ಶೃಂಗೇರಿ: ಹಿಂದೂ ಬ್ರಿಗೇಡ್ ಪ್ರಮುಖರು ಬಿಜೆಪಿ ಸೇರ್ಪಡೆ, ಡಿಎನ್ ಜೀವರಾಜ್‌ಗೆ ಆನೆಬಲ!
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದಬಾರಿ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ ಅವರ ಗೆಲುವಿಗೆ ತೊಡಕಾಗಿದ್ದ ಹಿಂದೂಪರ ಸಂಘಟನೆ ಮುಖಂಡ ಖಾಂಡ್ಯ ಪ್ರವೀಣ್ ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಇತ್ತೀಚೆಗೆ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಇಬ್ಬರ ನಡುವೆ ನಡೆಸಿದ್ದ ಸಂಧಾನಕ್ಕೆ ಫಲ ಸಿಕ್ಕಂತಾಗಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು (ಏ.24) : ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದಬಾರಿ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ ಅವರ ಗೆಲುವಿಗೆ ತೊಡಕಾಗಿದ್ದ ಹಿಂದೂಪರ ಸಂಘಟನೆ ಮುಖಂಡ ಖಾಂಡ್ಯ ಪ್ರವೀಣ್ ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಇತ್ತೀಚೆಗೆ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಇಬ್ಬರ ನಡುವೆ ನಡೆಸಿದ್ದ ಸಂಧಾನಕ್ಕೆ ಫಲ ಸಿಕ್ಕಂತಾಗಿದೆ.
ಚಿಕ್ಕಮಗಳೂರು(Chikkamagaluru) ನಗರದ ಜಿಲ್ಲಾ ಬಿಜೆಪಿ ಕಚೇರಿ ಪಾಂಚನ್ಯದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ಹಾಗೂ ಈ ಬಾರಿಯೂ ಶೃಂಗೇರಿ ಕ್ಷೇತ್ರದ(Shringeri consittuency) ಬಿಜೆಪಿ ಅಭ್ಯರ್ಥಿಯಾಗಿರುವ ಡಿ.ಎನ್.ಜೀವರಾಜ್(BJP Candidate DN Jeevaraj) ನೇತೃತ್ವದಲ್ಲಿ ಪ್ರವೀಣ್ ಬಿಜೆಪಿ ಸೇರ್ಪಡೆಗೊಂಡರು. ಈ ವೇಳೆ ಮಾತನಾಡಿದ ಖಾಂಡ್ಯ ಪ್ರವೀಣ್(Khandya praveen) ಹಲವು ವರ್ಷಗಳ ಕಾಲ ನಾವೂ ಜೀವರಾಜ್ ಎಲ್ಲರೂ ಒಂದೇ ವಿಚಾರಕ್ಕೆ ಕೆಲಸ ಮಾಡುತ್ತಿದ್ದೆವು. ಆದರೆ ಒಂದು ಸಣ್ಣ ಬಿರುಕು ಉಂಟಾದಾಗ ಏನಾಗಬಹುದು ಅದು ಘಟಿಸಿತ್ತು. ಅದನ್ನು ಸರಿಮಾಡುವ ಕೆಲಸವನ್ನು ಹಿರಿಯರು ಮಾಡಿದ್ದಾರೆ. ಅದಕ್ಕೆ ಇಂದು ಪೂರ್ಣಪ್ರಮಾಣದ ಸ್ವರೂಪ ಇಲ್ಲಿ ಸಿಕ್ಕಿದೆ ಎಂದರು.
ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ; 'ಇದು ಭಾಗ್ಯ ಇದು ಭಾಗ್ಯವಯ್ಯ' ದಾಸರ ಕೀರ್ತನೆ ಹೇಳಿದ ಡಿಕೆಶಿ
ನಮಗೆ ಗೌರವಪೂರ್ವಕವಾದ ಸ್ವಾಗತವನ್ನು ಕೊಟ್ಟಿದ್ದೀರಿ, ನಮ್ಮ ಮೇಲೆ ವಿಶ್ವಾಸವನ್ನೂ ಇಟ್ಟಿದ್ದೀರಿ. ಅದನ್ನು ನಾವೂ ನಮ್ಮ ಕಾರ್ಯಕರ್ತರ ತಂಡ ಉಳಿಸಿಕೊಂಡು ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಸಂತೋಷದ ಕ್ಷಣ : ಜೀವರಾಜ್
ಶೃಂಗೇರಿ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ ಮಾತನಾಡಿ, ಇದೊಂದು ಸಂತೋಷದ ಕ್ಷಣ. ಇಂದು ಸೇರ್ಪಡೆಗೊಂಡಿರುವವರು ಯಾರೂ ಬಿಜೆಪಿಗೆ ಹೊಸಬರಲ್ಲ. ನಮ್ಮ ವಿಚಾರವನ್ನು ಅವರಿಗೆ ಹೇಳಿಕೊಡಬೇಕಾದಂತವರೂ ಅಲ್ಲ. ನಮ್ಮ ಅವರ ವಿಚಾರಗಳೆರಡೂ ಒಂದೇ ಆದರೆ ಬಹಳ ಪ್ರೀತಿ ಇದ್ದಾಗ ಸ್ವಲ್ಪ ಜಗಳ ಇರುತ್ತದೆ. ಅದು ಅವಶ್ಯಕತೆಗಿಂತ ಜಾಸ್ತಿ ಆಗಿತ್ತಷ್ಟೇ, ಜೀವನದಲ್ಲಿ ಕೆಲವೊಂದು ಸಾರಿ ಹೀಗೆಲ್ಲಾ ಆಗುತ್ತದೆ. ಅದನ್ನು ಅವರೂ ಮರೆತು, ನಾವೂ ಮರೆತು ಕ್ಷೇತ್ರ, ರಾಜ್ಯದ ಒಳಿತಿಗೆ ನರೇಂದ್ರ ಮೋದಿ(Narendra Modi) ಅವರ ಕೈ ಬಲಪಡಿಸುವಂತಹ ನಿಟ್ಟಿನಲ್ಲಿ ನಾವೆಲ್ಲಾ ಪ್ರೀತಿಯಿಂದ ಒಟ್ಟಾಗಿದ್ದೇವೆ. ಅವರಿಗೆ ಕ್ಷೇತ್ರದ ಪರಿಚಯ ಮತ್ತು ಜನರ ಪರಿಚಯ ಇರುವುದರಿಂದ ಉಳಿದ 14 ದಿನಗಳಲ್ಲಿ ಪಕ್ಷದ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಬಿಜೆಪಿಯ ಗೆಲುವಿಗಾಗಿ ಶ್ರಮಿಸುತ್ತಾರೆ ಎಂದರು.
