ಬೆಂಗಳೂರು, (ಜೂನ್.26): ಪ್ರತಿಷ್ಠೆಯ ಕಣವಾಗಿದ್ದ ಪ್ರದೇಶ ಕುರುಬರ ಸಂಘದ ಚುನಾವಣೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಬೆಂಬಲಿಗರು ಭರ್ಜರಿ ಗೆಲುವು ಸಾಧಿಸಿದ್ದಾರೆ.

ಈ ಮೂಲಕ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪಗೆ ಮುಖಂಭವಾಗಿದೆ. ಇಂದು (ಶುಕ್ರವಾರ) ನಡೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಬೆಂಬಲಿಗರ ಎದುರು ಈಶ್ವರಪ್ಪ ಬೆಂಬಲಿಗರು 34ರಲ್ಲಿ ಒಂದೇ ಒಂದು ಸ್ಥಾನ ಗೆಲ್ಲಲಾಗದೇ ಹೀನಾಯವಾಗಿ ಸೋಲುಕಂಡರು.

 ಬೆಂಗಳೂರಲ್ಲಿ ಲಾಕ್‌ಡೌನ್ ಇಲ್ಲ, ಪೆಟ್ರೋಲ್-ಡೀಸೆಲ್ ಕೈಗೆಟುಕುತ್ತಿಲ್ಲ; ಜೂ.26ರ ಟಾಪ್ 10 ಸುದ್ದಿ!

ಸಂಘದಲ್ಲಿ ರಾಜಕೀಯ ಬೇಡ ಎಂದು ಸಿದ್ದರಾಮಯ್ಯ ಅವರು ಅವಿರೋಧ ಆಯ್ಕೆಗೆ ಒಲವು ತೋರಿದ್ದರು. ಆದ್ರೆ, ಆಡಳಿತ ಪಕ್ಷದ  ಈಶ್ವರಪ್ಪ
ಚುನಾವಣೆಗೆ ಪಟ್ಟು ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣೆ ನಡೆದಿದ್ದು, ಈಶ್ವರಪ್ಪನವರ ಬೆಂಬಲಿಗರು ಮಕಾಡೆ ಮಲಗಿದರು.

ಒಟ್ಟು 118 ನಿರ್ದೇಶಕರುಗಳಿದ್ದು, ಎಲ್ಲರೂ ಮತ ಚಲಾಯಿಸಿದ್ದಾರೆ. ಇನ್ನು ಪ್ರಮುಖವಾಗಿ ಸಿದ್ದರಾಮಯ್ಯ ಅವರ ಬೆಂಬಲಿಗರ ಪರವಾಗಿ ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರು ಚುನಾವಣೆ ಉಸ್ತುವಾರಿ ವಹಿಸಿಕೊಂಡಿದ್ದರು.

ನೂತನ ಪದಾಧಿಕಾರಿಗಳ ಪಟ್ಟಿ ಇಂತಿದೆ.
* ಅಧ್ಯಕ್ಷ: ಬಳ್ಳಾರಿ ಕೃಷ್ಣ (83 ಮತಗಳು)‌, 
* ಪ್ರಧಾನ ಕಾರ್ಯದರ್ಶಿ: ಮಾಜಿ ಮೇಯರ್ ವೆಂಕಟೇಶ ಮೂರ್ತಿ (81 ಮತಗಳು) 
* ಕಾರ್ಯಾಧ್ಯಕ್ಷ: ಮೈಸೂರಿನ ಸುಬ್ಬಣ್ಣ (84)‌ ಆಯ್ಕೆ.
*ಖಜಾಂಚಿ: ದೇವರಾಜು (84) ಆಯ್ಕೆ

ಹಿರಿಯ ಉಪಾಧ್ಯಕ್ಷರು
*ಈರಣ್ಣ ಝಳಕಿ (83 ಮತಗಳು)
* ಜಗದೀಶ (78), 
* ಬಸವರಾಜ್ ಬಸಲಗುಂದಿ (75), 
* ರೇಖಾ ಹುಲಿಯಪ್ಪಗೌಡ (85) ಆಯ್ಕೆ.

ಉಪಾಧ್ಯಕರು
* ಕೃಷ್ಣ ಕುಮಾರ್ (78ಮತಗಳು)
* ಪುಟ್ಟಬಸವಯ್ಯ (78)
* ಮಿರ್ಜಾಪುರ ಮಹಾದೇವಪ್ಪ (76), 
* ಎಂ.ಸಿ.ರಾಜಣ್ಣ (81),
* ವೆಂಕಟರಮಣಪ್ಪ(75)
* ಶಂಕರ ವಿಠೋಬ ಹೆಗಡೆ (79)