ಸಿದ್ದರಾಮಯ್ಯ ಅವರೇ ಸಿಎಂ ಆಗಿರಲಿದ್ದಾರೆ: ಸಚಿವ ಆರ್.ಬಿ.ತಿಮ್ಮಾಪೂರ

ಐದು ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ, ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಅವರು ಸಿಎಂ ಆಗಿ ಆಯ್ಕೆ ಆಗಿದ್ದಾರೆ. 
 

Siddaramaiah himself will be the CM Says Minister RB Timmapur gvd

ಬಾಗಲಕೋಟೆ (ನ.05): ಐದು ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ, ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಅವರು ಸಿಎಂ ಆಗಿ ಆಯ್ಕೆ ಆಗಿದ್ದಾರೆ. ಈಗ ಅವರೇ ಸಿಎಂ, ಮತ್ತೆ ಬೇರೆಯುವರು ಸಿಎಂ ಆಗ್ತಾರಾ ಎಂದು ಮಾಧ್ಯಮದವರಿಗೆ ಮರುಪಶ್ನೆ ಮಾಡಿದರು. ಜಮಖಂಡಿ ತಾಲೂಕಿನ ಕಂಕಣವಾಡಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಇನ್ನು ಮುಂದೆಯೂ ಸಿದ್ದರಾಮಯ್ಯ ಅವರೇ ಸಿಎಂ ಆಗಿರಲಿದ್ದಾರೆ ಎಂದರು.

ಸದ್ಯದ ಗೊಂದಲಗಳನ್ನು ನೋಡಿದರೆ ಬಹಳ ದಿನಗಳವರೆಗೆ ಸರ್ಕಾರ ಉಳಿಯುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಿಮಗೇಕೆ ಡೌಟ್ ಬರುತ್ತಿದೆ? ನೀವು ಕೇಳಿದ್ದಕ್ಕೆ ಸಿಎಂ ನಾನೇ ಅಂದಿರುತ್ತಾರೆ ಅಷ್ಟೇ. ನೀವು ಐದು ವರ್ಷ ಮಂತ್ರಿ ಆಗಿರ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಸಚಿವಗಿರಿಗೆ ಎಂದೂ ಪ್ರಯತ್ನಿಸಿಲ್ಲ. ನನಗೆ ಸಚಿವ ಸ್ಥಾನ ಕೊಟ್ಟಿದ್ದಾರೆ, ಒಳ್ಳೆಯ ಕೆಲಸ ಮಾಡೋಣ. ಸಿದ್ದರಾಮಯ್ಯ ಇದ್ದಾಗಲೇ ಸಚಿವ ಆಗಬೇಕು ಎಂದೇನಿಲ್ಲ. ಕುಮಾರಸ್ವಾಮಿ ಸಿಎಂ ಇದ್ದಾಗಲೂ ಮಂತ್ರಿ ಆಗಿದ್ದೇನಿ ಎಂದು ಹೇಳಿದರು.

ಸಿಎಂ ಬದಲಾವಣೆ ಬಗ್ಗೆ ಚರ್ಚೆ ಆಗಿಲ್ಲ, ಕೇವಲ ಮಾಧ್ಯಮಗಳಲ್ಲಿ ವದಂತಿ ಅಷ್ಟೇ: ಸಚಿವ ತಿಮ್ಮಾಪೂರ

ಜಿ.ಪರಮೇಶ್ವರ ಸಿಎಂ ಆಗಬೇಕೆಂಬ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ತಿಮ್ಮಾಪುರ, ಅದು ಅವರ ಅಭಿಪ್ರಾಯ, ನಮ್ಮಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ, ಅವರವರ ಅಭಿಪ್ರಾಯ ಹೇಳಿದ್ದಾರೆ. ಅವರು ಈಗಲೇ ಆಗಬೇಕು ಅಂದಿದ್ದಾರಾ, ಅವರು ಒಮ್ಮೆ ಸಿಎಂ ಆಗಲಿ ಅಂತಾ ಅಂದಿದ್ದಾರೆ ಎಂದರು. ನಿಮಗೂ ಸಿಎಂ ಆಗುವ ಆಸೆ ಇದೆಯಾ ಎಂಬ ಮಾತಿಗೆ ಯಾಕೆ ಆಗಬಾರದು, ನಿಮಗಿದೆ ಅಂದ್ರೆ ನನಗಿರಬಾರದಾ, ಎಂದು ತಿಮ್ಮಾಪುರ ನಸುನಕ್ಕರು.

ಅಡ್ಡದಾರಿಯೇ ಬಿಜೆಪಿಯವರ ಮನೆದೇವರು: ಬಿಜೆಪಿಯವರು ನೇರವಾಗಿ ಜನರಿಂದ ಆಯ್ಕೆಯಾಗಿ ಸರ್ಕಾರವನ್ನು ರಚನೆ ಮಾಡಲು ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಅವರು ಆಪರೇಷನ್ ಅಡ್ಡದಾರಿಯ ಮೂಲಕ ಅಧಿಕಾರ ಬಂದವರಾಗಿದ್ದಾರೆ. ಅಡ್ಡದಾರಿಯೇ ಬಿಜೆಪಿಯ ಮನೆದೇವರಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಜನ ಬೆಂಬಲದ ಬಹುಮತ ಪಡೆದು ಸರ್ಕಾರ ರಚಿಸುವ ತಾಕತ್ತಿಲ್ಲ. ಹೀಗಾಗಿ, ಅವರು ಕುತಂತ್ರ ಮಾಡಿಯೇ ಅಧಿಕಾರಕ್ಕೆ ಬಂದಿರುವುದು ಹೆಚ್ಚು ಎಂದು ಹೇಳಿದರು.

