'ಒಳಮಿಸಲಾತಿಯನ್ನು ಸಿದ್ದರಾಮಯ್ಯ ವಿರೋಧಿಸಿಲ್ಲ'

ತಮ್ಮ ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದುಕೊಂಡು ಇಂತಹ ಹೇಳಿಕೆಗಳನ್ನು ಕೊಡುವುದನ್ನು ನಿಲ್ಲಿಸಬೇಕು, ತಮ್ಮ ಬಗ್ಗೆ ಸಾರ್ವಜನಿಕವಾಗಿಯೂ, ವೈಯಕ್ತಿಕವಾಗಿಯೂ ಒಳ್ಳೆಯ ಅಭಿಪ್ರಾಯವಿದ್ದು ತಮಗೆ ಚ್ಯುತಿ ಬರದ ಹಾಗೆ ನಿಮ್ಮ ಹಿರಿತನ ನೇತೃತ್ವ ಉಳಿಸಿಕೊಳ್ಳಬೇಕು: ಜೆ.ಟಿ.ಪಾಟೀಲ 

Siddaramaiah is Not Apposed to Reservation Says GT Patil grg

ಕಲಾದಗಿ(ಜ.18): ಮಾಜಿ ಸಿಎಂ ಸಿದ್ದರಾಮಯ್ಯನವರು ಒಳ ಮೀಸಲಾತಿಗೆ ವಿರೋಧವಾಗಿದ್ದಾರೆ ಎಂದು ಮಾದಿಗ ಸಂಘಟನೆ ಒಕ್ಕೂಟಗದ ಮುಖಂಡ ಮುತ್ತಣ್ಣ ಬೆಣ್ಣೂರು ಹೇಳಿಕೆ ನೀಡಿರುವುದನ್ನು ಖಂಡಿಸುವುದಾಗಿ ಮಾಜಿ ಶಾಸಕ ಜೆ.ಟಿ.ಪಾಟೀಲ ಹೇಳಿದರು.

ಮಂಗಳವಾರ ಮದ್ಯಾಹ್ನ ಗ್ರಾಮದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಒಳಮಿಸಲಾತಿ ಮಾಡುತ್ತಾರೆ ಎಂದು ಮುತ್ತಣ್ಣ ಬೆಣ್ಣೂರು ಅವರು ಹೊದರು, ಐದು ವರ್ಷವಾಗುತ್ತಾ ಬಂದರೂ ಇಲ್ಲಿಯ ವರೆಗೆ ಒಳ ಮಿಸಲಾತಿ ಬಗ್ಗೆ ಮುತ್ತಣ್ಣ ಬೆಣ್ಣೂರು ಅವರು ಒಂದು ಶಬ್ಧ ಮಾತನಾಡಲಿಲ್ಲ, ಬಿಜೆಪಿನೂ ಒಂದು ಶಬ್ಧ ಮಾತನಾಡಲಿಲ್ಲ, ಈಗ ಚುನಾವಣೆ ಸಂದರ್ಭದಲ್ಲಿ ಮತ್ತು ಸಿದ್ದರಾಮಯ್ಯ ಬಾಗಲಕೋಟೆಗೆ ಕಾರ್ಯಕ್ರಮಕ್ಕೆ ಬರುವ ವೇಳೆ ಅವರನ್ನೋಬ್ಬರನ್ನೇ ಟಾರ್ಗೆಟ್‌ ಮಾಡಿ ಮಾತನಾಡುವುದು ಸರಿಯಲ್ಲ ಅಂತ ಹೇಳಿದ್ದಾರೆ. 

Udupi: ಕೃಷ್ಣನಗರಿಯಲ್ಲಿ ಜ.22ರಂದು ಪ್ರಜಾಧ್ವನಿ ಯಾತ್ರೆ: ಕಾಂಗ್ರೆಸ್ ನಾಯಕರ ದಂಡೇ ಆಗಮನ

ತಮ್ಮ ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದುಕೊಂಡು ಇಂತಹ ಹೇಳಿಕೆಗಳನ್ನು ಕೊಡುವುದನ್ನು ನಿಲ್ಲಿಸಬೇಕು, ತಮ್ಮ ಬಗ್ಗೆ ಸಾರ್ವಜನಿಕವಾಗಿಯೂ, ವೈಯಕ್ತಿಕವಾಗಿಯೂ ಒಳ್ಳೆಯ ಅಭಿಪ್ರಾಯವಿದ್ದು ತಮಗೆ ಚ್ಯುತಿ ಬರದ ಹಾಗೆ ನಿಮ್ಮ ಹಿರಿತನ ನೇತೃತ್ವ ಉಳಿಸಿಕೊಳ್ಳಬೇಕು ಎಂದರು.

Latest Videos
Follow Us:
Download App:
  • android
  • ios