ಸಿದ್ರಾಮಣ್ಣನವರೇ ನಮ್ ನಾಯಕರು, ಅವರಿಂದಲೇ ಸರ್ಕಾರ ನಡೆಯುತ್ತಿದೆ: HDK

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Feb 2019, 7:55 PM IST
Siddaramaiah Is Our Leader  Says CM HD Kumaraswamy In Assembly Session
Highlights

ಸದನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಗುಣಗಾನ ಮಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ. ಸಿದ್ದರಾಮಯ್ಯ ಅವರ ಬಗ್ಗೆ ಸಿಎಂ ಏನೆಲ್ಲ ಮಾತನಾಡಿದ್ದಾರೆ ನೋಡಿ.

ಬೆಂಗಳೂರು, [ಫೆ.12]:  ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಹಾಡಿಹೊಗಳಿದ ಪ್ರಸಂಗಕ್ಕೆ  ಇಂದಿನ ಸದನ ಸಾಕ್ಷಿಯಾಯ್ತು. 

ಕಾಂಗ್ರೆಸ್​ನ ಕೆಲ ಶಾಸಕರು ಈಗಲೂ ಸಿದ್ದರಾಮಯ್ಯ ಅವರೇ ನಮಗೆ ಮುಖ್ಯಮಂತ್ರಿ ಎಂದು ಬಹಿರಂಗ ಹೇಳಿಕೆಗಳನ್ನು ನೀಡುತ್ತಾ ಬಂದರೆ ಕೆಲವರು ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದ್ದರು. 

ಇದೀಗ  ಕುಮಾರಸ್ವಾಮಿ ಅವರೇ ಇಂದು [ಮಂಗಳವಾರ] ಸದನದಲ್ಲಿ ಸಿದ್ದರಾಮಯ್ಯ ಅವರನ್ನು ಗುಣಗಾನ ಮಾಡಿದರು.  ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಲಿ ಎಂದು ಹೇಳುತ್ತಾರೆ, ಅದರಲ್ಲಿ ತಪ್ಪೇನಿದೆ.  ಸಿದ್ದರಾಮಯ್ಯ ಅವರೇ ನಮ್ಮ ನಾಯಕರು, ಹೀಗಿರುವಾಗ ಅವರು ಮತ್ತೆ ಮುಖ್ಯಮಂತ್ರಿ ಆಗಲಿ ಎಂದು ಬಯಸುವುದರಲ್ಲಿ ತಪ್ಪೇನು ಇಲ್ಲ ಎಂದರು. 

ನಮ್ಮ ಸರ್ಕಾರ ನಡೆಯುತ್ತಿರುವುದೇ ಸಿದ್ದರಾಮಯ್ಯ ಅವರ ಮಾರ್ಗದರ್ಶನದಿಂದ, ಸಿದ್ದರಾಮಣ್ಣ ಸಲಹೆ ಕೊಟ್ಟಿದ್ದಾರೆ ಅದರಂತೆ ನಾವು ನಡೆಯುತ್ತಿದ್ದೇವೆ. ಕೆಲವರು ಸಿದ್ದರಾಮಯ್ಯ ಜತೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಅದರಲ್ಲಿ ಕೆಲವರು ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂದಿದ್ದಾರೆ. 

ಅದರ ಬಗ್ಗೆ ನಾನು ಎಂದೂ ಆಕ್ಷೇಪ ವ್ಯಕ್ತಪಡಿಸಿಲ್ಲ. ಸಿದ್ದರಾಮಯ್ಯ ಅವರಿಂದಲೇ ನಮ್ಮ ಸರ್ಕಾರ ಉಳಿದಿದೆ ಎಂದು ಸಾರ್ವಜನಿಕವಾಗಿ ನಾನು ಹೇಳಿದ್ದೇನೆ ಎಂದು ಸಿದ್ದರಾಮಯ್ಯರನ್ನು ಎಚ್​ಡಿಕೆ ಕೊಂಡಾಡಿದರು.

loader