ಮತಕ್ಕಾಗಿ ಆರೆಸ್ಸೆಸ್‌ ಟೀಕಿಸಲು ಸಿದ್ದು, ಎಚ್‌ಡಿಕೆ ಪೈಪೋಟಿ : ಆರಗ

ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ(DK Shivakumar) ಬೇರೆ ಬೇರೆ ಕಡೆ ಪ್ರಚಾರ ಮಾಡುತ್ತಿರುವ ಪ್ರಶ್ನೆಗೆ, ಶೆಟ್ಟರ್‌-ಬೊಮ್ಮಾಯಿ ಒಂದೇ ಕಡೆ ಹೋಗ್ತಾರಾ? ಎಲ್ಲ ಕಡೆ ಕವರ್‌ ಮಾಡಬೇಕು ಅಂದರೆ ಬೇರೆ ಬೇರೆ ಕಡೆ ಪ್ರಚಾರ ಮಾಡಲೇಬೇಕು. ಹೀಗಾಗಿ ಇದೀಗ ಸಿಂದಗಿಯಲ್ಲಿ ಸದ್ಯ ಡಿ.ಕೆ. ಶಿವಕುಮಾರ ಪ್ರಚಾರ ಮಾಡುತ್ತಿದ್ದಾರೆ. ನಾನು ಹಾನಗಲ್‌ನಲ್ಲಿ ಪ್ರಚಾರ ಮಾಡುತ್ತಿದ್ದೇನೆ. ಬಳಿಕ ನಾನು ಸಿಂದಗಿಯಲ್ಲಿ ಪ್ರಚಾರ(Campaign) ಮಾಡುತ್ತೇನೆ ಎಂದು ತಿಳಿಸಿದರು. ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಒಳ್ಳೆಯ ವಾತಾವರಣವಿದೆ. ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಲ್ಪಸಂಖ್ಯಾತರಿಗೆ(Minorities) ಕಾಂಗ್ರೆಸ್‌ನಲ್ಲಿ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂಬ ಸಿ.ಎಂ. ಇಬ್ರಾಹಿಂ(CM Ibrahim) ಟೀಕೆಗೆ, ಅವರನ್ನು ಎಂಎಲ್‌ಸಿ(MLC) ಮಾಡಿದ್ದು ಯಾರು? ಕಾಂಗ್ರೆಸ್‌ ತಾನೇ ಎಂದು ಪ್ರಶ್ನಿಸಿದರು. ಟಿಪ್ಪು ಜಯಂತಿ(Tipu Jayanti) ಬಗ್ಗೆ ಇಬ್ರಾಹಿಂ ನೀಡಿರುವ ಹೇಳಿಕೆಗೆ, ಟಿಪ್ಪು ಬಗ್ಗೆ ಇನ್ನೊಮ್ಮೆ ಇಬ್ರಾಹಿಂ ಓದಿಕೊಳ್ಳಲಿ. ಈ ಬಗ್ಗೆ ನಾನು ಅವರಿಗೆ ಹೇಳುತ್ತೇನೆ ಎಂದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮುಸ್ಲಿಮರನ್ನು(Muslim) ಮುಖ್ಯಮಂತ್ರಿ(Chief Minister) ಮಾಡಲಿ ಎಂಬ ಪ್ರಶ್ನೆಗೆ, ಹೈಕಮಾಂಡ್‌(HighCommand) ನಿರ್ಧರಿಸುತ್ತದೆ. ಮುಸ್ಲಿಮರನ್ನಾದರೂ ಮಾಡಲಿ, ದಲಿತರನ್ನಾದರೂ(Dalit) ಮಾಡಲಿ. ಅಥವಾ ಬೇರೆಯವರನ್ನಾದರೂ ಮಾಡಲಿ ನನ್ನ ವಿರೋಧವಿಲ್ಲ. ಹೈಕಮಾಂಡ್‌ ಏನು ತೀರ್ಮಾನ ಮಾಡುತ್ತದೆ. ಅದಕ್ಕೆ ಬದ್ಧ ಎಂದು ನುಡಿದರು.
 

Follow Us:
Download App:
  • android
  • ios