ಸೊಂಟಕ್ಕೆ 7.5 ಲಕ್ಷ ಕಟ್ಟಿಕೊಂಡು ಬೈಕ್‌ನಲ್ಲಿ ಹೊರಟರು : ಆದ್ರೂ ಪೊಲೀಸರಿಗೆ ಸಿಕ್ಕಿಬಿದ್ದರು
ಪೊಲೀಸರ ಚೆಕ್‌ಪೋಸ್ಟ್‌ನಿಂದ ತಪ್ಪಿಸಿಕೊಳ್ಳಲು ಸೊಂಟಕ್ಕೆ 7.5 ಲಕ್ಷ ರೂ. ಹಣವನ್ನು ಸೊಂಟಕ್ಕೆ ಕಟ್ಟಿಕೊಂಡು ಬೈಕ್‌ನಲ್ಲಿ ಹೊರಟಿದ್ದ ವ್ಯಕ್ತಿಗಳು, ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ದಾವಣಗೆರೆ (ಏ.06): ಪೊಲೀಸರ ಚೆಕ್‌ಪೋಸ್ಟ್‌ನಿಂದ ತಪ್ಪಿಸಿಕೊಳ್ಳಲು ಸೊಂಟಕ್ಕೆ 7.5 ಲಕ್ಷ ರೂ. ಹಣವನ್ನು ಸೊಂಟಕ್ಕೆ ಕಟ್ಟಿಕೊಂಡು ಬೈಕ್‌ನಲ್ಲಿ ಹೊರಟಿದ್ದ ವ್ಯಕ್ತಿಗಳು, ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಆದರೆ, ಅವರ ಚಾಲಾಕಿ ಕಾರ್ಯ ನೋಡಿದರೆ ನಿವೂ ಕೂಡ ಆಶ್ಚರ್ಯವಾಗುವುದು ಗ್ಯಾರಂಟಿ..
ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ 2023ರ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯಾದ್ಯಂತ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ 50 ಸಾವಿರ ರೂ.ಗಿಂತ ಹೆಚ್ಚು ಮೊತ್ತದ ನಗದು ಹಣ ಸಾಗಣೆ ಮಾಡಲು ಕಡ್ಡಾಯವಾಗಿ ದಾಖಲೆಗಳನ್ನು ಕೊಂಡೊಯ್ಯಬೇಕು. ಆದರೆ, ದಾವಣಗೆರೆಯಲ್ಲೊಬ್ಬ ವ್ಯಕ್ತಿ ಚೆಕ್‌ಪೋಸ್ಟ್‌ನಲ್ಲಿದ್ದ ಪೊಲೀಸರ ಕಣ್ತಪ್ಪಿಸಿ ದಾಖಲೆಗಳಿಲ್ಲದ 7.5 ಲಕ್ಷ ರೂ.ಗಳನ್ನು ಕೊಂಡೊಯ್ಯಲು ಹೊಸದೊಂದು ಪ್ರಯತ್ನ ಮಾಡಿದ್ದಾನೆ. ಎಲ್ಲ ನೋಟುಗಳ ಕಂತೆಗಳನ್ನು ಹಗ್ಗದಲ್ಲಿ ಕಟ್ಟಿ ಅದನ್ನು ಸೊಂಟಕ್ಕೆ ಕಟ್ಟಿಕೊಂಡು ಬೈಕ್‌ನಲ್ಲಿ ಹೋಗಿದ್ದಾನೆ. ಆದರೂ ಆತನ ನಡೆಯನ್ನು ನೊಡಿ ಪೊಲೀಸರು ವಿಚಾರಣೆ ನಡೆಸಿದಾಗ ದಾಖಲೆ ಇಲ್ಲದ ಹಣ ಸಾಗಿಸುತ್ತಿರುವುದು ಪತ್ತೆಯಾಗಿದೆ.
