ಶಿವಾಜಿ ಪ್ರತಿಮೆಗೆ ಅಡ್ಡಿಪಡಿಸಿಲ್ಲ, ಕೀಳು ರಾಜಕೀಯ ಮಾಡಲ್ಲ: ರಮೇಶ್‌ ಜಾರಕಿಹೊಳಿ

ನಾನು ತಾಲೂಕಿನ ರಾಜಹಂಸಗಡದಲ್ಲಿ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಾಣಕ್ಕೆ ಅಡ್ಡಿ ಪಡಿಸಿಲ್ಲ. ಹಣ ಬಿಡುಗಡೆ ಮಾಡದಂತೆ ತಡೆದಿಲ್ಲ. ಇದು ಕಾಂಗ್ರೆಸ್‌ ಪಕ್ಷದ ಕುತಂತ್ರ ಎಂದು ಹರಿಹಾಯ್ದಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ.

Shivajis statue was not disturbed he did not do low politics says ramesh jarkiholi gvd

ಬೆಳಗಾವಿ (ಫೆ.26): ನಾನು ತಾಲೂಕಿನ ರಾಜಹಂಸಗಡದಲ್ಲಿ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಾಣಕ್ಕೆ ಅಡ್ಡಿ ಪಡಿಸಿಲ್ಲ. ಹಣ ಬಿಡುಗಡೆ ಮಾಡದಂತೆ ತಡೆದಿಲ್ಲ. ಇದು ಕಾಂಗ್ರೆಸ್‌ ಪಕ್ಷದ ಕುತಂತ್ರ ಎಂದು ಹರಿಹಾಯ್ದಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ, ‘ನಾನು ಎಂದಿಗೂ ಕೀಳುಮಟ್ಟದ ರಾಜಕೀಯ ಮಾಡಿಲ್ಲ. ಕೀಳುಮಟ್ಟದ ರಾಜಕೀಯ ಮಾಡಿದ್ದರೆ ಆ ತಾಯಿ ಕೊಲ್ಹಾಪುರ ಮಹಾಲಕ್ಷ್ಮಿ ನೋಡಿಕೊಳ್ಳಲಿ’ ಎಂದಿದ್ದಾರೆ.

ನಾನು ಶಿವಾಜಿ ಪ್ರತಿಮೆ ಅಭಿವೃದ್ಧಿ ಕಾಮಗಾರಿಗಳ ಹಣ ಬಿಡುಗಡೆಗೆ ನಾನು ಅಡ್ಡಿಪಡಿಸಲಿಲ್ಲ. ಈ ಬಗ್ಗೆ ಕಾಂಗ್ರೆಸ್‌ ಶಾಸಕರು ಮಾಡಿರುವ ಆರೋಪ ಸುಳ್ಳು. ಅಂದು ಪ್ರವಾಸೋದ್ಯಮ ಸಚಿವರಿಗೆ ನಾನು ಎಂದಿಗೂ ಈ ಬಗ್ಗೆ ಒತ್ತಡ ಹೇರಲಿಲ್ಲ. ರಾಜಹಂಸಗಡ ಶಿವಾಜಿ ಪ್ರತಿಮೆ ಕುರಿತು ನಾವು ಎಂದಿಗೂ ಮಾತನಾಡಲಿಲ್ಲ. ಆದರೆ ಕಾಂಗ್ರೆಸ್‌ನವರು ಅದನ್ನು ಕಾಂಗ್ರೆಸ್‌ಮಯ ಮಾಡಲು ತೀರ್ಮಾನಿಸಿದರು. ಆಗ ನಾವು ಅಲ್ಲಿಗೆ ಹೋಗಬೇಕಾಯಿತು ಎಂದರು.

