Karnataka Politics: ಸಿದ್ದರಾಮಯ್ಯ ಸೋನಿಯಾ ಗಾಂಧಿ ಗುಲಾಮ: ಸಿ.ಟಿ. ರವಿ
* ಭ್ರಷ್ಟಾಚಾರ ಬಿತ್ತಿ ಬೆಳೆಸಿದ್ದು ಕಾಂಗ್ರೆಸ್
* ನಾನು ಪರ್ಸೆಂಟೇಜ್ ಗಿರಾಕಿ ಅಲ್ಲ
* ಕಾಂಗ್ರೆಸ್ ವಿರುದ್ಧ ಸಿ.ಟಿ ರವಿ ವಾಗ್ದಾಳಿ
ವರದಿ: ಮಹಾಂತೇಶ್ ಕುಮಾರ್, ಏಷ್ಯನೆಟ್ ಸುವರ್ಣ ನ್ಯೂಸ್, ತುಮಕೂರು
ತುಮಕೂರು(ಏ.30): ಕರ್ನಾಟಕದಲ್ಲಿ(Karnataka) ಕನ್ನಡವೇ(Kannada) ಸರ್ವಶ್ರೇಷ್ಠ, ಇದರಲ್ಲಿ ಗುಲಾಮರಾಗುವ ಪ್ರಶ್ನೆ ಏನಂಥ. ನಾನು ಸಿದ್ದರಾಮಯ್ಯನವರಿಗೆ ಹೇಳ ಬಯಸುತ್ತೇನೆ. ನೀವು ಸೋನಿಯಾ ಅವರ ಗುಲಾಮರಾಗಿದ್ದೀರಿ, ಅಮಿತ್ ಶಾ ನಮ್ಮ ನಾಯಕರು, ನಾವು ಅವರ ಕಾರ್ಯಕರ್ತರು ಎಂದು ಸಿ.ಟಿ. ರವಿ ಸಮರ್ಥಿಸಿಕೊಂಡಿದ್ದಾರೆ.
ಹಿಂದಿ(Hindi) ಭಾಷೆ ವಿಚಾರದಲ್ಲಿ ಬಿಜೆಪಿ ನಾಯಕರು ಅಮಿತ್ ಶಾ ಗುಲಾಮರಾಗಬೇಡಿ ಎಂಬ ಸಿದ್ದರಾಮಯ್ಯ(Siddaramaiah) ಹೇಳಿಕೆಗೆ ತುಮಕೂರಿನಲ್ಲಿ ಇಂದು(ಶನಿವಾರ) ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿದ ಸಿ.ಟಿ. ರವಿ, ನೀವು ಅವರ ಗುಲಾಮರಂತೆ ವರ್ತಿಸುತ್ತಿದ್ದೀರಿ, ಆಯಾಯಾ ಪ್ರದೇಶಿಕ ಭಾಷೆಗಳಲ್ಲಿ ಶಿಕ್ಷಣ ಕೊಡಬೇಕು ಎಂದು ನೂತನ ಶಿಕ್ಷಣ ನೀತಿಯಲ್ಲಿ ಪ್ರಸ್ತಾಪ ಮಾಡಲಾಗಿದೆ. ಇದು ಅಪರಾಧವಾ?, ಗುಲಾಮರಾಗುವ ಅಂಶನಾ, ಯಾವುದಿದೆ ಗುಲಾಮರಾಗುವ ಅಂಶ ಎಂದು ಪ್ರಶ್ನಿಸಿದ್ದಾರೆ.
ಮುದ್ದಹನುಮೇಗೌಡ ಬರೀ ಐರನ್ ಲೆಗ್ ಅಲ್ಲ ಅದಕ್ಕಿಂತ ಕೆಟ್ಟದ್ದು, ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ
ಎನ್ಇಪಿಯಲ್ಲಿ ಉನ್ನತ ಶಿಕ್ಷಣವನ್ನು ಕೂಡ ಮಾತೃ ಭಾಷೆಯಲ್ಲಿ ಕೊಡಬೇಕೆಂಬುದಿದೆ. ಇದರಲ್ಲಿ ಗುಲಮರಾಗುವ ಅಂಶ ಎಲ್ಲಿದೆ. ಈಗ ಮಾನ್ಯ ಸಿದ್ದರಾಮಯ್ಯನವರು ರಾಷ್ಟ್ರ ಭಾಷೆ ಒಪ್ಪಿಕೊಳ್ತಾರೋ, ನಮ್ಮ ಮೇಲೆ ಅಕ್ರಮಣ ಮಾಡಿ ಹೇರಿರುವ ಗುಲಾಮಗಿರಿ ಭಾಷೆಗೆ ಪ್ರಾಧಾನ್ಯತೆ ಕೊಡ್ತಾರೋ ನೋಡಬೇಕಿದೆ ಅಂತ ಹೇಳಿದ್ದಾರೆ.
