ರಾಷ್ಟ್ರಾಧ್ಯಂತ ಪಕ್ಷ ಸಂಘಟನೆಗಾಗಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ‘ಭಾರತ್ ಜೋಡೋ’ ಹೆಸರಿನಲ್ಲಿ ಪಾದಯಾತ್ರೆ ನಡೆಸುತ್ತಿರುವಾಗಲೇ ಗೋವಾದಲ್ಲಿ ಕಾಂಗ್ರೆಸ್ಸಿಗೆ ಭರ್ಜರಿ ಆಘಾತವಾಗಿದೆ. ಪಕ್ಷದ 11 ಶಾಸಕರ ಪೈಕಿ 8 ಮಂದಿ ಬಿಜೆಪಿಗೆ ಪಕ್ಷಾಂತರ ಮಾಡಿದ್ದಾರೆ.
ಪಿಟಿಐ ಪಣಜಿ (ಸೆ.15) : ರಾಷ್ಟ್ರಾಧ್ಯಂತ ಪಕ್ಷ ಸಂಘಟನೆಗಾಗಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ‘ಭಾರತ್ ಜೋಡೋ’ ಹೆಸರಿನಲ್ಲಿ ಪಾದಯಾತ್ರೆ ನಡೆಸುತ್ತಿರುವಾಗಲೇ ಗೋವಾದಲ್ಲಿ ಕಾಂಗ್ರೆಸ್ಸಿಗೆ ಭರ್ಜರಿ ಆಘಾತವಾಗಿದೆ. ಪಕ್ಷದ 11 ಶಾಸಕರ ಪೈಕಿ 8 ಮಂದಿ ಬಿಜೆಪಿಗೆ ಪಕ್ಷಾಂತರ ಮಾಡಿದ್ದಾರೆ. ಇದರಿಂದಾಗಿ 20 ಸದಸ್ಯರನ್ನು ಹೊಂದಿದ್ದ ಬಿಜೆಪಿಯ ಬಲ 28ಕ್ಕೇರಿಕೆಯಾಗಿದೆ. ಪಕ್ಷೇತರರು ಸೇರಿ 5 ಶಾಸಕರ ಬೆಂಬಲ ಈ ಮೊದಲೇ ಇರುವುದರಿಂದ ಬಿಜೆಪಿ ಸರ್ಕಾರ 33 ಸದಸ್ಯರ ಬೆಂಬಲದೊಂದಿಗೆ ಭರ್ಜರಿ ಬಹುಮತ ಗಳಿಸಿದಂತಾಗಿದೆ.
\Bharat Jodo Yatra ಮಕ್ಕಳ ದುರ್ಬಳಕೆ, ರಾಹುಲ್ ಗಾಂಧಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಮಕ್ಕಳ ಆಯೋಗ !
ಕಾಂಗ್ರೆಸ್ ತೊರೆದ 8 ಶಾಸಕರ ಪೈಕಿ ಮಾಜಿ ಮುಖ್ಯಮಂತ್ರಿ ದಿಗಂಬರ ಕಾಮತ್ ಅವರೂ ಇದ್ದಾರೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಶೇಟ್ ತಾನಾವಡೆ ಸಮ್ಮುಖದಲ್ಲಿ ಈ ಎಂಟೂ ಮಂದಿ ಪಕ್ಷ ಸೇರ್ಪಡೆಯಾಗಿದ್ದಾರೆ. ಮೂರನೇ ಎರಡಕ್ಕಿಂತ ಹೆಚ್ಚು ಶಾಸಕರು ಪಕ್ಷ ತೊರೆದಿರುವುದರಿಂದ ಅವರಿಗೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುವುದಿಲ್ಲ. ಗೋವಾ ಕಾಂಗ್ರೆಸ್ಸಿನಲ್ಲಿ ಈಗ ಕೇವಲ ಮೂರು ಶಾಸಕರು ಮಾತ್ರವೇ ಉಳಿದಂತಾಗಿದೆ.
