Kolar Politics: ಅಂತಿಮವಾಗಿ ದೃಢ ನಿರ್ಧಾರ ಕೈಗೊಂಡ ವರ್ತೂರ್ ಪ್ರಕಾಶ್,ಸಿದ್ದುಗೆ ಶಾಕ್
ಕೋಲಾರ ಜಿಲ್ಲಾರಾಜಕೀಯದಲ್ಲಿ ಮಹತ್ವದ ಬೆಳವಣಿಗೆ
ಜಿಲ್ಲೆಯಲ್ಲಿ ಪಕ್ಷಾಂತರ ಪರ್ವ ಜೋರು
ದೃಢ ನಿರ್ಧಾರ ಕೈಗೊಂಡ ವರ್ತೂರ್ ಪ್ರಕಾಶ್
ಕೋಲಾರ, (ನ.28): ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆ (Kaarnataka MLC Election) ರಂಗೇರಿದೆ. ಅದರಲ್ಲೂ ಕೋಲಾರ ಜಿಲ್ಲಾ ರಾಜಕೀಯದಲ್ಲಿ (Kolar Distrct Politics) ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ.
ಹೌದು...ವಿಧಾನಪರಿಷತ್ ಚುನಾವಣೆ ಸಂದರ್ಭದಲ್ಲಿ ಕೋಲಾರ (Kolar) ಜಿಲ್ಲಾ ರಾಜಕೀಯದಲ್ಲಿ ಚಟುವಟಿಕೆಗಳು ಬಿರುಸುಗೊಂಡಿದ್ದು ಜತೆಗೆ ಪಕ್ಷಾಂತರ ಪರ್ವ ಜೋರಾಗಿದೆ. ಅದರಲ್ಲೂ ಪ್ರಮುಖವಾಗಿ ಸಿದ್ದರಾಮಯ್ಯನವರ(siddaramaiah) ಕಟ್ಟ ಬೆಂಬಲಿಗೆ, ಮಾಜಿ ಸಚಿವ ವರ್ತೂರ್ ಪ್ರಕಾಶ್(Varthur Prakash) ಇದೀಗ ಬಿಜೆಪಿ(BJP) ತೆಕ್ಕೆಗೆ ಜಾರಿದ್ದಾರೆ.
Karnataka Politics:ಒಂದೇ ದಿನ ಎರಡೆರಡು ಅಚ್ಚರಿಯ ರಾಜಕೀಯ ಬೆಳವಣಿಗೆಗಳು, ಕಾಂಗ್ರೆಸ್‌ಗೆ ಬಿಗ್ ಶಾಕ್
ಕೋಲಾರ ಕಾಂಗ್ರೆಸ್‌ನ(Congress) ಜಿಲ್ಲಾ ಅಧ್ಯಕ್ಷ ಕೆ ಚಂದ್ರಾರೆಡ್ಡಿ ಬಿಜೆಪಿಗೆ ಸೇರಿರುವ ಬೆನ್ನಲ್ಲಿಯೇ ಕೋಲಾರ ಜಿಲ್ಲೆಯ ಪ್ರಭಾವಿ ಮುಖಂಡ ವರ್ತೂರು ಪ್ರಕಾಶ್ ಬಿಜೆಪಿಗೆ ಸೇರುವುದು ಬಹುತೇಕ ಪಕ್ಕಾ ಆಗಿದೆ. ವಿಧಾನಪರಿಷತ್ ಚುನಾವಣೆ ಮುಗಿದ ಬಳಿಕ ಬೃಹತ್ ಸಮಾವೇಶದಲ್ಲಿ ವರ್ತೂರ್ ಪ್ರಕಾಶ್ ಅವರನ್ನ ಬಿಜೆಪಿಗೆ ಸೇರಿಸಿಕೊಳ್ಳಲು ನಾಯಕರು ಪ್ಲಾನ್ ಮಾಡಿದ್ದಾರೆ.
ದೃಢ ನಿರ್ಧಾರ ಕೈಗೊಂಡ ವರ್ತೂರ್ ಪ್ರಕಾಶ್
ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ವರ್ತೂರು ಪ್ರಕಾಶ್ ಕೆಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷ ಸೇರಲು ಅತೀವ ಪ್ರಯತ್ನ ನಡೆಸುತ್ತಿದ್ದರೂ ಸಾಧ್ಯವಾಗಿಲ್ಲ. ಬೆಂಬಲಿಗರಿಂದ ಒತ್ತಾಯಗಳನ್ನ ಹೇರಿ ಕೈ ಪಾಳಯ ಸೇರುವ ಪ್ರಯತ್ನ ಮಾಡಿದ್ರೂ ಅದು ಸಕ್ಸಸ್ ಆಗಿಲ್ಲ. ಈ ಹಿನ್ನೆಲೆಯಲ್ಲಿ ಅಂತಿಮವಾಗಿ ಬಿಜೆಪಿ ಸೇರಲು ತೀರ್ಮಾನಿಸಿದ್ದಾರೆ.