ಮಾತೃಭಾಷೆಗೆ ಮನ್ನಣೆ ಕೊಡಿ, ಸಂಪರ್ಕ ಭಾಷೆಗೆ ಇಂಗ್ಲಿಷ್ ಬದಲಾಗಿ ಹಿಂದಿ ಉಪಯೋಗಿಸಿ ಎಂದು ಅಮಿತ್ ಶಾ ಹೇಳಿದ್ದಾರೆ. ಇದರ ಹಿಂದೆ ನಮ್ಮ ರಾಷ್ಟ್ರದ ಭಾಷೆ, ಕನ್ನಡವನ್ನು ಕಡೆಗಣಿಸಿ ಅಂತ ಹೇಳಿಲ್ಲ, ಕನ್ನಡ ಬಿಟ್ಟುಕೊಟ್ಟು ಹಿಂದಿಯಲ್ಲಿ ಮಾತನಾಡಿ ಅಂದ್ರೆ ನಾವು ಧ್ವನಿ ಎತ್ತುತ್ತಿದ್ವಿ. ಹಾಗೇನು ಅವರು ಹೇಳಿಲ್ಲ, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ, ಅಮಿತ್ ಶಾ ಹೇಳಿದ ಮಾತನ್ನು ಅವರು ತಿರುಚಿ ಹೇಳುವುದಾದ್ರೆ, ಸಿದ್ದರಾಮಯ್ಯನವರು ನಾನು ಇಂಗ್ಲಿಷ್ ನಾ ಗುಲಾಮ, ಸೋನಿಯಾ ಗುಲಾಮ ಅಂತ ಒಪ್ಪಿಕೊಂಡು ನಮಗೆ ಪಾಠ ಹೇಳಬೇಕು ಅಂತ ಸವಾಲು ಹಾಕಿದ್ದಾರೆ.
ಭ್ರಷ್ಟಾಚಾರ ಬಿತ್ತಿ ಬೆಳೆಸಿದ್ದು ಕಾಂಗ್ರೆಸ್
ಭ್ರಷ್ಟಾಚಾರ ಬಿತ್ತಿ ಬೆಳೆಸಿದ್ದು ಕಾಂಗ್ರೆಸ್ ವ್ಯವಸ್ಥೆಯೊಳಗೆ ಭ್ರಷ್ಟಾಚಾರ ಸೇರಿ ಹೋಗಿದೆ ಅದನ್ನು ನಿಯಂತ್ರಿಸಬೇಕಾಗಿದೆ. ಪಿಎಸ್ಐ ನೇಮಕಾತಿಯಲ್ಲಿ ಭಾಗಿಯಾದವರ ಮೇಲೆ ಕ್ರಮ ಕೈಗೊಂಡಿರುವುದು ಬಿಜೆಪಿ ಸರ್ಕಾರ, ಭ್ರಷ್ಟಾಚಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡರೆ ಅಪರಾಧ ಹೇಗಾಗುತ್ತೆ. ಒಂದು ವೇಳೆ ಕ್ರಮ ತೆಗೆದುಕೊಳ್ಳದಿದ್ದರೆ, ಅಪರಾಧ ಮುಚ್ಚಿ ಹಾಕಿದ್ರೆ ಅಪರಾಧ ಆಗುತ್ತಿತ್ತು. ಮುಚ್ಚಿ ಹಾಕುವ ಕೆಲಸ ಸರ್ಕಾರ ಮಾಡಿಲ್ಲ, ಯಾರಾರು ಭಾಗಿಯಾಗಿದ್ದಾರೆ ಅವರನ್ನು ಬಂಧಿಸಲಾಗಿದೆ. ಒಂದು ಸರ್ಕಾರಕ್ಕೆ ಮಾಹಿತಿ ಬಂದ ತಕ್ಷಣ ಕ್ರಮಕೈಗೊಳ್ಳುವುದು ತಪ್ಪಾ? ಅಂತ ಸಿದ್ದರಾಮಯ್ಯನವರಿಗೆ ಸಿ.ಟಿ. ರವಿ ಪ್ರಶ್ನಿಸಿದ್ದಾರೆ.
