ಬೆಂಗಳೂರು, (ಮಾ.23): ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ,  ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಮ್ಮ ಪಕ್ಷದ ನಾಯಕರುಗಳಿಗೆ ವಿಶೇಷ ಭೋಜನಕೂಟಕ್ಕೆ ಏರ್ಪಡಿಸಿದ್ದಾರೆ.

ನಾಳೆ ಅಂದ್ರೆ ಮಾರ್ಚ್ 24ರಂದು ಮಧ್ಯಾಹ್ನ  ತಮ್ಮ ಸರ್ಕಾರಿ ನಿವಾಸದಲ್ಲಿ ಔತಣಕೂಟ ಆಯೋಜಿಸಿದ್ದು, ಪಕ್ಷದ ಎಲ್ಲಾ ಶಾಸಕರು, ಸಂಸದರು, ಪರಿಷತ್ ಸದಸ್ಯರು, ರಾಜ್ಯಸಭಾ  ಹಾಗೂ ಹಿರಿಯ ನಾಯಕರುಗಳಿಗೆ ಆಹ್ವಾನ ನೀಡಿದ್ದಾರೆ. 

ಕಾಂಗ್ರೆಸ್​ಗೆ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರೆ ಎಂದ ಕಟೀಲ್‌ಗೆ ಗುದ್ದಿದ ಟಗರು

ಈ ದಿಢೀರ್ ಲಂಚ್ ಪಾರ್ಟಿ ವಿಶೇಷ ಏನು ಎನ್ನುವುದು ಮಾತ್ರ ಭಾರೀ ಚರ್ಚೆಗೆ ಗ್ರಾಸವಾಗಿದ್ರೆ, ಇನ್ನೂ ಕೆಲವರಿಗೆ ಕುತೂಹಲ ಮೂಡಿಸಿದೆ. ಇನ್ನು ಕೆಲವರು ಈ ಉಪಚುನಾವಣೆ ಹಾಗೂ ಮುಂಬರುವ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ತಮ್ಮ ವರ್ಚಸ್ಸು ಹೆಚ್ಚಿಸಲು ಪಕ್ಷದ ಹಿರಿಯ ನಾಯಕರ ವಿಶ್ವಾಸ ಗಳಿಸಲು ಮುಂದಾಗಿದ್ದಾರೆ ಎನ್ನತ್ತಿದ್ದಾರೆ.

 ಉಪಚುನಾವಣೆ ಘೋಷಣೆಯಾಗ್ತಿದ್ದಂತೆ ಸಿದ್ದರಾಮಯ್ಯ ಅವರು ಔತಣಕೂಟ ಏರ್ಪಡಿಸಿರೋದು ಚರ್ಚೆಗೆ ಗ್ರಾಸವಾಗಿದ್ರೆ, ಕೆಲ ಪ್ರಶ್ನೆಗಳು ಸಹ ಉದ್ಭವಿಸಿವೆ. ದಿಢೀರ್ ಅಂತ ಸಿದ್ದರಾಮಯ್ಯ ಯಾಕೆ ಈ ನಿರ್ಧಾರಕ್ಕೆ ಬಂದ್ರು? ಇದರ ಹಿಂದಿರೋ ರಾಜಕೀಯ ಲೆಕ್ಕಾಚಾರಗಳೇನು? ಅನ್ನೋದರ ಕುರಿತು ರಾಜ್ಯ ಕಾರಣಕಾರಣದಲ್ಲಿ ಚರ್ಚೆಗಳಾಗುತ್ತಿವೆ. 

ಇನ್ನು  ಪಕ್ಷದ ನಾಯಕರ ನಡುವೆ ಒಡಕಿದೆ, ಕಂದಕ ಏರ್ಪಟ್ಟಿದೆ, ಎರಡು ಬಣಗಳಾಗಿ ಕಾಂಗ್ರೆಸ್ ಇಬ್ಭಾಗ ಆಗಿದೆ ಎಂಬ ಆರೋಪಗಳಿವೆ. ಈ ಎಲ್ಲಾ ಆರೋಪಗಳಿಗೆ ವಿಪಕ್ಷ ಸಿದ್ದರಾಮಯ್ಯ ತೇಪೆ ಹಚ್ಚಲು ಮುಂದಾಗಿದ್ದಾರೆ ಎನ್ನಲಾಗಿದೆ.