ವೈದ್ಯಕೀಯ ಉಪಕರಣ ಮಾಹಿತಿ ನೀಡಲು ಅಂಜಿಕೆ ಯಾಕೆ? ಸರ್ಕಾರಕ್ಕೆ ಬಾಣ ಬಿಟ್ಟ ಸಿದ್ದು
ರಾಜ್ಯದಲ್ಲಿ ಒಂದೆಡೆ ಕೊರೋನಾ ಅಬ್ಬರ ಜೋರಾಗುತ್ತಿದೆ. ಇದರ ಮಧ್ಯೆ ಕೊರೋನಾ ನಿಯಂತ್ರಣದ ಹೆಸರಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪ ಬಲವಾಗಿ ಕೇಳಿಬಂದಿದೆ. ಇದನ್ನು ಇಟ್ಟುಕೊಂಡು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಎಸ್‌ವೈ ಸರ್ಕಾರ ಕಟ್ಟಿಕಾಡುತ್ತಿದ್ದಾರೆ.
ಬೆಂಗಳೂರು, (ಜುಲೈ.07): ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣದ ಪರಿಕರಗಳ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದೆ ಎಂದು ಕೆಲ ದಿನಗಳ ಹಿಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಇದರ ಮುಂದುವರಿದ ಭಾಗವಾಗಿ ಸಿದ್ದರಾಮಯ್ಯ ಮತ್ತೆ ಅಬ್ಬರಿಸಿದ್ದು, ವೈದ್ಯಕೀಯ ಉಪಕರಣ ಖರೀದಿ ಮಾಹಿತಿ ನೀಡಲು ಅಂಜಿಕೆ ಯಾಕೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಪ್ರಶ್ನೆಯ ಬಾಣ ಬಿಟ್ಟಿದ್ದಾರೆ.
ಕೋವಿಡ್‌ನಿಂದ ದುಡ್ಡು ಮಾಡುವ ದಾರಿದ್ರ್ಯ ಬಂದಿಲ್ಲ: ಸಿದ್ದರಾಮಯ್ಯಗೆ ತಿರುಗೇಟು
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ವೈದ್ಯಕೀಯ ಉಪಕರಣ ಖರೀದಿಯಲ್ಲಿ ಅವ್ಯವಹಾರ ನಡೆದಿಲ್ಲ ಎಂದು ಹೇಳಿರುವ ಸಿಎಂ ಅವರು, ದಾಖಲೆಗಳನ್ನ ಪರಿಶೀಲಿಸು ವಿಧಾನಸೌಧಕ್ಕೆ ಆಹ್ವಾನಿಸಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಮಾಹಿತಿ ಕೋರಿ ಕನಿಷ್ಠ 20 ಬಾರಿ ಪತ್ರ ಬರೆದಿದ್ದೇನೆ. ಮೊದಲು ಅವುಗಳಿಗೆ ಉತ್ತರ ಕೊಡಿ. ಮಾಹಿತಿ ನೀಡಲು ಯಾಕೆ ಅಂಜಿಕೆ ಎಂದು ಈ ಹಿಂದೆ ತಾವು ಬರೆದ ಪತ್ರಗಳನ್ನು ಲಗತ್ತಿಸಿ ಪ್ರಶ್ನಿಸಿದ್ದಾರೆ.
ಬಾಯಿ ಮಾತಲ್ಲೇ ಸಚಿವರ ಸ್ಪಷ್ಟನೆ
ಹೌದು.... ಸಿದ್ದರಾಮಯ್ಯ ಅವರು ಮಾಡಿರುವ ಗಂಭೀರ ಆರೋಪಕ್ಕೆ ಸರ್ಕಾರದ ಪ್ರತಿನಿಧಿಗಳಾಗಿರುವ ಸಚಿವರುಗಳು, ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಬಾಯಿ ಮಾತಲ್ಲೇ ಹೇಳಿಕೆ ಕೊಡುತ್ತಿದ್ದಾರೆ. ಆದ್ರೆ, ಸಿಎಂ ಆಗಲಿ ಮಂತ್ರಿಗಳಾಗಲಿ ಉಪಕರಣ ಖರೀದಿ ಬಗ್ಗೆ ದಾಖಲೆ ಸಮೇತ ಮಾಹಿತಿ ಕೊಟ್ಟಿಲ್ಲ.
ಸಿದ್ದರಾಮಯ್ಯ ಆರೋಪಕ್ಕೆ ಯಾವ ತನಿಖೆಗೂ ಸಿದ್ಧ ಎಂದ ಮಾಜಿ ಶಿಷ್ಯ
ಸಿದ್ದರಾಮಯ್ಯಗೆ ಅಸ್ತ್ರವಾಯ್ತು
ನಿಜ...ಈ ಆರೋಪ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಒಂದು ರೀತಿಯಲ್ಲಿ ಅಸ್ತ್ರವಾಗ್ಬಿಟ್ಟಿದೆ. ಹೋದಲೆಲ್ಲ ಇದೇ ಆರೋಪವನ್ನು ಪುನರುಚ್ಚರಿಸುತ್ತಲೇ ಇದ್ದಾರೆ. ಎಲ್ಲಾ ಕರೆಕ್ಟ್ ಇದ್ರೆ ವಿರೋಧ ಪಕ್ಷದ ನಾಯಕನ ಆರೋಪಕ್ಕೆ ರಾಜ್ಯ ಸರ್ಕಾರ ದಾಖಲೆ ಸಮೇತ ಮಾಹಿತಿ ಕೊಟ್ಟು ಕೈತೊಳೆದುಕೊಳ್ಳಬಹುದಲ್ಲವೇ..?