ಅರಮನೆ ಮೈದಾನದಲ್ಲಿ ಜು.13ಕ್ಕೆ ಸಿದ್ದರಾಮೋತ್ಸವ ಪೂರ್ವಸಿದ್ಧತೆ ಸಭೆ

  • ಜು,13ಕ್ಕೆ ಸಿದ್ದರಾಮೋತ್ಸವ ಪೂರ್ವಸಿದ್ಧತೆ ಸಭೆ
  • ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜನೆ
  • 800 ಜನರನ್ನು ಒಳಗೊಂಡ ಬೃಹತ್‌ ಪೂರ್ವಸಿದ್ಧತಾ ಸಭೆ
siddaramaiah birthday celebration preparation meeting at bengaluru place gow

ಬೆಂಗಳೂರು(ಜು.9):‘ಸಿದ್ದರಾಮೋತ್ಸವ’ಕ್ಕೆ ಅಗತ್ಯ ರೂಪರೇಷೆ ಸಿದ್ಧಪಡಿಸಲು ಬೃಹತ್‌ ಪೂರ್ವ ಸಿದ್ಧತಾ ಸಭೆಯನ್ನು ನಗರದ ಅರಮನೆ ಮೈದಾನದ ಕಿಂಗ್ಸ್ ಕೋರ್ಟ್‌ನಲ್ಲಿ ಜು. 13ರಂದು ಬೆಳಗ್ಗೆ 10 ಗಂಟೆಗೆ ನಡೆಸಲು ‘ಸಿದ್ದರಾಮಯ್ಯ 75’ ಜನ್ಮ ದಿನಾಚರಣೆ ಸಮಿತಿ ನಿರ್ಧರಿಸಿದೆ.

ಈ ಬಗ್ಗೆ ಸಮಿತಿಯ ಅಧ್ಯಕ್ಷ ಆರ್‌.ವಿ. ದೇಶಪಾಂಡೆ ಅವರು ಶಾಸಕರು, ವಿಧಾನಪರಿಷತ್‌ ಸದಸ್ಯರು, ಮಾಜಿ ಸಚಿವರು, ಸಂಸದರು, ಮಾಜಿ ಸಂಸದರು, ಸ್ವಾಗತ ಸಮಿತಿಯ ಪದಾಧಿಕಾರಿಗಳು, ಜಿಲ್ಲಾ ಸಂಚಾಲಕರು, ಕೆಪಿಸಿಸಿ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು, ಕೆಪಿಸಿಸಿ ವಿವಿಧ ವಿಭಾಗದ ಅಧ್ಯಕ್ಷರಿಗೆ ಸಭೆಯಲ್ಲಿ ಭಾಗವಹಿಸುವಂತೆ ಸೂಚನೆ ನೀಡಿದ್ದಾರೆ.

ಸಭೆಯಲ್ಲಿ ಡಿ.ಕೆ. ಶಿವಕುಮಾರ್‌, ಬಿ.ಕೆ. ಹರಿಪ್ರಸಾದ್‌, ಸಿದ್ದರಾಮಯ್ಯ, ಎಂ.ಬಿ. ಪಾಟೀಲ್‌ ಸೇರಿ ಹಲವರು ಭಾಗವಹಿಸಲಿದ್ದಾರೆ. ಸಿದ್ದರಾಮೋತ್ಸವ ಸಮಾರಂಭವನ್ನು ಯಶಸ್ವಿಗೊಳಿಸಲು ಹಾಗೂ ರಾಜ್ಯದ ಮೂಲೆ-ಮೂಲೆಯಿಂದ ಕನಿಷ್ಠ 5 ಲಕ್ಷ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ. ಜನರು ಹೆಚ್ಚು ಸಂಖ್ಯೆಯಲ್ಲಿ ಸೇರಿ ಸಮಾರಂಭ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಜು.13ರಂದು ಅರಮನೆ ಮೈದಾನದಲ್ಲಿ 800 ಜನರನ್ನು ಒಳಗೊಂಡ ಬೃಹತ್‌ ಪೂರ್ವಸಿದ್ಧತಾ ಸಭೆ ನಡೆಸಲು ನಿರ್ಧರಿಸಲಾಗಿದೆ.

ರಾಜಕೀಯ ಸಂದೇಶಕ್ಕಾಗೇ ಸಿದ್ದರಾಮೋತ್ಸವ: Siddaramaiah ಸ್ಪಷ್ಟನೆ

ಸಿದ್ದು ಬಗ್ಗೆ 450 ಪುಟಗಳ ಬೃಹತ್‌ ಕೃತಿ ಸಿದ್ಧ: ಸಿದ್ದರಾಮಯ್ಯ ಅವರ 75ನೇ ಜನ್ಮ ದಿನಾಚರಣೆ ಅಂಗವಾಗಿ ಅವರ ಆಡಳಿತದ ಕುರಿತ 450 ಪುಟಗಳ ಬೃಹತ್‌ ಕೃತಿ ಲೋಕಾರ್ಪಣೆಗೊಳ್ಳಲು ಸಿದ್ಧಗೊಂಡಿದೆ.

ಸಾಹಿತಿ ಕಾ.ತ. ಚಿಕ್ಕಣ್ಣ ಹಾಗೂ ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆ ಅವರು ಸಂಪಾದಿಸಿರುವ ‘ಸಿದ್ದರಾಮಯ್ಯ ಆಡಳಿತ/ನೀತಿ ನಿರ್ಧಾರ’ ಎಂಬ ಕೃತಿ ಮೈಸೂರಿನಲ್ಲಿ ಜು.23ರಂದು ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಂದ ಲೋಕಾರ್ಪಣೆಗೊಳ್ಳಲಿದೆ.