ಮುಚ್ಚಾಕುವ ಕೆಲಸವನ್ನು ಬಹಳ ಹಿಂದಿನಿಂದಲೂ ಕಾಂಗ್ರೆಸ್ ಸರ್ಕಾರ ವ್ಯವಸ್ಥಿತವಾಗಿ ಮಾಡಿಕೊಂಡುಬರ್ತಿತ್ತು. ಸ್ವತಃ ಅರ್ಕಾವತಿ ಹಗರಣದಲ್ಲಿ, ಮಾಡಿದ್ದೇನು. ಕಾಂಗ್ರೆಸ್(Congress) ಸರ್ಕಾರ ರೀಡೂ ಅನ್ನೋ ಹೊಸ ಪರಿಭಾಷೆಯನ್ನೇ ಹುಟ್ಟು ಹಾಕಿದ್ರು. ಹುಬ್ಲೇಟ್ ವಾಚು, ಕದ್ದಿದ್ದ ವಾಚು ಯಾರು ಕಟ್ಟಿಕೊಂಡಿದ್ದು, ಆ ಪ್ರಕರಣವನ್ನು ಹೇಗೆ ಮುಚ್ಚಿ ಹಾಕಿದ್ರು. ವಿಪಕ್ಷದ ನಾಯಕರು ಏನಾದ್ರೂ ಕದ್ದಿದ್ದ ವಾಚು ಕಟ್ಟಿಕೊಂಡಿದ್ರೆ ಬಿಡ್ತಿದ್ರಾ ಇವರು ಅಂತ ಕಿಡಿ ಕಾರಿದ್ದಾರೆ.
ಮೇಕೆದಾಟು ಯೋಜನೆಯ ಡಿಪಿಆರ್ ತಂದಿದ್ದು ಎಚ್ಡಿಕೆ: ನಿಖಿಲ್ ಕುಮಾರಸ್ವಾಮಿ
ನಾನು ಪರ್ಸೆಂಟೇಜ್ ಗಿರಾಕಿ ಅಲ್ಲ.
40 ಪರ್ಸೆಂಟ್ ಅನ್ನೋದು ಸುಳ್ಳು, 40 ಪರ್ಸೆಂಟ್ ಕೊಟ್ಟು ಕೆಲಸ ಮಾಡಲು ಸಾಧ್ಯವಿದೆಯಾ, ಈಗಿನ ಸ್ಥಿತಿಯಲ್ಲಿ ಕೆಲಸ ಮಾಡೋದೆ ಕಷ್ಟ ಅನ್ನೋ ಸ್ಥಿತಿಯಲ್ಲಿ 40 ಪರ್ಸೆಟೇಜ್ ಕೊಡೊಕ್ಕೆ ಆಗುತ್ತಾ, ನಮ್ಮ ಸರ್ಕಾರದ ವಿರುದ್ಧ ಕೆಟ್ಟ ಹೆಸರು ತರಬೇಕು ಅನ್ನೋ ಕಾರಣಕ್ಕೆ ಷಡ್ಯಂತರ ಮಾಡ್ತಿದ್ದಾರೆ. ನನ್ನ ಅನುಭವಕ್ಕೆ ಪರ್ಸೆಂಟೇಜ್ ಬಂದಿಲ್ಲ, ನಾನು ಪರ್ಸೇಂಟೇಜ್ ಗಿರಾಕಿಯಲ್ಲ, ಅಪರಾಧಿ ಅನ್ನೋ ಕಾರಣಕ್ಕೆ ಈಶ್ವರಪ್ಪ ತಲೆ ದಂಡ ಮಾಡಿಲ್ಲ, ಅಪರಾಧಿ ಅಲ್ಲ ಅನ್ನೋದನ್ನು ತೋರಿಸೋದಕೋಸ್ಕರ ಅವರೇ ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದ್ದಾರೆ ಅಂತ ತಿಳಿಸಿದ್ದಾರೆ.
ಗಲಭೆಗಳಲ್ಲಿ ಕಾಂಗ್ರೆಸ್ ಕೈವಾಡ
ಬರೀ ಹುಬ್ಬಳ್ಳಿಯಷ್ಟೇ ಅಲ್ಲ, ಪಾದರಾಯನಪುರ, ಡಿಜೆ ಹಳ್ಳಿ ಕೆಜಿ ಹಳ್ಳಿ ಸೇರಿದಂತೆ ರಾಜ್ಯದ ಉದ್ದಗಲಕ್ಕೂ ನಡೆದ ಗಲಭೆ(Riots) ಹಿಂದೆ ಕಾಂಗ್ರೆಸ್ ಕೈವಾಡವಿದೆ. ಮಗು ವಿವುಟಿ, ತೊಟ್ಟಿಲು ತೂಗುವ ರೀತಿಯಲ್ಲಿ ಗಲಭೆ ಎಬ್ಬಿಸಿ, ಮತ್ತೆ ಶಾಂತಿ ಬಗ್ಗೆ ಮಾತನಾಡುವ ಕೆಲಸ ಮೊದಲಿನಿಂದಲ್ಲೂ ನಡೆದುಕೊಂಡು ಬಂದಿದೆ. ಜಮೀರ್ ಒಬ್ಬರೇ ಅಲ್ಲ, ಅವರ ರೀತಿಯಲ್ಲಿ ತುಂಬಾ ಜನ ಇದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಸಿ.ಟಿ ರವಿ ವಾಗ್ದಾಳಿ ನಡೆಸಿದರು.