ಸಿದ್ದರಾಮಯ್ಯ ರಾಷ್ಟ್ರ ವಿರೋಧಿ: ಸಂಸದ ಪ್ರತಾಪ್ ಸಿಂಹ ವಾಗ್ದಾಳಿ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂ ವಿರೋಧಿ, ರಾಷ್ಟ್ರ ವಿರೋಧಿ ಪೋಷಕ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು. ಮೈಸೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮೈಸೂರು (ಆ.14): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂ ವಿರೋಧಿ, ರಾಷ್ಟ್ರ ವಿರೋಧಿ ಪೋಷಕ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು. ಮೈಸೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮೀರ್ ಅಹಮದ್ ಅಂತಹ ವ್ಯಕ್ತಿಯನ್ನು ಸಿದ್ದರಾಮಯ್ಯ ಪೋಷಿಸುತ್ತಿದ್ದಾರೆ. ಜಮೀರ್ ಅಹಮದ್ ಚಾಮರಾಜಪೇಟೆಯ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸಲು ಬಿಡಲ್ಲ, ಗಣೇಶೋತ್ಸವ ಮಾಡಲು ಬಿಡಲ್ಲ ಅಂತಾರೆ. ಇದರ ಅರ್ಥ ಏನು ಎಂದು ಪ್ರಶ್ನಿಸಿದರು. ಆವತ್ತೆ ನಿಮಗೆ ಪ್ರತ್ಯೇಕ ದೇಶ ಕೊಟ್ಟಿದ್ದೇವೆ. ಇಲ್ಲಿ ಉಳಿದಿರುವವರು ಸಂವಿಧಾನಕ್ಕೆ ಗೌರವ ಕೊಟ್ಟು ಬದುಕುವುದು ಕಲಿಯಿರಿ.
ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಎಂಬ ಎರಡು ಟೀಂ ಇದೆ. ಸಿದ್ದರಾಮಯ್ಯ ಟೀಂಗೆ ಜಮೀರ್ ಅಹಮದ್ ವೈಸ್ ಕ್ಯಾಪ್ಟನ್. ಡಿ.ಕೆ. ಶಿವಕುಮಾರ್ ಟೀಂಗೆ ನಳಪಾಡ್ ವೈಸ್ ಕ್ಯಾಪ್ಟನ್ ಎಂದು ಅವರು ಕುಟುಕಿದರು. ಸ್ವಾತಂತ್ರ್ಯಕ್ಕೆ ಆರ್‌ಎಸ್‌ಎಸ್, ಬಿಜೆಪಿ ಕೊಡುಗೆ ಏನು ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸ್ವಾತಂತ್ರ್ಯ ಚಳವಳಿ ಅಧಿಕೃತವಾಗಿ ಆರಂಭವಾಗಿದ್ದು 1857 ರಲ್ಲಿ. ಅದನ್ನು ಬ್ರಿಟಿಷರು ಸಿಪಾಯಿ ದಂಗೆ ಅಂತಾ ಕರೆದಿದ್ದರು. ಅದನ್ನು ಮೊದಲ ಸ್ವಾತಂತ್ರ್ಯ ಸಂಗ್ರಮ ಅಂತಾ ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದು ಸಾವರ್ಕರ್ ಎಂದರು.
ನನ್ನ ಮೇಲೆ ಸಿಟ್ಟಾಗಲು ಸಿಎಂಗೆ ಹಕ್ಕಿದೆ: ಪ್ರತಾಪ ಸಿಂಹ
ಆವತ್ತು ಕಾಂಗ್ರೆಸ್ ಹುಟ್ಟೇ ಇರಲಿಲ್ಲ. ಇಂದಿನ ಕಾಂಗ್ರೆಸ್ ಎಂಬ ರಾಜಕೀಯ ಪಕ್ಷಕ್ಕೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್‌ಗೂ ಸಂಬಂಧವೆ ಇಲ್ಲ. ರಾಜಕೀಯಕ್ಕಾಗಿ ಎಲ್ಲರನ್ನೂ ಓಲೈಸುವ ಕಾಂಗ್ರೆಸ್‌ಗೂ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಕಾಂಗ್ರೆಸ್‌ಗೂ ಏನು ಸಂಬಂಧ? ಸಿದ್ದರಾಮಯ್ಯ ಯಾವ ಕಾಂಗ್ರೆಸ್ ಬಗ್ಗೆ ಮಾತಾಡ್ತಿದ್ದಾರೋ ಗೊತ್ತಿಲ್ಲ ಎಂದರು. ನೆಹರು, ಇಂದಿರಾ ಗಾಂಧಿ ಎಲ್ಲಿ ಸ್ವಾತಂತ್ರ್ಯಕ್ಕಾಗಿ ಜೀವ ತೆತ್ತರು? ಭಗತ್ ಸಿಂಗ್, ರಾಜಗುರುರಂತ ಕ್ರಾಂತಿಕಾರಿಗಳು ಸ್ವಾತಂತ್ರ್ಯಕ್ಕಾಗಿ ಜೀವ ತೆತ್ತರು. ಇವರೇನೂ ಕಾಂಗ್ರೆಸ್‌ನವರಾ? ಇತಿಹಾಸದ ಕನಿಷ್ಠ ಜ್ಞಾನವೂ ಸಿದ್ದರಾಮಯ್ಯಗೆ ಇಲ್ಲ.
