ಸಿದ್ದರಾಮಯ್ಯನವರೇ ಕಾಂತರಾಜ ಆಯೋಗ ವರದಿಯನ್ನು ಸ್ವೀಕರಿಸಿ: ಎಚ್.ವಿಶ್ವನಾಥ್
ಕಾಂತರಾಜ ಆಯೋಗವು ರಾಜ್ಯದ ಎಲ್ಲಾ ಜಾತಿ, ಭಾಷಿಕರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವೀಕರಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಎಚ್.ವಿಶ್ವನಾಥ್ ಆಗ್ರಹಿಸಿದರು.
ಮೈಸೂರು (ಜ.29): ಕಾಂತರಾಜ ಆಯೋಗವು ರಾಜ್ಯದ ಎಲ್ಲಾ ಜಾತಿ, ಭಾಷಿಕರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವೀಕರಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಎಚ್.ವಿಶ್ವನಾಥ್ ಆಗ್ರಹಿಸಿದರು. ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂತರಾಜ್ ಅವರು ಮಾಡಿರುವುದು ಜಾತಿ ಗಣತಿ ಅಲ್ಲ, ಅದು ಜಾತಿ ಸಮೀಕ್ಷೆ. 160 ಕೋಟಿ ರೂ. ಇದಕ್ಕೆ ಖರ್ಚಾಗಿದೆ. ಸಾವಿರಾರು ಅಧಿಕಾರಿಗಳು, ಶಿಕ್ಷಕರು ಇದಕ್ಕಾಗಿ ಕೆಲಸ ಮಾಡಿದ್ದಾರೆ. ಜಿಲ್ಲಾಧಿಕಾರಿಗಳು, ತಹಸೀಲ್ದಾರ್ ಉಸ್ತುವಾರಿ ವಹಿಸಿದ್ದಾರೆ.
1351 ಜಾತಿಗಳ ಸಮೀಕ್ಷೆಯಾಗಿದೆ. ಅತ್ಯಂತ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಲಾಗಿದೆ. ಇದಕ್ಕಾಗಿ ಸಾಫ್ಟ್ ವೇರ್ ಸಹ ಸಿದ್ಧಪಡಿಸಲಾಗಿದೆ. ಐಐಎಂ ರಿವ್ಯೂ ಸ್ಕ್ಯಾನ್ ಮಾಡಿ ವೈಜ್ಞಾನಿಕವಾಗಿದೆ ಅಂತಾ ಸರ್ಟಿಫಿಕೇಟ್ ನೀಡಿದೆ ಎಂದರು. ವಿರೋಧ ಪಕ್ಷದ ನಾಯಕ ಅಶೋಕ್ ವೈಜ್ಞಾನಿಕವಿಲ್ಲ ಎಂದು ಹೇಳಿದ್ದಾರೆ. ಅಶೋಕ್ ಗೆ ಓದಲು ಬರುವುದಿಲ್ಲ ಬರೆಯಲು ಬರುವುದಿಲ್ಲ ಎನ್ನಬೇಕು. ರಿಯಲ್ ಎಸ್ಟೇಟ್ ಗಿರಾಕಿಗಳೆಲ್ಲಾ ಇದರ ಬಗ್ಗೆ ಮಾತನಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಯಾರಿಗೂ ಇದರ ಬಗ್ಗೆ ಗೊತ್ತಿಲ್ಲ ಎಂದು ಅವರು ಕಿಡಿಕಾರಿದರು.
ಬಿಜೆಪಿ ಪಕ್ಷದಲ್ಲಿ ಯಾವುದೇ ಬಣಗಳಿಲ್ಲ: ಶಾಸಕ ಮಹೇಶ ಟೆಂಗಿನಕಾಯಿ
ಜಾತಿ ಸಮೀಕ್ಷೆ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವೀಕಾರ ಮಾಡಬೇಕು. ಚಿತ್ರದುರ್ಗದಲ್ಲಿ ಸಮಾವೇಶಕ್ಕೂ ವರದಿ ಮುನ್ನ ಸ್ವೀಕರಿಸಿ ಚರ್ಚೆ ಮಾಡಿ. ವರದಿ ಸ್ವೀಕರಿಸಲು ಸಿದ್ದರಾಮಯ್ಯ ಏಕೆ ತಡ ಮಾಡುತ್ತಿದ್ದೀರಾ? ಸದ್ಯದಲ್ಲೇ ಜಾತಿ ಸಮೀಕ್ಷೆ ವಿಚಾರದ ಚರ್ಚೆಗೆ ಸಭೆ ಕರೆಯುತ್ತೇನೆ ಎಂದರು. ಜಾತಿ ಗಣತಿ ಬಗ್ಗೆ ಸ್ವಾಮೀಜಿಗಳ ವಿರೋಧಕ್ಕೆ ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿಗಳಾಗಲಿ, ರಾಜಕಾರಣಿಗಳು