ರಾಜ್ಯಕ್ಕೆ ಬರುವ ಪ್ರಧಾನಿ ಮೋದಿಗೆ ಸಿದ್ದರಾಮಯ್ಯ 7 ಪ್ರಶ್ನೆ
ಬೆಂಗಳೂರು-ಮೈಸೂರು ಹೆದ್ದಾರಿ ಉದ್ಘಾಟನೆ ನೆಪದಲ್ಲಿ ಚುನಾವಣಾ ಪ್ರಚಾರಕ್ಕೆ ಬರುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ, ಸೋಲಿನ ಭೀತಿಯಿಂದ ಬಿಜೆಪಿಯು ತಮ್ಮನ್ನು ದೇಶದ ಪ್ರಧಾನಿ ಎಂಬುದನ್ನು ಮರೆತು ಚುನಾವಣೆ ಕೆಲಸಕ್ಕಾಗಿ ನೇಮಿಸಿದಂತಿದೆ.
ಬೆಂಗಳೂರು (ಮಾ.11): ‘ಬೆಂಗಳೂರು-ಮೈಸೂರು ಹೆದ್ದಾರಿ ಉದ್ಘಾಟನೆ ನೆಪದಲ್ಲಿ ಚುನಾವಣಾ ಪ್ರಚಾರಕ್ಕೆ ಬರುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ, ಸೋಲಿನ ಭೀತಿಯಿಂದ ಬಿಜೆಪಿಯು ತಮ್ಮನ್ನು ದೇಶದ ಪ್ರಧಾನಿ ಎಂಬುದನ್ನು ಮರೆತು ಚುನಾವಣೆ ಕೆಲಸಕ್ಕಾಗಿ ನೇಮಿಸಿದಂತಿದೆ. ಅಮಿತ್ ಶಾ ಖೊಕ್ ಕೊಟ್ಟತಕ್ಷಣ ಓಡಿ ಬರುವ ನಿಮ್ಮ ವರ್ತನೆಯಂತೂ ಚರಿತ್ರೆಯಲ್ಲಿ ದಯನೀಯವಾಗಿ ದಾಖಲಾಗುತ್ತದೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಪತ್ರಿಕಾ ಹೇಳಿಕೆ ಮೂಲಕ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿರುವ ಅವರು ತಮ್ಮ ಏಳು ಪ್ರಶ್ನೆಗಳಿಗೆ ಉತ್ತರಿಸುವಂತೆ ಸವಾಲು ಹಾಕಿದ್ದಾರೆ.
ಮೋದಿ ಅವರಿಗೆ ಸಿದ್ದರಾಮಯ್ಯ ಕೇಳಿರುವ ಪ್ರಶ್ನೆಗಳು ಇಂತಿವೆ:
1- ನೀವು ಬರುತ್ತೀರೆಂದು ಮಂಡ್ಯ ನಗರದಲ್ಲಿನ ಮರಗಳನ್ನೆಲ್ಲ ಕಡಿದು ಹಾಕಿರುವುದು ಏಕೆ?
2- ದೇಶದ ಜಿಡಿಪಿಗೆ ಬೆಂಗಳೂರು 2022ರಲ್ಲಿ 10 ಲಕ್ಷ ಕೋಟಿ ರು. ಅಮೂಲ್ಯ ಕೊಡುಗೆ ನೀಡಿದೆ. ಕೇಂದ್ರ ಸರ್ಕಾರ ಬೆಂಗಳೂರಿನ ಅಭಿವೃದ್ಧಿಗೆ ಏನು ಕೊಟ್ಟಿದೆ?
3- ಬೆಂಗಳೂರು ಮೇಲಿನ ಒತ್ತಡ ಮನಗಂಡು ನಾವು ಮೇಕೆದಾಟು ಯೋಜನೆಯನ್ನು ರೂಪಿಸಿ ಕೇಂದ್ರ ಸರ್ಕಾರಕ್ಕೆ ಕಳಿಸಿದ್ದೇವೆ. ಅದಕ್ಕೆ ಏಕೆ ಒಪ್ಪಿಗೆ ನೀಡಿಲ್ಲ?
ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಎಂದಿಗೂ ಒಂದಾಗೋಲ್ಲ: ನಳಿನ್ ಕುಮಾರ್ ಕಟೀಲ್
4- ಬೆಂಗಳೂರು ಮೈಸೂರು ಹೆದ್ದಾರಿ ನಿರ್ಮಾಣ ಘೋಷಿಸಿದ್ದು ಮನಮೋಹನ ಸಿಂಗ್ ಸರ್ಕಾರವಲ್ಲವೇ? ಯುಪಿಎ ಸರ್ಕಾರ 2014ರಲ್ಲಿ ಇನ್ ಪ್ರಿನ್ಸಿಪಲ್ ಹಣಕಾಸಿಗೆ ಅನುಮೋದನೆ ನೀಡಿದ್ದು ನಿಜವಲ್ಲವೆ? ಭೂ ಸ್ವಾಧೀನ ಮತ್ತು ಇತರ ಸೌಲಭ್ಯಗಳನ್ನು ನೀಡಿದ್ದು ರಾಜ್ಯ ಸರ್ಕಾರವಲ್ಲವೆ? ಈ ಯೋಜನೆಯಲ್ಲಿ ನಿಮ್ಮ ಕೇಂದ್ರ ಸರ್ಕಾರದ ಪಾತ್ರವೇನು?
6- ಬೆಂಗಳೂರಿನಿಂದ ಮೈಸೂರಿಗೆ ಸಣ್ಣ ಕಾರೊಂದು ಮೈಸೂರಿಗೆ ಹೋಗಿ ಬರಲು ಕನಿಷ್ಠ 500 ರು. ಪಾವತಿಸಬೇಕಾಗಿದೆ. ಟೋಲ…ಗಳನ್ನು ನಿರ್ಮಿಸಿ ಜನರನ್ನು ಅಡ್ಡಡ್ಡ ಸುಲಿಗೆ ಮಾಡುವುದು ಏಕೆ? ಟೋಲ್ ಕೈಬಿಡುತ್ತೀರಾ?
7- ಕರ್ನಾಟಕಕ್ಕೆ ರಸ್ತೆ ನಿರ್ಮಾಣಕ್ಕೆ ವರ್ಷಕ್ಕೆ 5 ಸಾವಿರ ಕೋಟಿ ರು. ನೀಡುತ್ತಿದ್ದೇವೆಂದು ಹೇಳಿಕೆ ನೀಡಿದ್ದೀರಿ, ನಮ್ಮ ಜನರು ಕಟ್ಟುವ ಟೋಲ್‌ನಿಂದ 4 ಸಾವಿರ ಕೋಟಿ ರು. ಲೂಟಿ ಹೊಡೆಯುತ್ತಿರುವುದನ್ನು ಏಕೆ ಹೇಳಿಲ್ಲ?