ಕ್ರಾಂತಿಕಾರಿಗಳು ಸ್ವಾತಂತ್ರ್ಯ ತಂದು ಕೊಡುತ್ತಾರೆ ಎಂದು ಗೊತ್ತಿತ್ತು. ಆಗ, 1925ರಲ್ಲಿ ಸ್ವಾತಂತ್ರ್ಯ ಕಾಪಾಡಿ ಕೊಳ್ಳಲು ಆರ್‌ಎಸ್‌ಎಸ್ ಹುಟ್ಟಿತು. ಕನಿಷ್ಠ ವ್ಯತ್ಯಾಸವೂ ಸಿದ್ದರಾಮಯ್ಯಗೆ ಗೊತ್ತಿಲ್ಲ ಎಂದು ಅವರು ಕಿಡಿಕಾರಿದರು. ಸಿದ್ದರಾಮಯ್ಯ ಏನು ಮೂಲ ಕಾಂಗ್ರೆಸ್‌ನವರಾ? ಸಿದ್ದರಾಮಯ್ಯ ಅವರ ಕುಟುಂಬ ಏನು ಸ್ವಾತಂತ್ರ್ಯ ಕ್ಕೆ ಹೋರಾಡಿತು. ಸಿದ್ದರಾಮಯ್ಯ ಸಮಾಜವಾದ ಹೇಳಿಕೊಂಡು ಬಂದವರು. ಕಾಂಗ್ರೆಸ್ ವಿರೋಧಿ ಬಣದಲ್ಲಿ ಬೆಳೆದು ಬಂದವರು ಸಿದ್ದರಾಮಯ್ಯ. ಸ್ವಾತಂತ್ರ್ಯಕ್ಕೆ ಕಾಂಗ್ರೆಸ್ ಹೋರಾಡಿದ್ದರೆ ಅವತ್ತೇ ಯಾಕೆ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿರಲಿಲ್ಲ ಎಂದು ಅವರು ಪ್ರಶ್ನಿಸಿದರು.
ವಿಧಾನಸಭೆ ಚುನಾವಣೆ ರಣತಂತ್ರಕ್ಕೆ ಬಿಜೆಪಿ ಟೀಮ್- ಪ್ರತಾಪ್ ಸಿಂಹಗೆ ಹೊಸ ಜವಬ್ದಾರಿ!
ಸಾವರ್ಕರ್ ಬಗ್ಗೆ ಹಗುರುವಾಗಿ ಮಾತಾಡಬೇಡಿ. ಬ್ರಿಟಿಷ್ ವಿರುದ್ಧ ಸುಮ್ಮನೆ ಹೋರಾಟ ಮಾಡುವವರನ್ನು ಅಗಾಖಾನ್ ಪ್ಯಾಲೇಸ್‌ನಲ್ಲಿ ಇಡುತ್ತಿದ್ದರು. ಬ್ರಿಟಿಷರ ವಿರುದ್ಧ ಕಠಿಣ ಹೋರಾಟ ಮಾಡುತ್ತಿದ್ದವರನ್ನು ಅಂಡಮಾನ್ ಜೈಲಿಗೆ ಹಾಕುತ್ತಿದ್ದರು. ಅಂಡಮಾನ್ ಜೈಲಲ್ಲಿ ಇದ್ದದ್ದು ಸಾವರ್ಕರ್. ಪ್ರತಿನಿತ್ಯ ಸಾವು ನೋಡುತ್ತಾ ಸಾವರ್ಕರ್ ಬದುಕಿದ್ದರು. ಇಂಥ ವ್ಯಕ್ತಿ ಬಗ್ಗೆ ಮಾತಾಡ್ತಿರಲ್ಲ ಸಿದ್ದರಾಮಯ್ಯ ಅವರೇ? ಕನಿಷ್ಠ ಜ್ಞಾನ, ಅರಿವು ಇಟ್ಟು ಕೊಂಡು ಮಾತಾಡಿ ಎಂದು ಅವರು ವಾಗ್ದಾಳಿ ನಡೆಸಿದರು.