ವರದಿಯನ್ನೇ ಓದಿಲ್ಲ. ಸುಮ್ಮ ಸುಮ್ಮನೇ ಲೀಕ್ ಆಗಿದೆ ಅಂತಾರೆ ಅಷ್ಟೇ. ಸ್ವಾಮೀಜಿಗಳಿಗೆ ಸಂವಿಧಾನವೇ ಗೊತ್ತಿಲ್ಲ, ಅದನ್ನು ಓದಿಲ್ಲ. ಸ್ವಾಮೀಜಿಗಳ ಬಾಯಲ್ಲಿ ಅಂಬೇಡ್ಕರ್ ಹೆಸರು ಬರುವುದಿಲ್ಲ, ಭಾರತದ ಹೆಸರನ್ನು ಅವರು ಹೇಳುವುದಿಲ್ಲ. ಅನವಶ್ಯಕವಾಗಿ ಈ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಶಾಮನೂರನ್ನು ಕಾಂಗ್ರೆಸ್‌ನಿಂದ ಹೊರಹಾಕಿ: ಕೃತಜ್ಞತೆಯೇ ಇಲ್ಲದ ನಾಯಕ ಶಾಮನೂರು ಶಿವಶಂಕರಪ್ಪ ಅವರನ್ನು ಕೂಡಲೇ ಕಾಂಗ್ರೆಸ್ ಪಕ್ಷದಿಂದ ಹೊರ ಹಾಕಬೇಕು ಎಂದು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆಗ್ರಹಿಸಿದರು. ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಮನೂರು ಶಿವಶಂಕರಪ್ಪ ಅವರು ಕಾಂಗ್ರೆಸ್ ನಿಂದಲೇ ಗೆದ್ದಿದ್ದಾರೆ. ಉದ್ದಕ್ಕೂ ಕಾಂಗ್ರೆಸ್ ನಿಂದ ನೆರವು ಪಡೆದಿದ್ದಾರೆ. ಜಗತ್ತಿಗೆ ಇವರನ್ನು ತೋರಿಸಿದವರು ದಿವಂಗತ ಡಿ. ದೇವರಾಜ ಅರಸ್ ಅವರು. ಅವರ ಆಶೀರ್ವಾದದಿಂದಲೇ ಬೆಳೆದರೂ ಪಕ್ಷ ಹಾಗೂ ಅರಸರ ಬಗ್ಗೆ ಇವರಿಗೆ ಕಿಂಚಿತ್ತೂ ಕೃತಜ್ಞತೆಯಿಲ್ಲ ಎಂದು ದೂರಿದರು.
ಕಾಂಗ್ರೆಸ್ ಪಕ್ಷ ಜೀವಂತವಾಗಿದ್ದರೆ, ಡಿ.ಕೆ. ಶಿವಕುಮಾರ್ ಬಂಡೆ ಆಗಿದ್ದರೆ ಕೂಡಲೇ ಶಾಮನೂರು ಶಿವಶಂಕರಪ್ಪ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು. ಇವರು ಇಲ್ಲದಿದ್ದರೆ ಕಾಂಗ್ರೆಸ್ ನಡೆಯುವುದಿಲ್ಲವೇ, ವೀರಶೈವರಿಗೆ ಏನೂ ಅನುಕೂಲ ಆಗಿಲ್ಲ ಎಂದು ಶಾಮನೂರು ಶಿವಶಂಕರಪ್ಪ ಆರೋಪಿಸುತ್ತಾರೆ. ಆದರೆ, ಇವರಿಗೆ ಕೆಲವೇ ಮತ ವೀರಶೈವರಿಂದ ಬಿದ್ದಿವೆ. ಇವರಿಗೆ ಇತರರೇ ಹೆಚ್ಚು ಮತ ಹಾಕಿದ್ದಾರೆ. ಇವರ ಬಗ್ಗೆ ಏಕೆ ಅವರು ಮಾತನಾಡುವುದಿಲ್ಲ ಎಂದು ಅವರು ಪ್ರಶ್ನಿಸಿದರು.
ಧ್ವಜ ಇಳಿಸೋ ದುಸ್ಸಾಹಕ್ಕೆ ಮುಂದಾದ ಕಾಂಗ್ರೆಸ್ ನಡೆ ಖಂಡನೀಯ: ಬಿ.ವೈ.ವಿಜಯೇಂದ್ರ
ಬಿಜೆಪಿ ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕೃತಜ್ಞತೆಯೇ ಇಲ್ಲದ ನಾಯಕ ಶ್ಯಾಮನೂರು ಶಿವಶಂಕರಪ್ಪ. ದುಡ್ಡು ಇದೆ ಎಲ್ಲರನ್ನೂ ಕೊಂಡುಕೊಳ್ಳಬಹುದು ಅಂದುಕೊಂಡಿದ್ದಾರೆ. ನಮ್ಮವರೇ ಸರಿ ಇಲ್ಲ. ನಮ್ಮ ಮಂತ್ರಿಗಳು, ಮುಖ್ಯಮಂತ್ರಿಗಳು ಅವರ ಮೇಲೆ ಡಿಫೆಂಡ್ ಆಗಿದ್ದಾರೆ. ಅಲ್ಲಿಗೆ ಹೋದಾಗ ಅವರ ಗೆಸ್ಟ್ ಹೌಸ್ ನಲ್ಲೇ ಮಲಗುತ್ತಾರೆ ಎಂದು ಅವರು ಕಿಡಿಕಾರಿದರು.