Asianet Suvarna News Asianet Suvarna News

Council election Karnataka : ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತ : ಬಿಜೆಪಿ ಅಭ್ಯರ್ಥಿ ವಿಶ್ವಾಸ

  •  ಪರಿಷತ್‌ ಚುನಾವಣೆಯಲ್ಲಿ ಸ್ಪರ್ಧಿಸಿರುವ ತಮ್ಮ ಪರವಾಗಿ ನಿರೀಕ್ಷೆಗೂ ಮೀರಿ ಬೆಂಬಲ
  •  ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ
Shivamogga BJP MLC Candidate DS arun hopes about winning snr
Author
Bengaluru, First Published Nov 30, 2021, 6:20 AM IST

 ಶಿವಮೊಗ್ಗ (ನ.30):  ಪರಿಷತ್‌ ಚುನಾವಣೆಯಲ್ಲಿ (MLC Electopn) ಸ್ಪರ್ಧಿಸಿರುವ ತಮ್ಮ ಪರವಾಗಿ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗುತ್ತಿದ್ದು, ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಬಿಜೆಪಿ ಅಭ್ಯರ್ಥಿ ಡಿ.ಎಸ್‌. ಅರುಣ್‌ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಜಿಲ್ಲೆಯೂ ಸೇರಿದಂತೆ ಒಟ್ಟು 10 ವಿಧಾನ ಸಭಾ ಕ್ಷೇತ್ರಗಳು ನಮ್ಮ ವ್ಯಾಪ್ತಿಗೆ ಬರುತ್ತಿದೆ. ಅದರಲ್ಲಿ 9 ಮಂದಿ ಬಿಜೆಪಿ (BJp) ಶಾಸಕರೇ ಇದ್ದಾರೆ. ಇವರೆಲ್ಲರೂ ಕೂಡ ಪ್ರಚಾರ ಕೈಗೊಂಡಿದ್ದಾರೆ. ಜೊತೆಗೆ ಪಕ್ಷದ ಹಿರಿಯರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಸಚಿವ ಕೆ.ಎಸ್‌. ಈಶ್ವರಪ್ಪ ಕೂಡ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ. ಸರ್ಕಾರದ ಸಾಧನೆಗಳನ್ನು ಮತದಾರರಿಗೆ ಹೇಳುವ ಮೂಲಕ ತಮ್ಮ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ ಎಂದರು.

ವಿಶೇಷವಾಗಿ ಪಕ್ಷದ ಕಾರ್ಯಕರ್ತರ ಪಡೆ ಪ್ರಬಲವಾಗಿದೆ. ಎಲ್ಲೆಡೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಟಡಿದ್ದಾರೆ. ಪಕ್ಷದ ಹಿರಿಯರ ಸಹಕಾರದೊಂದಿಗೆ ಈ ಬಾರಿ ವಿಧಾನ ಪರಿಷತ್‌ ಚುನಾವಣೆಗೆ (Election) ಸ್ಪರ್ಧಿಸಿರುವ ತಾವು ಕನಿಷ್ಠ ಮೂರು ಸಾವಿರಕ್ಕೂ ಹೆಚ್ಚು ಮತ ಪಡೆದು ಗೆಲವು ಸಾಧಿಸುವ ವಿಶ್ವಾಸ ತಮಗಿದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶಗಳಿಗೆ ಇನ್ನಷ್ಟುಸೌಲಭ್ಯ ದೊರಕಿಸಿಕೊಡಬೇಕೆಂಬುದು ತಮ್ಮ ಪ್ರಮುಖ ಉದ್ದೇಶವಾಗಿದೆ. ಮುಖ್ಯವಾಗಿ ಶಿಕ್ಷಣ, ಆರೋಗ್ಯ (Health), ಸ್ವಚ್ಛತೆ ಪ್ರಮುಖ ವಿಷಯಗಳಾಗಿದ್ದು, ತಾವು ಆಯ್ಕೆಯಾದರೆ ಈ ಮೂರು ಅಂಶಗಳಿಗು ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದರು.

ಪ್ರಮುಖವಾಗಿ ಸರ್ಕಾರದ ಯೋಜನೆಗಳು ಗ್ರಾಮೀಣ ಭಾಗವನ್ನು ತಲುಪಬೇಕಿದೆ. ಇದಕ್ಕಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಶಿಬಿರಗಳನ್ನು ಏರ್ಪಡಿಸಿ ಸೌಲ» ಮತ್ತಷ್ಟುಹೆಚ್ಚಲು ಅಗತ್ಯ ವಾತಾವರಣ ರೂಪಿಸಬೇಕು. ಸಾಧ್ಯವಾದರೆ, ಸೌಹಾರ್ದ ವೇದಿಕೆಗಳನ್ನು ಸ್ಥಾಪಿಸಬೇಕು ಎಂಬುದು ಅಭಿಲಾಷೆಯಾಗಿದೆ. ಜೊತೆಗೆ ಗ್ರಾಮೀಣ (Rural) ಭಾಗದಲ್ಲಿ ಮೂಲ ಸೌಕರ್ಯಗಳ ಸಮಸ್ಯೆ ಇದೆ. ಬಗರ್‌ ಹುಕುಂ ಸಮಸ್ಯೆ ಇನ್ನೂ ಇದೆ. ಈ ಎಲ್ಲದಕ್ಕೂ ಪರಿಹಾರವ ಕಲ್ಪಿಸಲು ಬಿಜೆಪಿ ಸರ್ಕಾರ ಈಗಾಗಲೇ ಕ್ರಮಕೈಗೊಂಡಿದೆ ಎಂದರು.