ಸಿಎಂ ಹುದ್ದೆ ಆಕಾಂಕ್ಷಿ ಪರಂಗೆ ಈ ಬಾರಿ ಅದೃಷ್ಟ ಒಲಿಯುತ್ತಾ?: ಠಕ್ಕರ್‌ ನೀಡಲು ಜೆಡಿಎಸ್‌, ಕಾಂಗ್ರೆಸ್‌ ತಂತ್ರ

ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಮಾ.2ರಂದು ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ. ಇದು ಸರ್ಕಾರಿ ಕಾರ್ಯಕ್ರಮವಾಗಿದ್ದು, ಶಿಷ್ಟಾಚಾರದ ಪ್ರಕಾರವೇ ನಡೆಯುತ್ತದೆ ಎಂದು ಹೇಳಿದರು. ‘ಸ್ಥಳೀಯ ಶಾಸಕರ (ಲಕ್ಷ್ಮಿ ಹೆಬ್ಬಾಳ್ಕರ್‌) ಜೊತೆಗೆ ವೇದಿಕೆ ಹಂಚಿಕೊಳ್ಳಲು ಸಿದ್ಧರಿದ್ದೀರಾ?’ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ರೆಡಿ ಇದ್ದೇನಿ. ಅವರೇನು ನಮ್ಮ ವೈರಿನಾ? ಅವರು ನಮ್ಮ ಶಾಸಕರು. ಯುದ್ಧ ಮಾಡುವ ಟೈಂನಲ್ಲಿ ಯುದ್ಧ ಮಾಡೋಣ ಈ ವಿಚಾರದಲ್ಲಿ ಬೇಡ’ ಎಂದು ಹೇಳಿದರು.

ಮರಾಠ ಸಮಾಜದವರು ಬಹಳ ಬುದ್ಧಿವಂತರು. ಇಂತಹ ಭಾವನಾತ್ಮಕವಾಗಿ ಪ್ರಚೋದಿಸುವವರಿಗೆ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ. ಫೆ.27 ಹಾಗೂ ಮಾ.2ರ ಮಹತ್ವದ ಕಾರ್ಯಕ್ರಮ ಮುಗಿದ ನಂತರ ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದಲ್ಲಿ ಚುನಾವಣೆ ಗೆಲ್ಲಲು ಕಾರ್ಯತಂತ್ರ ಹೆಣೆಯಲಾಗುವುದು. ಮಾ.2ರ ಬಳಿಕ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಹೇಗೆ ಕೆಲಸ ಮಾಡಬೇಕೆಂದು ಚೌಕಟ್ಟು ಹಾಕುತ್ತೇವೆ. ಹಾಗೇ ಕೆಲಸ ಮಾಡುತ್ತೇವೆ. ಯಾವ ಗ್ರಾಮದಲ್ಲಿ ಯಾರು ಇರಬೇಕು? ಯಾರು ಉಸ್ತುವಾರಿ ತೆಗೆದುಕೊಳ್ಳಬೇಕು ಎಂಬ ನಿರ್ಣಯ ಕೈಗೊಳ್ಳಲಾಗುವುದು ಎಂದರು.

ಅದು ಬಿಜೆಪಿ ಕಾರ್ಯಕ್ರಮ ಅಲ್ಲ. ಸರ್ಕಾರಿ ಕಾರ್ಯಕ್ರಮ. ಶಿಷ್ಟಾಚಾರದ ಅನುಗುಣವಾಗಿ ಕೆಲಸ ಆಗುತ್ತದೆ. ಆ ಶಾಸಕರಿಗೆ ಸಿಗುವಂತಹ ಮರ್ಯಾದೆ ಸಿಗಬೇಕು. ಒಳ್ಳೆಯ ರೀತಿ ಕಾರ್ಯಕ್ರಮ ಆಗಬೇಕು. ಕಾರ್ಯಕ್ರಮಕ್ಕೆ ನೀವು ಬರುತ್ತಿರಾ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ಕಾರ್ಯಕ್ರಮಕ್ಕೆ ಬರುತ್ತೇನೆ. ಇಡೀ ಜಿಲ್ಲೆಯ ಶಾಸಕರಿಗೆ ಆಹ್ವಾನ ಮಾಡಬೇಕಾಗಿದೆ. ನಾನು ಆ ದಿನ ಸಿಎಂ ಜೊತೆ ಬೆಂಗಳೂರಿನಿಂದ ಬರುತ್ತೇನೆ ಎಂದರು. ಸ್ಥಳೀಯ ಶಾಸಕರ ಜೊತೆಗೆ ವೇದಿಕೆ ಹಂಚಿಕೊಳ್ಳಲು ರೆಡಿನಾ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ರೆಡಿ ಇದ್ದೇನಿ. 

