ಕೋಲ್ಕತ್ತ (ಮಾ.05): ಆರ್‌ಜೆಡಿ, ಸಮಾಜವಾದಿ ಪಕ್ಷದ ಬಳಿಕ ಇದೀಗ ಶಿವಸೇನೆ ಸಹ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದೆ, ತೃಣಮೂಲಕ ಕಾಂಗ್ರೆಸ್‌ ಪರಮೋಚ್ಚ ನಾಯಕಿ ಮಮತಾ ಬ್ಯಾನರ್ಜಿಗೆ ಬೆಂಬಲ ನೀಡುವುದಾಗಿ ಘೋಷಿಸಿದೆ. 

ಈ ಮೂಲಕ ಪಶ್ಚಿಮ ಬಂಗಾಳದಲ್ಲೂ ಶಿವಸೇನೆ ಬಿಜೆಪಿಗೆ ಸೆಡ್ಡು ಹೊಡೆದಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಶಿವಸೇನೆ ಸಂಸದ ಸಂಜಯ್‌ ರಾವುತ್‌, ‘ಶಿವಸೇನೆ ಬಂಗಾಳದಲ್ಲಿ ಸ್ಪರ್ಧಿಸುತ್ತಾ ಅಥವಾ ಇಲ್ಲವೇ ಎಂಬ ಬಗ್ಗೆ ಹಲವರಿಗೆ ಕುತೂಹಲ ಇತ್ತು. 

 

ಸದ್ಯ ಬಂಗಾಳಲ್ಲಿ ಹಣ, ತೋಳ್ಬಲ, ಮಾಧ್ಯಮ ಎಲ್ಲವೂ ಮಮತಾ ದೀದಿಯ ವಿರುದ್ಧವಾಗಿವೆ. ಆದರೆ ಶಿವಸೇನೆ ಬಂಗಾಳದಲ್ಲಿ ಸ್ಪರ್ಧಿಸದೆ ಟಿಎಂಸಿಗೆ ತನ್ನ ಬೆಂಬಲ ನೀಡಲು ನಿರ್ಧರಿಸಿದೆ. ಮಮತಾ ದೀದಿಗೆ ಘರ್ಜಿಸುವ ಜಯ ಸಿಗಲಿ ಎಂಬುದು ನಮ್ಮ ಆಶಯ. ಏಕೆಂದರೆ ದೀದಿ ಬಂಗಾಳ ನಿಜವಾದ ಹೆಣ್ಣು ಹುಲಿ ಎಂದು ನಾವು ಭಾವಿಸಿದ್ದೇವೆ’ ಎಂದು ಹೇಳಿದ್ದಾರೆ.