ತಮ್ಮ ಕ್ಷೇತ್ರದಲ್ಲಿ 4166 ಮತಗಳಿವೆ. ಇದರಲ್ಲಿ ಶೇ. 93.5 ರಷ್ಟುಗ್ರಾಮ ಪಂಚಾಯಿತಿ ಸದಸ್ಯರೇ ಇದ್ದಾರೆ. ಇನ್ನುಳಿದಂತೆ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಸದಸ್ಯರಿದ್ದಾರೆ. ಈ ಬಾರಿ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚಾಗಿ ಗೆಲುವು ಸಾಧಿಸಿದ್ದಾರೆ. ಇದರಿಂದಾಗಿ ಫಲಿತಾಂಶ ತಮ್ಮ ಪರವಾಗಿರುತ್ತದೆ ಎಂಬ ವಿಶ್ವಾಸವಿದೆ ಎಂದರು.

ಗ್ರಾಮ ಪಂಚಾಯಿತಿಗಳ  (Grama Panchayat) ಅಭಿವೃದ್ಧಿ ಜೊತೆಗೆ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೂ ಹೆಚ್ಚು ಒತ್ತು ನೀಡುತ್ತೇನೆ. ನಗರ ಮಟ್ಟದಲ್ಲಿ ಜನಪ್ರತಿನಿಧಿಗಳಿಗೆ ಭದ್ರತೆ ಇಲ್ಲ ಎಂಬ ಮಾತು ಕೇಳಿಬರುತ್ತಿವೆ. ಇವುಗಳನ್ನು ನಿವಾರಣೆ ಮಾಡಿ ಪ್ರತಿಯೊಬ್ಬರಿಗೂ ಆರೊಗ್ಯ ಕಾರ್ಡ್‌ ಸೇರಿದಂತೆ ಹಲವು ಸೌಲಭ್ಯಗಳನ್ನು ವಿಸ್ತರಿಸಲು ಪ್ರಯತ್ನ ಪಡುತ್ತೇನೆ. ಗ್ರಾಮ ಪಂಚಾಯಿತಿ ಸದಸ್ಯರ ಗೌರವಧನ ಪ್ರಸ್ತುತ ಒಂದು ಸಾವಿರ ರು. ಇದೆ. ಅದನ್ನು ಎರಡು ಸಾವಿರ ರು.ಗೆ ಹೆಚ್ಚಳ ಮಾಡುವ ಕುರಿತು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.

ಶಿವಮೊಗ್ಗ (Shivamogga) ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಹಾಗಾಗಿ ಜೆಡಿಎಸ್‌ ಬೆಂಬಲಿತ ಸದಸ್ಯರು ಕೂಡ ತಮಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಅವರ ನೆರವನ್ನು ಕೂಡ ತಾವು ಪಡೆಯುವುದಾಗಿ ತಿಳಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್‌, ಎಸ್‌. ದತ್ತಾತ್ರಿ, ಶಿವರಾಜ್‌, ಹೃಷಿಕೇಶ್‌ ಪೈ, ನಾಗರಾಜ್‌, ಪವಿತ್ರಾ ರಾಮಯ್ಯ, ಕೆ.ವಿ. ಅಣ್ಣಪ್ಪ ಸೇರಿದಂತೆ ಹಲವರಿದ್ದರು.

ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ಮಾಯಕೊಂಡ ಸೇರಿದಂತೆ ಜಿಲ್ಲೆಯ ಎಲ್ಲ ಮತದಾರರನ್ನು ಭೇಟಿಯಾಗಿ ಮತಯಾಚನೆ ಮಾಡುವ ಕಾರ್ಯ ನಡೆದಿದೆ. ಉಳಿದ 11 ದಿನಗಳಲ್ಲಿ ಎಲ್ಲ 365 ಗ್ರಾಮ ಪಂಚಾಯಿತಿಗಳನ್ನು ನಾವು ತಲುಪುತ್ತೇವೆ. ಗೆಲುವು ಸಾಧಿಸುವ ವಿಶ್ವಾಸ ತಮಗಿದೆ

- ಡಿ.ಎಸ್‌.ಅರುಣ್‌, ಬಿಜೆಪಿ ಅಭ್ಯರ್ಥಿ

Follow Us:
Download App:
  • android
  • ios