2019ರಲ್ಲಿ ಬರೋಬ್ಬರಿ 10 ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ಆನಂತರ ಕಾಂಗ್ರೆಸ್ಸಿಗೆ ಪ್ರವಾಸಿಗರ ರಾಜ್ಯದಲ್ಲಿ ಆಗುತ್ತಿರುವ ಎರಡನೇ ಅತಿದೊಡ್ಡ ಆಘಾತ ಇದಾಗಿದೆ.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಗೋವಾ ಸಿಎಂ ಪ್ರಮೋದ್ ಸಾವಂತ್, ಕಾಂಗ್ರೆಸ್ ಛೋಡೋ (ತೊರೆಯುವುದು) ಯಾತ್ರೆ ಗೋವಾದಲ್ಲಿ ಈಗ ಆರಂಭವಾಗಿದೆ ಎಂದು ಲೇವಡಿ ಮಾಡಿದ್ದಾರೆ. ಶಾಸಕರ ಪಕ್ಷಾಂತರವನ್ನು ಕೆಸರೆರಚಾಟದ ಆಪರೇಷನ್ ಎಂದು ಮೂದಲಿಸಿರುವ ಕಾಂಗ್ರೆಸ್, ಭಾರತ್ ಜೋಡೋ ಯಾತ್ರೆ ಯಶಸ್ಸು ಸಹಿಸಲಾರದೆ ಇಷ್ಟುದಿನ ಸ್ಥಗಿತಗೊಂಡಿದ್ದ ಪಕ್ಷಾಂತರ ಪರ್ವವನ್ನು ಬಿಜೆಪಿ ಪುನಾರಂಭಿಸಿದೆ ಎಂದು ಟಾಂಗ್ ಕೊಟ್ಟಿದೆ.
'ಭಾರತ್ ಜೋಡೋ ಅಲ್ಲ ಇದು ಸೀಟ್ ಜೋಡೋ..' ಕಾರ್ಟೂನ್ ಮೂಲಕ ಕಾಂಗ್ರೆಸ್‌ಗೆ ತಿವಿದ ಕಮ್ಯುನಿಸ್ಟರು!
ನಿರ್ಣಯ ಅಂಗೀಕಾರ:
ಕಾಂಗ್ರೆಸ್ ತೊರೆಯುವ ಮುನ್ನ 8 ಶಾಸಕರು ಶಾಸಕಾಂಗ ಪಕ್ಷದ ಸಭೆ ನಡೆಸಿ ಪಕ್ಷವನ್ನು ಬಿಜೆಪಿ ಜತೆಗೆ ವಿಲೀನಗೊಳಿಸುವ ನಿರ್ಣಯವನ್ನು ಕೈಗೊಂಡಿದ್ದಾರೆ. 11 ಶಾಸಕರ ಪೈಕಿ ಮೂರು ಶಾಸಕರು ಈ ಸಭೆಯಿಂದ ದೂರ ಉಳಿಯುವ ಮೂಲಕ ಕಾಂಗ್ರೆಸ್ಸಿನಲ್ಲೇ ಉಳಿಯುವುದಾಗಿ ಘೋಷಿಸಿಕೊಂಡಿದ್ದಾರೆ. ಗೋವಾ ವಿಧಾನಸಭೆಯಲ್ಲಿ 40 ಸ್ಥಾನಗಳು ಇದ್ದು, ಬಹುಮತಕ್ಕೆ 21 ಶಾಸಕರು ಬೇಕು. ಕಳೆದ ಮಾಚ್‌ರ್‍ನಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಯಿಂದ 20 ಶಾಸಕರು ಗೆದ್ದಿದ್ದರು. ಮಹಾರಾಷ್ಟ್ರ ಗೋಮಾಂತಕ್ ಪಕ್ಷದ ಇಬ್ಬರು ಹಾಗೂ ಮೂವರು ಪಕ್ಷೇತರರ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚನೆ ಮಾಡಿತ್ತು.
