ರಾಜ್ಯದಲ್ಲಿ ಕೊರೋನಾ ಕಿಟ್ ಖರೀದಿ ಭ್ರಷ್ಟಾಚಾರ ದಿನೇ ದಿನೇ ಹೊಸ ತಿರುವುಗಳನ್ನು ಪಡೆಯುತ್ತಿದೆ. ಇದರ ಮಧ್ಯೆ ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಾಯಕ ಸಭೆ ಕರೆದಿದ್ದು, ಭಾರೀ ಕುತೂಹಲ ಮೂಡಿಸಿದೆ.
ಬೆಂಗಳೂರು, (ಜುಲೈ.24): ವೈದ್ಯಕೀಯ ಉಪಕರಣಗಳ ಖರೀದಿ ಹಗರಣ ಕುರಿತಂತೆ ಮುಂದೆ ಯಾವ ರೀತಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹೋರಾಡಬೇಕು ಎಂಬುದಾಗಿ ಚರ್ಚಿಸುವ ಸಂಬಂಧ ಜುಲೈ 27 ರಂದು ಕಾಂಗ್ರೆಸ್ ಹಿರಿಯ ನಾಯಕರ ಸಭೆ ಕರೆಯಲಾಗಿದೆ.
ರಾಜ್ಯದಲ್ಲಿ ಕೊರೋನಾ ಕಿಟ್ ಖರೀದಿ ಭ್ರಷ್ಟಾಚಾರ ದಿನೇ ದಿನೇ ಹೊಸ ತಿರುವುಗಳನ್ನು ಪಡೆಯುತ್ತಿದೆ. ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ಭ್ರಷ್ಟಾಚಾರ, ಹಗರ ಮಾಡಿಲ್ಲ ಎಂಬುದಾಗಿ ಕಾಂಗ್ರೆಸ್ ಗೆ ತಿರುಗೇಟು ನೀಡಿದ್ರೆ, ಕಾಂಗ್ರೆಸ್ ಮಾತ್ರ ದಾಖಲೆಯ ಸಮೇತ ರಾಜ್ಯ ಸರ್ಕಾರದ ಸ್ಪಷ್ಟನೆಗೆ ತಿರುಗೇಟು ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಮುಜುಗರವಾಗಿದ್ದು, ಸಿದ್ದರಾಮಯ್ಯ ಅವರ ಬಾಯಿ ಹೇಗೆ ಮುಚ್ಚಬೇಕೆಂದು ಬಿಜೆಪಿ ಚಿಂತನೆ ನಡೆಸಿದೆ.
'ಭ್ರಷ್ಟಾಚಾರದ ಸುವಾಸನೆ ಬರ್ತಿದೆ ಅಂಥ ಕರಿಬೇಕಾ' ಸರ್ಕಾರಕ್ಕೆ ಸಿದ್ದು ದಾಖಲೆ ಪಂಚ್!
ಮತ್ತೊಂದೆಡೆ ಮುಂದಿನ ಹೆಜ್ಜೆ ಯಾವ ರೀತಿಯಲ್ಲಿ ಇಡಬೇಕು ಎನ್ನುವ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸೋಮವಾರ (ಜುಲೈ 27) ಕಾಂಗ್ರೆಸ್ ನಾಯಕರ ಸಭೆ ಕರೆದಿದ್ದಾರೆ. ಸರ್ಕಾರ ತನಿಖೆಗೆ ಒಪ್ಪಲು ಸಿದ್ದವಿಲ್ಲದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ಹಣಿಯಲು ಹೋರಾಟದ ಹಾದಿ ತುಳಿಯಲು ನಿರ್ಧರಿಸಿದೆ ಎನ್ನಲಾಗಿದ್ದು, ಈ ಬಗ್ಗೆ ಅಂತಿಮ ರೂಪುರೇಷೆಗಳನ್ನ ಚರ್ಚಿಸಲು ಸಭೆ ಕರೆಯಲಾಗಿದೆ ಎಂದು ತಿಳಿದುಬಂದಿದೆ.
ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಂದಿನ ಹೆಜ್ಜೆ ಏನು ಇಡಲಿದೆ ಎಂಬ ಬಗ್ಗೆ ಕುತೂಹಲ ಕೆರಳಿಸಿದೆ. ಅಲ್ಲದೇ ವಿಪಕ್ಷ ನಾಯಕರಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸೋಮವಾರದ ಸಭೆಯಲ್ಲಿ ಯಾವೆಲ್ಲ ಚರ್ಚೆಯನ್ನು ನಡೆಸಲಿದ್ದಾರೆ ಎಂಬ ಬಗ್ಗೆಯೂ ಕುತೂಹಲ ಮೂಡಿಸಿದೆ.
ಒಟ್ಟಿನಲ್ಲಿ ಸೋಮವಾರ ಕಾಂಗ್ರೆಸ್ ಕರೆದಿರುವಂತ ಸಭೆ ತೀವ್ರ ಕುತೂಹಲ ಮೂಡಿಸಿದಂತೂ ಸತ್ಯ.
