'ಕುರುಬ ಮೀಸಲಾತಿ ಹೋರಾಟದಲ್ಲಿ ಸಿದ್ದರಾಮಯ್ಯರನ್ನ ವೀಕ್ ಮಾಡಲು RSS ಹುನ್ನಾರ'
ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆ ಮಾಡುವ ಬಗ್ಗೆ ನಡೆದಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದು, ಅದು ಈ ಕೆಳಗಿನಂತಿದೆ.
ಬಾಗಲಕೋಟೆ, (ಡಿ.13): ಕುರುಬ ಎಸ್‍ಟಿ ಮೀಸಲಾತಿ ಹೋರಾಟ ಆರ್‌ಎಸ್‌ಎಸ್ ಪ್ರಾಯೋಜಿತ. ಇದು ಜಾತಿಯನ್ನ ಒಡೆಯುವ ಹುನ್ನಾರ, ಸಿದ್ದರಾಮಯ್ಯರನ್ನ ವೀಕ್ ಮಾಡುವ ಹುನ್ನಾರ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬಾಗಲಕೋಟೆ ಇಂದು (ಭಾನುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕುರುಬ ಸಮುದಾಯಕ್ಕೆ ಎಸ್‍ಟಿ ಮೀಸಲಾತಿ ನೀಡಬೇಕೆಂಬ ಹೋರಾಟ ವಿಚಾರದಲ್ಲಿ ಆರ್‌ಎಸ್‌ಎಸ್ ಕೈವಾಡ ಇದೆ. ಅವರೇ ಇದನ್ನೆಲ್ಲಾ ಮಾಡಿಸುತ್ತಿದ್ದಾರೆ. ಆರ್‌ಎಸ್‌ಎಸ್ ನವರು ನಮ್ಮ ಜಾತಿ ಒಡೆಯೋಕೆ ಮಾಡಿದ್ದಾರೆ. ನನ್ನನ್ನು ವೀಕ್ ಮಾಡೋಕೆ ಹುನ್ನಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕುರುಬರ ಎಸ್‍ಟಿ ಹೋರಾಟ: ಈಶ್ವರಪ್ಪ ಹಿಂದೆ ಆರ್‌ಎಸ್‌ಎಸ್, ಸಿದ್ದರಾಮಯ್ಯ ಗಂಭೀರ ಆರೋಪ
ಎಸ್‍ಟಿ ಮೀಸಲಾತಿ ಹೋರಾಟಕ್ಕೆ ನನ್ನ ವಿರೋಧವಿಲ್ಲ. ಈಶ್ವರಪ್ಪ ಮಂತ್ರಿ ತಾನೆ, ಅವನ್ಯಾಕೆ ಬೀದಿಗೆ ಬಂದು ಹೋರಾಟ ಮಾಡಬೇಕು? ಅವರದ್ದೆ ಸರ್ಕಾರ ಇದೆ. ಅಸೆಂಬ್ಲಿಯಲ್ಲಿ ವಿಷಯ ತರಬೇಕು. ಕೇಂದ್ರದಲ್ಲಿ ಮೋದಿ ಹಿಡಿದು ಪಾಸ್ ಮಾಡಿಸು.. ಬೇಡ ಅಂದೋರು ಯಾರು? ಎಂದು ವಾಗ್ದಾಳಿ ನಡೆಸಿದರು.
ನಾನು ಸಿಎಂ ಇದ್ದಾಗ ಗೊಂಡ, ರಾಜಗೊಂಡರ ಜೊತೆ ಇರೋ ಕುರುಬ ಮತ್ತು ಹಾಲುಮತದವರನ್ನ ಎಸ್‌ಟಿಗೆ ಸೇರಿಸಲು ಶಿಫಾರಸ್ಸು ಮಾಡಿದ್ದೇನೆ. ಜನರಿಗೇನು ಬೀದಿಗಿಳೀರಿ ಅಂತ ಹೇಳಿದ್ನಾ..? ನಾನೇನು ಬೀದಿಗೆ ಇಳಿದು ಚಳವಳಿ ಮಾಡಿದ್ದೀನಾ? ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದೀನಿ. ಮೊದಲು ಈಶ್ವರಪ್ಪ ಅದನ್ನು ಮಾಡಿಸಲಿ ಎಂದ ಹೇಳಿದರು.