ಬೆಂಗಳೂರು, (ಜುಲೈ.26):1999 ಜುಲೈ 26 ಅಂದ್ರೆ  21 ವರ್ಷಗಳ ಹಿಂದೆ ಪಾಕಿಸ್ತಾನದ ಸೇನೆ ಆಕ್ರಮಿಸಿಕೊಂಡಿದ್ದ ಕಾರ್ಗಿಲ್‌ ಪ್ರದೇಶವನ್ನು ಭಾರತೀಯ ಸೇನೆ ಮರಳಿ ವಶಕ್ಕೆ ಪಡೆದಿದ್ದರು. ಅಂದಿನಿಂದ  ಪ್ರತಿವರ್ಷ ಜುಲೈ 26ನ್ನು ಕಾರ್ಗಿಲ್ ವಿಜಯ್ ದಿವಸ ಎಂದು ಆಚರಿಸಲಾಗುತ್ತದೆ. 

ಈ ಕಾರ್ಗಿಲ್ ವಿಜಯ ದಿನದ ಅಂಗವಾಗಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹುತಾತ್ಮ ಯೋಧರ ತ್ಯಾಗವನ್ನು ಸ್ಮರಿಸಿದ್ದಾರೆ.

'ಟೈಗರ್ ಪರ್ವತದ ಮೇಲೆ ಧ್ವಜ ಹಾರಿಸಿ 21 ವರ್ಷ'  ದೇಶಾದ್ಯಂತ ಕಾರ್ಗಿಲ್ ವಿಜಯೋತ್ಸವ

ಸಿದ್ದರಾಮಯ್ಯ ಟ್ವೀಟ್ ಮಾಡಿ, ಯುದ್ಧ ಎಂದೆಂದೂ ನಡೆಯದಿರಲಿ, ಸೈನಿಕರ ಮನೆಯಲ್ಲಿ‌‌ಸಾವಿನ‌ ರೋದನ ಕೇಳದಿರಲಿ,
 ವಿಶ್ವ‌‌ದಲ್ಲಿ ಶಾಂತಿ‌-ಸಹಬಾಳ್ವೆ ಸದಾ ನೆಲೆಸಿರಲಿ.ಹುತಾತ್ಮ ವೀರಯೋಧರಿಗೆ ನನ್ನ ಗೌರವಪೂರ್ವಕ ಶ್ರದ್ಧಾಂಜಲಿ. ಹುತಾತ್ಮರ 
ಕುಟುಂಬಕ್ಕೆ ನನ್ನ ನಮನ ಎಂದು ಹೇಳಿದ್ದಾರೆ.

ಇನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿ, ಇಂದು ಕಾರ್ಗಿಲ್ ವಿಜಯ ದಿವಸ. ಇದು ಭಾರತದ ದಿಗ್ವಿಜಯದ 
ದಿನವೂ ಹೌದು. ಸವಾಲುಗಳ ನಡುವೆಯೂ  ಸಾಹಸ ಮೆರೆದ ಭಾರತೀಯ ಸಶಸ್ತ್ರ ಪಡೆಗಳ ಬಲಿದಾನವನ್ನು ನಾನು ಹೆಮ್ಮೆಯಿಂದ 
ಸ್ಮರಿಸುತ್ತೇನೆ. ದೇಶಕ್ಕಾಗಿ ಮಡಿದ ಯೋಧರ ಕುಟುಂಬಗಳ ತ್ಯಾಗವನ್ನು ಮನಃಪೂರ್ವಕವಾಗಿ ಗೌರವಿಸುತ್ತೇನೆ.  ಜೈ ಹಿಂದ್ ಎಂದಿದ್ದಾರೆ.