ತಾತ್ವಿಕ ವಿವೇಚನೆ ಎಂಬ ಅಡಿ ಬರಹ ಹೊಂದಿರುವ ಈ ಬೃಹತ್‌ ಸಂಪುಟದಲ್ಲಿ 27 ಮಂದಿ ಖ್ಯಾತ ಲೇಖಕರು ಸಿದ್ದರಾಮಯ್ಯ ಅವರ ಆಡಳಿತ ಹಾಗೂ ಪರಿಣಾಮದ ಕುರಿತು ವಿಮರ್ಶಾತ್ಮಕ ಲೇಖನಗಳನ್ನು ಬರೆದಿದ್ದಾರೆ. ಕೃತಿಯಲ್ಲಿ ಸಿದ್ದರಾಮಯ್ಯ ಆಡಳಿತದಲ್ಲಿ ರೂಪಿಸಿದ್ದ ಯೋಜನೆಗಳಲ್ಲಿ ಸಂವಿಧಾನದ ಮೌಲ್ಯಗಳು ಹಾಗೂ ಸಾಮಾಜಿಕ ನ್ಯಾಯದ ಅನುಷ್ಠಾನದ ಬಗ್ಗೆ ವಸ್ತುನಿಷ್ಠ ಹಾಗೂ ವಿಮರ್ಶಾತ್ಮಕ ಲೇಖನಗಳು ಇರಲಿವೆ ಎಂದು ಕೃತಿ ಸಂಪಾದಿಸಿರುವ ಸಾಹಿತಿ ಕಾ.ತ. ಚಿಕ್ಕಣ್ಣ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಸಿದ್ಧರಾಮಯ್ಯ ಮನೆಯಲ್ಲಿ ಡಿಕೆಶಿ ಟಿಫನ್ ಮೀಟಿಂಗ್ ಗುಟ್ಟು ರಟ್ಟು, 

ನನ್ನ ಅಮೃತ ಮಹೋತ್ಸವ ನೀವೆಲ್ಲರೂ ಬನ್ನಿ: ನಾನಗೆ ಶಾಲೆ ದಾಖಲಾತಿ ಪ್ರಕಾರ 75 ವರ್ಷ ಆಗಿದ್ದು ಅಭಿಮಾನಿಗಳು ಅಮೃತ ಮಹೋತ್ಸವ ಆಚರಿಸುತ್ತಿದ್ದಾರೆ. ಆರ್‌ಎಸ್‌ಎಸ್‌ನವರು ಇದನ್ನು ಸಿದ್ದರಾಮೋತ್ಸವ ಎಂದು ಕರೆದರು ಇದನ್ನು ಮಾಧ್ಯಮದವರು ಹಾಗೆ ಹೇಳುತ್ತಿದ್ದಾರೆ. ಇದು ಸಿದ್ದರಾಮಯ್ಯ 75 ಅಮೃತಮಹೋತ್ಸವ, ನಾನು ಎಂದು ಕೇಕ್‌ ಕತ್ತರಿಸಿ ಹುಟ್ಟು ಹಬ್ಬ ಮಾಡಿಕೊಂಡವನಲ್ಲ, ಅಭಿಮಾನಿಗಳೆಲ್ಲ ಸೇರಿ ಆ.3ರಂದು ಮಾಡುವ ಅಮೃತ ಮಹೋತ್ಸವವನ್ನು ಆಚರಣೆ ಮಾಡುತ್ತಿದ್ದು ನೀವೆಲ್ಲ ಬನ್ನಿ ಎಂದರು.

ಜಾತಿ ಒಡೆಯುವರರನ್ನು ದೂರವಿಡಿ, ಯಾರು ಜನ ಸೇವೆ ಮಾಡುತ್ತಾರೆ ಅವರನ್ನು ಗುರುತಿಸಬೇಕು, ಅಧಿಕಾರಕ್ಕೋಸ್ಕರ ರಾಜಕೀಯ ಮಾಡುವವರನ್ನು ನಂಬಬೇಡಿ. ಬಸ್‌ ನಿಲ್ದಾಣವನ್ನು ನಮ್ಮ ಸರ್ಕಾರ ಬಂದೇ ಉದ್ಘಾಟಿಸಬೇಕು. ಈ ಕ್ಷೇತ್ರದಲ್ಲಿ ಕಳೆದ ಬಾರಿ ಗೆದ್ದು ಎಂಎಲ್‌ಎ ಆದವ ಗೆದ್ದಾಗಿನಿಂದ ನಿಮ್ಮ ಜತೆ ಇಲ್ಲ, ಅವರು ಆನೆ ಬಿಟ್ಟು ಬಹಳ ದಿನ ಆಯ್ತು. ನಮ್ಮ ಅವಧಿಯಲ್ಲಿ ಆದ ರಸ್ತೆಗಳನ್ನು ಬಿಟ್ಟರೆ ಒಂದು ರಸ್ತೆ ಕೂಡ ಮಾಡಲು ಆಗಿಲ್ಲ, ನನ್ನ ಅವಧಿಯಲ್ಲಿ ಬಸ್‌ ನಿಲ್ದಾಣಕ್ಕೆ ಹಣ ಕೊಟ್ಟು ಕಾಮಗಾರಿ ಪ್ರಾರಂಭ ಮಾಡಿದೆವು ಈವರಗೂ ಅದು ಪೂರ್ಣಗೊಳಿಸಲು ಆಗಿಲ್ಲ, ನಾವೇ ಅಧಿಕಾರಕ್ಕೆ ಬಂದು ಉದ್ಘಾಟನೆ ಮಾಡಬೇಕಿದೆ ಎಂದು ಮಹೇಶ್‌ ಹೆಸರೇಳದೆ ಕಾಲೆಳದರು.

Latest Videos
Follow Us:
Download App:
  • android
  • ios