ಇಂದು (ನ.28) ಕೋಲಾರ ನಗರದ ಪೂಜಾ ಕಲ್ಯಾಣ ಮಂಟಪದಲ್ಲಿ ವರ್ತೂರ್ ಪ್ರಕಾಶ್ ತಮ್ಮ ಬೆಂಬಲಿಗರ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಂಡರು. ಇನ್ನು ಪರಿಷತ್ ಚುನಾವಣೆ ಬಿಜೆಪಿ ಬೆಂಬಲಿಸುವುದಾಗಿ ವರ್ತೂರ್ ಪ್ರಕಾಶ್ ಸ್ಪಷ್ಟಪಡಿಸಿದರು.
ಕಳೆದ ಚುನಾವಣೆಯಲ್ಲಿ ನನ್ನ ಸೋಲಿಗೆ ಹಲವರು ಶ್ರಮಿಸಿದರು. ನನ್ನ ಬಳಿ ಅಧಿಕಾರ ಇಲ್ಲದಿದ್ದರೂ ನೀವು ನನ್ನ ಬೆಂಬಲಕ್ಕಿದ್ದೀರಿ ಎಂದು ಬೆಂಬಲಿಗರ ಸಭೆಯಲ್ಲಿ ಕಣ್ಣೀರು ಹಾಕಿದರು.
ಪರಿಷತ್ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನನ್ನ ನೆರವು ಬಯಸಿದ್ದಾರೆ. ಹುಲಿ ತರ ಇದ್ದೀಯಾ, ಹುಲಿ ತರ ನಡೆಸಿಕೊಳ್ಳುತ್ತೇನೆ ಅಂದ್ರು. ಗೋವಿಂದ ಕಾರಜೋಳ ಸಹ ಹುಲಿ ತರ ಇದ್ದೀಯಾ ಅಂದರು. ಬಿಜೆಪಿಯವರು ನನ್ನನ್ನು ಬಹಳ ಪ್ರೀತಿಯಿಂದ ಡೆಸಿಕೊಳ್ಳುತ್ತಾರೆಂಬ ವಿಶ್ವಾಸವಿದೆ ಎಂದು ಹೇಳುವ ಮೂಲಕ ಬಿಜೆಪಿ ಸೇರುವ ಬಗ್ಗೆ ಸುಳಿವು ನೀಡಿದರು.
ಕಳೆದ 3-4 ವರ್ಷಗಳಿಂದ ನಾನು ದುಃಖ ಅನುಭವಿಸಿದ್ದೇನೆ. ನಿಮ್ಮ ದುಡ್ಡಲ್ಲೇ ನೀವು ಜಿ.ಪಂ., ಗ್ರಾ.ಪಂ. ಚುನಾವಣೆ ಗೆದ್ರಿ. ಕಿಡ್ನ್ಯಾಪ್ ಆಗಿದ್ದಾಗ ನನ್ನ ಜೀವ ಉಳಿದಿದ್ದೇ ಹೆಚ್ಚು. ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಈ ಹಿಂದೆ ನನ್ನನ್ನು ಸೋಲಿಸಿದ್ದ. ಅದೇ ರೀತಿ ಅವರನ್ನು ಸೋಲಿಸುವವರೆಗೂ ಸಮಾಧಾನವಿಲ್ಲ ಎಂದು ಬೆಂಬಲಿಗರ ಸಭೆಯಲ್ಲಿ ವರ್ತೂರು ಪ್ರಕಾಶ್ ಕಣ್ಣೀರು ಹಾಕುತ್ತ ಶಪಥ ಮಾಡಿದರು.
ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ(Kolar Congress President) ಚಂದ್ರಾರೆಡ್ಡಿ(Chandra Reddy) ನಿನ್ನೆ (ನವೆಂಬರ್ 27) ರಾಜೀನಾಮೆ ಪತ್ರವನ್ನು ತಮ್ಮ ಆಪ್ತರ ಮೂಲಕ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷರಿಗೆ ತಲುಪಿಸಿ, ಬಳಿಕ ಬೆಂಗಳೂರಿನಲ್ಲಿ(Bengaluru) ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai) ನಿವಾಸದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.