ಕಾಂಗ್ರೆಸ್ ಜಾತಿ ಲೆಕ್ಕ : 166 ಕ್ಷೇತ್ರಗಳಲ್ಲಿ ಲಿಂಗಾಯತರು ರಾಕ್- ಕುರುಬ ಸಮುದಾಯಕ್ಕೆ ಕೊಕ್
ಜೀನಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ಘಟನೆ: ಈ ಘಟನೆಯು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ನ್ಯಾಮತಿ ಬಳಿಯ ಜೀನಹಳ್ಳಿ ಚೆಕ್ ಪೊಸ್ಟ್‌ನಲ್ಲಿ ನಡೆದಿದೆ. ಇನ್ನು ದಾಖಲೆ ಇಲ್ಲದೆ ಬೈಕ್‌ನಲ್ಲಿ ಸಾಗಿಸುತ್ತಿದ್ದ 7.5 ಲಕ್ಷ ರೂ. ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಈ ಹಣವನ್ನು ಸಾಗಿಸುತ್ತಿದ್ದ ವ್ಯಕ್ತಿ ಸೊಂಟದ ಸುತ್ತ ಹಣ ಇಟ್ಟುಕೊಂಡು ಹೋಗುತ್ತಿದ್ದನು. ಇನ್ನು ಆತನ ಹಿಂದೆ ಮತ್ತಿಬ್ಬರು ಕುಳಿತುಕೊಂಡಿದ್ದರು. ಬೈಕ್ ಮೇಲೆ ತೆರಳುತ್ತಿದ್ದ ಇವರ ನಡವಳಿಕೆಯನ್ನು ನೋಡಿದ ಪೊಲೀಸರು ವೇಳೆ ಶಂಕೆಯಿಂದ ತಪಾಸಣೆ ಮಾಡಿದ್ದಾರೆ. ಈ ವೇಳೆ ಒಬ್ಬ ವ್ಯಕ್ತಿಯ ಸೊಂಟದಲ್ಲಿ ಹಗ್ಗದಲ್ಲಿ ಹಣವಿರುವುದು ಕಂಡುಬಂದಿದೆ.
ಹಣಕ್ಕೆ ದಾಖಲೆ ಕೊಡದೇ ಸಬೂಬು: ಇನ್ನು ಬೈಕ್‌ನಲ್ಲಿ ಹಣವನ್ನು ಕಟ್ಟಿಕೊಂಡು ಹೋಗುತ್ತಿದ್ದ ವ್ಯಕ್ತಿಗಳನ್ನು ಸೈಫುಲ್ಲಾ ಮತ್ತು ಕುಮಾರ್ ಎಂದು ಗುರುತಿಸಲಾಗಿದೆ. ಸೈಫುಲ್ಲಾ, ಮತ್ತು ಕುಮಾರ್ ಇವರಿಬ್ಬರೂ ಶಿಕಾರಿಪುರ ಮೂಲದವರು ಎನ್ನಲಾಗಿದೆ. ವಿಚಾರಣೆ ವೇಳೆ ಸರಿಯಾದ ಮಾಹಿತಿ ನೀಡಿಲ್ಲ. ನಿನ್ನೆ ತಡರಾತ್ರಿ ನಡೆದ ಘಟನೆಯ ಬಗ್ಗೆ ಚುನಾವಣಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಇವರು ತಾವು ದಾವಣಗೆರೆ ಹಾಗೂ ಹೊನ್ನಾಳಿಯಿಂದ ಬಂದಿದ್ದೇವೆ ಎಂಬ ಗೊಂದಲದ ಹೇಳಿಕೆ ನೀಡಿದ್ದಾರೆ. ಇನ್ನು ದಾಖಲೆ ನೀಡುವಂತೆ ಕೇಳಿದರೂ ದಾಖಲೆ ತೋರಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.
ಕಾಂಗ್ರೆಸ್ 2ನೇ ಪಟ್ಟಿ ಬಿಡುಗಡೆ: 42 ಕ್ಷೇತ್ರಗಳ ಅಭ್ಯರ್ಥಿಗಳು ಇಲ್ಲಿದ್ದಾರೆ ನೋಡಿ..
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.