ನಾವು ಪ್ರವೀಣ್ ಖಾಂಡ್ಯ ಅವರೆಲ್ಲ ಒಟ್ಟಾಗಿದ್ದಾಗ ಅತೀ ಹೆಚ್ಚು ಮತಗಳಿಂದ ಗೆದ್ದಿದ್ದೆವು. ಅದೇ ರೀತಿಯ 2004 ರ ಗೆಲುವು ಈ ಬಾರಿಯೂ ಆಗಲಿದೆ ಎನ್ನುವ ಭರವಸೆ ಇದೆ. ಇವರೆಲ್ಲರ ಸೇರ್ಪಡೆ ಯುವ ಶಕ್ತಿಗೆ ಮತ್ತೊಂದು ಹುರುಪು ತಂದಿದೆ ಎಂದರು.
100 ಕೋಟಿ ಮಂದಿ ಆಲಿಸಿದ ಏಕೈಕ ಕಾರ್ಯಕ್ರಮ ಮನ್ ಕಿ ಬಾತ್, ಸಮೀಕ್ಷಾ ವರದಿಯಲ್ಲಿ ಬಹಿರಂಗ!
ಕಳೆದ 5 ವರ್ಷದ ಹಿಂದೆ ಲಕ್ಕಿ ಡಿಪ್‌ನಲ್ಲಿ ನಮಗೊಬ್ಬರು ಶಾಸಕರು ಸಿಕ್ಕಿದರು. ಕೊನೇವರೆಗೆ ಅವರು ಇನ್ನೊಂದು ಲಕ್ಕಿಡಿಪ್ ಹೊಡಿಬಹುದು ಎಂದು ಕಾಯುತ್ತಿದ್ದರು. ಅದಕ್ಕೆ ನಿಷೇಧ ಹೇರುವ ಕೆಲಸವನ್ನು ಸಂಘದ ಹಿರಿಯರು ಮಾಡಿದ್ದಾರೆ. ಅದರ ಫಲಿತಾಂಶವನ್ನು ಮೇ.13 ರಂದು ನಿಮ್ಮೆಲ್ಲರ ಮುಂದಿಡುತ್ತೇವೆ. ಜೀವರಾಜ್ ಅವರನ್ನು ಅತ್ಯಂತ ಹೆಚ್ಚು ಮತಗಳಿಂದ ಗೆಲ್ಲಿಸಿಕೊಂಡು ಬರುತ್ತೇವೆ. ಖಾಂಡ್ಯ ಪ್ರವೀಣ್ ಬಿಜೆಪಿ ಸೇರ್ಪಡೆಯಿಂದ ಶೃಂಗೇರಿ ಕ್ಷೇತ್ರದಲ್ಲಿ ಹಲವರ ಬಾಯಿ ಮುಚ್ಚಿಸಿದೆ. ಇನ್ನುಮುಂದೆ ಕ್ಷೇತ್ರದಲ್ಲಿ ಬೇರೆ ರೀತಿಯ ಚರ್ಚೆ ಆರಂಭವಾಗುತ್ತದೆ. ನಾವು ಗೆಲ್ಲುತ್ತೇವೆ ಎನ್ನುತ್ತಿದ್ದವರು ಬಿಜೆಪಿ ಗೆಲ್ಲುತ್ತದೆ ಎನ್ನಲಾರಂಭಿಸುತ್ತಾರೆ. ಪ್ರವೀಣ್ ಸೇರ್ಪಡೆ ನಮ್ಮ ಪಕ್ಷಕ್ಕೆ ಆನೆ ಬಲ ತಂದಿದೆ. ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಧೂಳೀಪಟವಾಗಲಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಎಚ್.ಸಿ.ಕಲ್ಮರುಡಪ್ಪ ತಿಳಿಸಿದರು.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.