ಬೆಳಗಾವಿ(ಮಾ.24): ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿದ್ರೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂದು ದಿ.ಸುರೇಶ್ ಅಂಗಡಿ ಅವರ ಪುತ್ರಿ, ಜಗದೀಶ್ ಶೆಟ್ಟರ್ ಸೊಸೆ ಶ್ರದ್ಧಾ ಶೆಟ್ಟರ್ ಹೇಳಿದ್ದಾರೆ. 

ಇಂದು(ಬುಧವಾರ) ನಗರದ ಸಾಂಬ್ರಾ ಏರ್‌ಪೋರ್ಟ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಲೋಕಭಾ ಉಪಚುನಾವಣೆಗೆ ಸ್ಪರ್ಧಿಸಲು ನಾನು ಮಾನಸಿಕವಾಗಿ ಸಿದ್ಧನಿದ್ದೇನೆ. ಮೊನ್ನೆ ಕೋರ್ ಕಮೀಟಿಯಲ್ಲ ನಮ್ಮ ಕುಟುಂಬಕ್ಕೆ ಟಿಕೆಟ್ ನೀಡುವ ಬಗ್ಗೆ ಚರ್ಚೆಯಾಗಿದೆ. ಬೇರೆ ಅಭ್ಯರ್ಥಿಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ. ಹೈಕಮಾಂಡ್ ಈಗ ನಿರ್ಧಾರ ತೆಗೆದುಕೊಳ್ಳಬೇಕು. ಹೈಕಮಾಂಡ್ ನಿರ್ಧಾರವೇ ಅಂತಿಮವಾಗಿರಲಿದೆ ಎಂದು ತಿಳಿಸಿದ್ದಾರೆ. 

ಚುನಾವಣೆಗೆ ಸ್ಪರ್ಧಿಸಬೇಕೆಂದು ಅಭಿಮಾನಿಗಳ ಒತ್ತಾಯ ಇದ್ದು, ಈ ಬಗ್ಗೆ ಹೈಕಮಾಂಡ್‌ಗೂ ಮನವರಿಕೆ ಮಾಡಲಾಗಿದೆ. ಹೈಕಮಾಂಡ್‌ವೇ ಅಂತಿಮ ನಿರ್ಣಯವನ್ನ ತೆಗೆದುಕೊಳ್ಳಲಿದೆ. ಚುನಾವಣೆಗೆ ಸ್ಪರ್ಧಿಸಬೇಕೆಂದು ಅಭಿಮಾನಿಗಳ ಒತ್ತಡವೂ ಇದೆ. ಹೈಕಮಾಂಡ್‌ಗೆ ಎಲ್ಲಾ ಪ್ರಸ್ತಾಪ ಮಾಡಿದ್ದೇವೆ. ಇನ್ನೆರಡು ದಿನಗಳಲ್ಲಿ ನಿಮಗೂ ಗೊತ್ತಾಗುತ್ತೆ ಎಂದು ಹೇಳಿದ್ದಾರೆ.

ಬೆಳಗಾವಿ ಬೈ ಎಲೆಕ್ಷನ್‌ಗೆ ಅಭ್ಯರ್ಥಿ ಘೋಷಣೆಯಾಗಿಲ್ಲ, ಆಗಲೇ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ ಸ್ವಾಮೀಜಿ

ನಾನು ದೆಹಲಿಗೇನೂ ಹೋಗಿರಲಿಲ್ಲ, ಬೆಂಗಳೂರಿನಲ್ಲಿಯೇ ಇದ್ದೆ, ಹೈಕಮಾಂಡ್ ಅಥವಾ ಪಕ್ಷದ ವರಿಷ್ಠರು ಯಾರೂ ಮಾತನಾಡಿಲ್ಲ, ಟಿಕೆಟ್ ಬಗ್ಗೆಯೂ ಏನೂ ಚರ್ಚೆ ಆಗಿಲ್ಲ. ಕುಟುಂಬಕ್ಕೆ ಅವಕಾಶ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ ಅಂತ ಹೇಳಿದ್ದೇವೆ. ಪಕ್ಷ ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಿದ್ದೇವೆ. ನಮ್ಮ ತಂದೆ ಜನರ ಜೊತೆ ಒಳ್ಳೆಯ ಸಂಪರ್ಕ ಇಟ್ಟುಕೊಂಡಿದ್ರು, ಅಭಿಮಾನಿಗಳು ಕರೆದ ಸಮಾರಂಭಗಳಿಗೆ ಹೋಗುತ್ತಿದ್ದೇವೆ. ಮುಂದೆಯೂ ಅಭಿಮಾನಿಗಳ ಜತೆ ಸಂಪರ್ಕ ಬೆಳೆಸಿಕೊಂಡು ಹೋಗುತ್ತೇವೆ. ತಂದೆಯವರ ಜೊತೆಗಿದ್ದ ಎಲ್ಲರ ಜೊತೆಯೂ ನಾವು ಇರುತ್ತೇವೆ. ಹೈಕಮಾಂಡ್ ನಿರ್ಣಯವೇ ಅಂತಿಮ ಟಿಕೆಟ್ ನೀಡಿದ್ರೆ ಸ್ಪರ್ಧೆಗೆ ಸಿದ್ಧ ಅಂತ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಮಾರ್ಚ್ 23 ನಾಮಪತ್ರ
ಮಾ.30 ನಾಮಪತ್ರ ಸಲ್ಲಿಕೆ ಕೊನೆ ದಿನ
ಏ.3 ನಾಮಪತ್ರ ವಾಪಸ್ ಕೊನೆ ದಿನ
ಏ.17 ಮತದಾನ ಮೇ.2ಕ್ಕೆ ಫಲಿತಾಂಶ