ಅವರೇನು ನಮ್ಮ ವೈರಿನಾ? ಅವರು ನಮ್ಮ ಶಾಸಕರು. ಅಷ್ಟುಕೀಳು ಮಟ್ಟದ ರಾಜಕಾರಣ ಮಾಡಬಾರದು. ಅವರು ಶಾಸಕರು ಅವರಿಗೆ ಸಿಗಬೇಕಾದ ಗೌರವ ಸಿಗಬೇಕು. ಯುದ್ಧ ಮಾಡುವ ಟೈಂನಲ್ಲಿ ಯುದ್ಧ ಮಾಡೋಣ ಈ ವಿಚಾರದಲ್ಲಿ ಬೇಡ ಎಂದು ತಿಳಿಸಿದರು. ರಾಜಹಂಸಗಡ ಕೋಟೆ ಅಭಿವೃದ್ಧಿಯಲ್ಲಿ ಭ್ರಷ್ಟಾಚಾರ ಆದ ಬಗ್ಗೆ ಮಾಹಿತಿ ಇಲ್ಲ. ಆರ್‌ಟಿಐ ಅಡಿ ದಾಖಲೆ ಪಡೆದು ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ. ಕಾಂಗ್ರೆಸ್‌ ಜಿಲ್ಲಾ ಭವನ ಕಟ್ಟಡ ಕಟ್ಟಿಸುವ ವೇಳೆ ದುಡ್ಡು ತಿಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಚುನಾವಣೆಗೆ ಕರೆತರುವ ಉದ್ದೇಶದಿಂದ ಮಠಾಧೀಶರ ಭೇಟಿಯಾಗಿಲ್ಲ: ಯಡಿಯೂರಪ್ಪ

ಕಾಂಗ್ರೆಸ್‌ ಪಕ್ಷದಲ್ಲಿ ನಾನಿದ್ದಾಗ ಉಸ್ತುವಾರಿ ಸಚಿವನಿದ್ದ ವೇಳೆ ಕಾಂಗ್ರೆಸ್‌ ಕಚೇರಿ ಕಟ್ಟಡ ಕಟ್ಟಿಸುತ್ತಿದ್ದೇವು. ಅದರಲ್ಲೂ ದುಡ್ಡು ತಿಂದಿದ್ದಾರೆ. ಬೇಕಿದ್ರೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ವಿನಯ್‌ ನಾವಲಗಟ್ಟಿಕೇಳಿ. ದೊಡ್ಡ ದೊಡ್ಡ ಮಾತನಾಡುತ್ತಾರೆ. ಯಾರು ತಿಂದಾರೆ ತಿಳಿದುಕೊಳ್ಳಲಿ. ಯಾರು ದುಡ್ಡು ತಿಂದಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ, ಬ್ಯಾಗ್‌ ಹಿಡಿಯೋರು, ಬಾಗಿಲು ಕಾಯೋರು ದುಡ್ಡು ತಿಂದಿದ್ದಾರೆ ಎಂದು ಪರೋಕ್ಷವಾಗಿ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ವಿರುದ್ಧ ಆರೋಪಿಸಿದರು.

Latest Videos
Follow Us:
Download App:
  • android
  • ios