ಬಿಜೆಪಿಯವರು ತಮ್ಮ ಕೇಂದ್ರ ಸರ್ಕಾರದ ಬೆಂಬಲದಿಂದ ಐಟಿ, ಇಡಿ ದಾಳಿಗಳನ್ನು ನಡೆಸಿ ಆಟವಾಡುತ್ತಾರೆ. ನೆರೆಯ ಮಹಾರಾಷ್ಟ್ರದಲ್ಲಿ ಇದೇ ರೀತಿಯಾಗಿದೆ. ಆದರೆ, ನಾವು ಬಹಳ ಕ್ಲೀನ್ ಆಗಿದ್ದೇವಿ. ನಮ್ಮ ಸರ್ಕಾರ 5 ವರ್ಷ ಸಂಪೂರ್ಣ ಕಾರ್ಯನಿರ್ವಹಿಸುತ್ತದೆ ಎಂದರು. ಬಿಜೆಪಿಗರು ನಮ್ಮ ಸರ್ಕಾರವನ್ನು ಪತನಗೊಳಿಸುವ ಭ್ರಮೆಯಲ್ಲಿ ಇದ್ದಾರೆ. ಸರ್ಕಾರ ಆಗ ಬೀಳುತ್ತೆ, ಈಗ ಬೀಳುತ್ತೆ ಎಂದು ಅವರು ಕಾಯುತ್ತಿದ್ದಾರೆ. ಆದರೆ, ರಾಜ್ಯದ ಜನ ನಮಗೆ ಪೂರ್ಣ ಪ್ರಮಾಣದ ಅಧಿಕಾರ ನೀಡಿದ್ದಾರೆ. ನಾವು ಐದು ವರ್ಷದ ಅಧಿಕಾರ ಪೂರೈಸಲಿದ್ದೇವೆ ಎಂದರು.

ರಾಜ್ಯ ಸರ್ಕಾರ ಬಹಳ ದಿನ ಹೋಗಲ್ಲ ಎಂಬ ಯತ್ನಾಳ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಪಾಪ, ಯತ್ನಾಳ ಅವರು ಹೇಳಿದ ಒಂದು ಮಾತಾದ್ರೂ ನಿಜ ಆಗಿವೆಯೇ ಎಂದು ಪ್ರಶ್ನಿಸಿದರು. ಒಂದು ವಾರದಲ್ಲಿ ಸಿಡಿ ಸ್ಫೋಟ ಮಾಡುತ್ತೇನೆ ಎಂಬ ರಮೇಶ್ ಜಾರಕಿಹೊಳಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಪಾಪ ರಮೇಶ್ ಜಾರಕಿಹೊಳಿ ಬಿಜೆಪಿಗೆ ಹೋದರು. ಅಲ್ಲಿ ಏನೂ ಸಾಧ್ಯವಾಗಲಿಲ್ಲ. 

ಬಿಜೆಪಿಗರು ಆಪರೇಷನ್‌ ಮಾಡಿಯೇ ಅಧಿಕಾರ ಮಾಡಿದವರು: ಸಚಿವ ಆರ್‌.ಬಿ.ತಿಮ್ಮಾಪೂರ

ಅವರಿಗೆ ನೀಡಿದ್ದ ನೀರಾವರಿ ಖಾತೆಯನ್ನೂ ಬಿಜೆಪಿಯವರು ಕಿತ್ತುಕೊಂಡರು, ಅಧಿಕಾರದಿಂದ ವಂಚಿತರಾಗಿರುವ ರಮೇಶ್ ಜಾರಕಿಹೊಳಿ ಭ್ರಮನಿರಸನಗೊಂಡು ಏನೇನೋ ಮಾತನಾಡುತ್ತಿದ್ದಾರೆ. ಏನಾದರೂ ಮಾತನಾಡಿ ಸುದ್ದಿಯಲ್ಲಿ ಇರಬೇಕು ಎಂಬುದಷ್ಟೇ ಅವರ ಉದ್ದೇವಾಗಿದೆ. ಅವರು ನನ್ನ ಆತ್ಮೀಯ ಗೆಳೆಯ. ಡಿಸಿಎಂ ಡಿಕೆಶಿ, ರಮೇಶ್ ಜಾರಕಿಹೊಳಿ ಪರಸ್ಪರ ವಾಗ್ದಾಳಿ ಅವರ ವೈಯಕ್ತಿಕ ವಿಚಾರ ಅದನ್ನು ಕೈಬಿಡಿ ಎಂದರು.

Latest Videos
Follow Us:
Download App:
  • android
  • ios