Asianet Suvarna News Asianet Suvarna News

ಕಾಂಗ್ರೆಸ್‌ಗೆ ಬರುವಂತೆ ಜೆಡಿಎಸ್‌ ಶಾಸಕಗೆ ಆಹ್ವಾನ, ಅಭ್ಯರ್ಥಿ ಎಂದು ಘೋಷಿಸಿದ ಸಿದ್ದು

* ಕಾಂಗ್ರೆಸ್‌ಗೆ ಬರುವಂತೆ ಜೆಡಿಎಸ್‌ ಶಾಸಕಗೆ ಆಹ್ವಾನ ಕೊಟ್ಟ ಸಿದ್ದರಾಮಯ್ಯ
* ಮುಂದಿನ ಚುನಾವಣೆ ಟಿಕೆಟ್ ಆಫರ್ ನೀಡಿದ ಸಿದ್ದು
* ಶ್ರೀನಿವಾಸ್ ಮುಂದಿನ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಣೆ

Siddaramaiah invites JDS MLA SR Srinivas To join Congress rbj
Author
Bengaluru, First Published Nov 1, 2021, 7:29 PM IST
  • Facebook
  • Twitter
  • Whatsapp

ತುಮಕೂರು, (ನ.01):  ಈಗಾಗಲೇ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡು ಕಾಂಗ್ರೆಸ್ ಸೇರುವ ಕುರಿತು ಸುಳಿವು ನೀಡಿರುವ ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್ ಶ್ರೀನಿವಾಸ್‌ (SR Srinivas) ಮಾಜಿ ಸಿಎಂ ಸಿದ್ಧರಾಮಯ್ಯ 9Siddaramaiah) ಬಹಿರಂಗ ಆಹ್ವಾನ ನೀಡಿದ್ದಾರೆ.

ಈ ಕುರಿತು ತುಮಕೂರಿನ (Tumakuru) ಗುಬ್ಬಿಯಲ್ಲಿ ಇಂದು (ಸೋಮವಾರ) ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಸಿದ್ಧರಾಮಯ್ಯ, ಎಸ್.ಆರ್ ಶ್ರೀನಿವಾಸ್ ಕಾಂಗ್ರೆಸ್(Congress) ಸೇರಿದರೇ ಮುಂದಿನ ಚುನಾವಣೆಗೆ ಟಿಕೆಟ್ ನೀಡುತ್ತೇವೆ. ಎಸ್.ಆರ್ ಶ್ರೀನಿವಾಸ್ ಮುಂದಿನ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಣೆ ಮಾಡಿದರು.

ಕತ್ತು ಕುಯ್ಯುವ ಕೆಲಸ ಮಾಡಿದ್ದು ಎಚ್ಡಿಕೆ : ಜೆಡಿಎಸ್ ಶಾಸಕ

ಕಾಂಗ್ರೆಸ್ ಸೇರುವಂತೆ ಶ್ರೀನಿವಾಸ್ ಗೆ ಅನೇಕ ಬಾರಿ ಕರೆದಿದ್ದೆ. ಜೆಡಿಎಸ್ ಮುಳುಗುತ್ತಿರುವ ಹಡಗು. ಜೆಡಿಎಸ್ (JDS) ನವರು ಅವಕಾಶವಾದಿಗಳು ಎಂದಿದ್ದೆ. ಆದರೆ ಇಲ್ಲ ಅಣ್ಣ ಬರಲ್ಲ ಎಂದು ಶ್ರೀನಿವಾಸ್ ಹೇಳಿದ್ದರು. ಈಗ ಪಕ್ಷಕ್ಕೆ ಬಂದ್ರೆ ಟಿಕೆಟ್ ನೀಡುತ್ತೇವೆ ಎಂದು ಸಿದ್ಧರಾಮಯ್ಯ ಸ್ಪಷ್ಟಪಡಿಸಿದರು.

ನಾನು ಏನೇ ಹೇಳಿದರು ಎಚ್.ಡಿಕೆ ಜಾತಿ ಬಣ್ಣ ಕಟ್ಟುತ್ತಾರೆ. ನಾನು ಅಕ್ಕಿ ಕೊಟ್ಟಿದ್ದು ಒಂದು ಜಾತಿಗಾ..? ಜೆಡಿಎಸ್ ನವರು ರಾಜಕಾರಣಕ್ಕಾಗಿ ಜಾತಿಬಣ್ಣ ಕಟ್ಟುತಿದ್ದಾರೆ. ಬಿಜೆಪಿಯವರು ಅನ್ನಭಾಗ್ಯ ಕೇಂದ್ರ ಸರ್ಕಾರದ ಯೋಜನೆ ಅಂತಾರೆ. ಹಾಗಾದ್ರೆ ಗುಜರಾತ್, ಮಧ್ಯಪ್ರದೇಶ, ಬಿಹಾರದಲ್ಲಿ ಏಕೆ ಉಚಿತ ಅಕ್ಕಿ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.

ಎಚ್‌ಡಿಕೆ ವಿರುದ್ಧ  ಶ್ರೀನಿವಾಸ್ ಕಿಡಿ
ಇನ್ನು ತುಮಕೂರಿನ ಗುಬ್ಬಿಯಲ್ಲಿ ಇಂದು (ನ.01) ಖಾಸಗಿ ಹೈಟೆಕ್ ಆಸ್ಪತ್ರೆ ಉದ್ಘಾಟನೆ ಆಗಮಿಸಿದ್ದ ಸಿದ್ದರಾಮಯ್ಯ ಅವರನ್ನ ಜೆಡಿಎಸ್ ಶಾಸಕ ಎಸ್.ಆರ್ ಶ್ರೀನಿವಾಸ್‌ ಭೇಟಿ ಮಾಡಿದರು.

ಬಳಿಕ ಸಿದ್ದರಾಮಯ್ಯನವರ ಜತೆಗೆ ಸುದ್ದಿಗಾರರೊಂದಿಗೆ ಮಾತನಾಡಿದ  ಶ್ರೀನಿವಾಸ್‌,  ತುಮಕೂರಿನಲ್ಲಿ ದೇವೇಗೌಡರ ಸೋಲಿನ ಬಗ್ಗೆ ಪ್ರಸ್ತಾಪಿಸಿದ್ದೀರಿ. ನಾನು ಎಲ್ಲಿ ಬೇಕಾದರೂ ಪ್ರಮಾಣ ಮಾಡಲು ಸಿದ್ಧನಿದ್ದೇನೆ. ನಾನು ದೈವ ಭಕ್ತನಲ್ಲ, ನೀವು ಎಲ್ಲಿಗೆ ಕರೆದರೂ ಬರುತ್ತೇನೆ. ಹೆತ್ತ ತಾಯಿಗೆ ದ್ರೋಹ ಮಾಡುವ ಕೆಲಸ ನಾನು ಮಾಡಲ್ಲ. ನೀನು ಆ ಕೆಲಸ ಮಾಡುತ್ತಿರುವುದು ನಾಚಿಕೆ ಆಗುವುದಿಲ್ಲವಾ ಎಂದು ವಾಗ್ದಾಳಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

 ನಾನು ಸೀಮಂತ ಕಾರ್ಯಕ್ರಮಕ್ಕೆ ಬಂದಾಗ ಮಾತಾಡಿಸಲಿಲ್ಲ. ನನ್ನ ನೀವು ಯಾವ ಊರು ನಾಯಿ ಅನ್ನಲಿಲ್ಲ. ಶಾಸಕ ಸಾ.ರಾ.ಮಹೇಶ್ ಹೇಳಿದರೂ ಮಾತನಾಡಿಸಲಿಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಶಾಸಕ ಶ್ರೀನಿವಾಸ್​ ಕಿಡಿಕಾರಿದರು.

ಗುಬ್ಬಿ ಕ್ಷೇತ್ರಕ್ಕೆ JDS ಅಭ್ಯರ್ಥಿ ಫಿಕ್ಸ್
ತುಮಕೂರಿನ ಗುಬ್ಬಿ ವಿಧಾನಸಭೆ ಕ್ಷೇತ್ರಕ್ಕೆ ಶ್ರೀನಿವಾಸ್‌ ವಿರುದ್ಧ JDS ಅಭ್ಯರ್ಥಿ ಫಿಕ್ಸ್ ಆಗಿದ್ದು, ಉದ್ಯಮಿ ನಾಗರಾಜು ಮುಂದಿನ ಎಲೆಕ್ಷನ್​ನಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. MLA ಎಸ್​ಆರ್ ಶ್ರೀನಿವಾಸ್ ತಂತ್ರಕ್ಕೆ HDK ಪ್ರತಿತಂತ್ರ ರೂಪಿಸಿದ್ದು, ಕೊನೆಕ್ಷಣದಲ್ಲಿ ಕಾಂಗ್ರೆಸ್​ಗೆ ಜಿಗಿಯಲು ರೆಡಿಯಾಗಿದ್ದ ಶ್ರೀನಿವಾಸ್​ಗೆ ಎಚ್​ಡಿಕೆ ಶಾಕ್ ನೀಡಿದ್ದಾರೆ.

ಈಗಾಗಲೇ ಶ್ರೀನಿವಾಸ್ ಅವರು ಕಾಂಗ್ರೆಸ್ ಸೇರುವುದಾಗಿ ಬಹಿರಂಗ ಹೇಳಿಕೆ ಕೊಟ್ಟಿದ್ದು, ಮುಂಬರುವ ಚುನಾವಣೆ ವೇಳೆ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಇನ್ನು ಮತ್ತೋರ್ವ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಅವರು ಸಹ ಕಾಂಗ್ರೆಸ್ ಸೇರುವುದಾಗಿ ಹೇಳಿದ್ದಾರೆ.

Follow Us:
Download App:
  • android
  • ios